Anjeer Uses: ಮನೆಯ ಹಿತ್ತಲಲ್ಲಿ ಅಂಜೂರ ಹಣ್ಣಿನ ಮರ ಇದ್ದರೆ ಕಡಿಯುವ ಯೋಚನೆ ಮಾಡಬೇಡಿ ಏಕಂದರೆ ಈ ಹಣ್ಣು ತಿನ್ನಲು ರುಚಿ ಮಾತ್ರವಲ್ಲದೇ ಆರೋಗ್ಯಕ್ಕೂ ತುಂಬಾನೆ ಪ್ರಯೋಜನಕಾರಿಯಾಗಿದೆ. ಈ ಹಣ್ಣು ಒಂದೆರಡು ಸಮಸ್ಯೆಯಲ್ಲದೇ ಹಲವಾರು ಆರೋಗ್ಯ  ಸಮಸ್ಯೆ ಶಮನಗೊಳಿಸಲು ಸಹಕಾರಿಯಾಗಿದೆ. 


COMMERCIAL BREAK
SCROLL TO CONTINUE READING

ಈ ಹಣ್ಣಿನಲ್ಲಿ ವಿಟಮಿನ್‌ ಎ, ವಿಟಮಿನ್‌ ಸಿ, ಕಬ್ಬಿಣ,  ಪೊಟಾಶಿಯಂ ಹಾಗೂ ಇನ್ನಿತರ ಖನಿಜಾಂಶಗಳನ್ನು  ಮತ್ತು ಅಪಾರ ಪ್ರಮಾಣದ ಪೆಕ್ಟಿನ್ ಅಂಶವು ಇರುವುದು ಕಂಡುಬಂದಿದೆ. 


ಆರೋಗ್ಯಕ್ಕೆ  ಅಂಜೂರ ಹಣ್ಣು


ಕೊಲೆಸ್ಟ್ರಾಲ್ ನಿಯಂತ್ರಣ
ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾದಂತೆ ಹೃದಯಘಾತ ಹೆಚ್ಚು ಆಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಅಂಜೂರ ಹಣ್ಣಿನಲ್ಲಿರುವ  ಪೆಕ್ಟಿನ್ ಅಂಶವು ಕೊಲೆಸ್ಟ್ರಾಲ್ ನ್ನು ಹೆಚ್ಚಾಗದಂತೆ ತಡೆಯುತ್ತದೆ. 


ಇದನ್ನೂ ಓದಿ: Thumbe Hoovu: ತುಂಬೆ ಗಿಡದ ತುಂಬೆಲ್ಲ ತುಂಬಿದೆ  ಔಷಧಿಗುಣ


ತೂಕ ಇಳಿಕೆ
ಅಂಜೂರ ಹಣ್ಣಿನಲ್ಲಿರುವ ಪೈಬರ್‌ ಅಂಶವು ಹೆಚ್ಚಾಗಿ ದೇಹದ ತೂಕ ಇಳಿಕೆಗೆ ಸಹಕಾರಿಯಾಗಿದೆ.


ಕ್ಯಾನ್ಸರ್ ನಿಯಂತ್ರಣ
ಅಂಜೂರ ಹಣ್ಣುಗಳು ಕ್ಯಾನ್ಸರ್ ನಿಯಂತ್ರಿಸುವ ಶಕ್ತಿ ಹೊಂದಿದೆ. ಪ್ರತಿದಿನ ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಕೇವಲ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೇ  ದೇಹದ ದುರ್ಬಲತೆ  ಹಾಗೂ   ಆಯಾಸವನ್ನು ನಿಯಂತ್ರಿಸುತ್ತದೆ.


ಇದನ್ನೂ ಓದಿ: ಸೊಳ್ಳೆ ಓಡಿಸಲು ಲಿಕ್ವಿಡ್ ಬಳಸುತ್ತೀರಾ? ಆರೋಗ್ಯಕ್ಕೆ ಆಗೋ ಹಾನಿ ಗೊತ್ತಾದ್ರೆ ಹತ್ತಿರ ಕೂಡ ಹೋಗಲ್ಲ!


ಉತ್ತಮ ತ್ವಚೆಗಾಗಿ ಅಂಜೂರ
ಆರೋಗ್ಯ ಮಾತ್ರ ಪ್ರಯೋಜನಕಾರಿಯಾಗಿರದೇ ಇದರ ಸೇವನೆ ಹಾಗೂ ಈ ಹಣ್ಣಿನಿಂದ ವಾರಕ್ಕೆ  ಎರಡು ಬಾರಿ  ಫೇಸ್ ಪ್ಯಾಕ್ ಅಥವಾ ಅಂಜೂರವನ್ನು ನೆನೆಸಿಟ್ಟು ರುಬ್ಬಿ ಪೇಸ್ಟ್ ಮಾಡಿ, ಮೂರು ಹನಿ ಬಾದಾಮಿ ಎಣ್ಣೆ ಹಾಕಿ ಮುಖಕ್ಕೆ ಹಚ್ಚುವುದರಿಂದ ಉತ್ತಮ ತ್ವಚೆಯ ಜೊತೆಗೆ  ಸೌಂದರ್ಯ ವೃದ್ಧಿಯಾಗುತ್ತದೆ.


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.