Thumbe Hoovu: ತುಂಬೆ ಗಿಡದ ತುಂಬೆಲ್ಲ ತುಂಬಿದೆ  ಔಷಧಿಗುಣ

Health tips: ತುಂಬೆ ಗಿಡ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗುಣ ಹೊಂದಿದೆ. ಅಂದರೆ ಅದರಲ್ಲಿ ಅಗಾಧ ಔಷಧಿಗುಣ ಅಡಕವಾಗಿದೆ. ಹಳ್ಳಿಗಳಲ್ಲಿ ಸರ್ವೇಸಾಮಾನ್ಯವಾಗಿ ಇದರ ಪರಿಚಯದ ಜೊತೆಗೆ ಔಷಧಿ ಗುಣಗಳನ್ನು ಕಂಡುಕೊಂಡಿರುತ್ತಾರೆ. ಹಾಗಿದ್ದರೇ ಈ ಸಸ್ಯ  ಯಾವ ಯಾವ ರೋಗಕ್ಕೆ ಮದ್ದಾಗಿದೆ ನೋಡೊಣ.. 

Written by - Zee Kannada News Desk | Last Updated : Mar 25, 2023, 01:12 PM IST
  • ತುಂಬೆಗಿಡದಲ್ಲಿ ಹೇರಳವಾಗಿದೆ ಔಷಧಿಗುಣ
    ಜಂತುಹುಳುವನ್ನು ನಿವಾರಿಸುವಲ್ಲಿ ತುಂಬೆಗಿಡ ಔಷಧಿ
  • ಇದರ ಬಳಕೆಯಿಂದ ಮುಖದ ಮೇಲಿನ ಕಪ್ಪು ಕಲೆ ನಿಯಂತ್ರಣ
Thumbe Hoovu: ತುಂಬೆ ಗಿಡದ ತುಂಬೆಲ್ಲ ತುಂಬಿದೆ  ಔಷಧಿಗುಣ title=

Health tips: ತುಂಬೆ ಗಿಡ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗುಣ ಹೊಂದಿದೆ. ಅಂದರೆ ಅದರಲ್ಲಿ ಅಗಾಧ ಔಷಧಿಗುಣ ಅಡಕವಾಗಿದೆ. ಹಳ್ಳಿಗಳಲ್ಲಿ ಸರ್ವೇಸಾಮಾನ್ಯವಾಗಿ   ಇದರ ಪರಿಚಯದ ಜೊತೆಗೆ ಇದರ ಔಷಧಿ ಗುಣಗಳನ್ನು ಕಂಡುಕೊಂಡಿರುತ್ತಾರೆ. ಹಾಗಿದ್ದರೇ ಈ ಸಸ್ಯ ಯಾವ ಯಾವ ರೋಗಕ್ಕೆ ಮದ್ದಾಗಿದೆ ನೋಡೊಣ.. 

ಜ್ವರ ಹಾಗೂ ನೆಗಡಿ ನಿಯಂತ್ರಣ
ವಾತಾವರಣದಲ್ಲಿ ಬದಲಾವಣೆ ಆಗುತ್ತಿದ್ದಂತೆ  ಪ್ರತಿ ವಯಸ್ಕರಲ್ಲಿ  ಜ್ವರ ನೆಗಡಿ ಶುರುವಾಗುತ್ತದೆ. ಅದಕ್ಕೆ ಸುಲಭ ಪರಿಹಾರವಾಗಿ ತುಂಬೆ ಗಿಡದ ಎಲೆಯ ರಸದ ಜೊತೆಗೆ  ಕಾಳು ಮೆಣಸಿನ ಬೆರೆಸಿ ಕುಡಿಯುವುದರಿಂದ ಜ್ವರ ಅಥವಾ ನೆಗಡಿ ಶಮನಗೊಳ್ಳುತ್ತದೆ. 

ಇದನ್ನೂ ಓದಿ: Hair Care Tips : ನಿಮ್ಮ ಕೂದಲು ಉದುರಲು ಕಾರಣ ನೀವು ಮಾಡುವ ಈ 5 ತಪ್ಪುಗಳು!

ಮೈ ಕೈ ನೋವಿಗೆ ಪರಿಹಾರ 
ಕೆಲವೊಂದು ಬಾರಿ ತೀರ ದಣಿವಾದಾಗ ಕೈ ಕಾಲುಗಳ ಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಒಂದಷ್ಟು ತುಂಬೆ ಗಿಡದ ಕಾಂಡಗಳನ್ನು ನೀರಿನಲ್ಲಿ  ಚೆನ್ನಾಗಿ ಕುದಿಸಿದ ನೀರಿನಿಂದ ನೋವು ಇರುವ ಜಾಗಕ್ಕೆ ಬಟ್ಟೆಯಿಂದ ಒತ್ತಿಕೊಳ್ಳುವುದರಿಂದ ಮೈ ಕೈ ನೋವು ನಿಯಂತ್ರಣಕ್ಕೆ ಬರುತ್ತದೆ. 

ಕಣ್ಣಿನ ಸಮಸ್ಯೆಗೆ ಪರಿಹಾರ
ಕೆಲಸದ ಒತ್ತಡ  ಮನಸ್ಸಿಗೆ ಮಾತ್ರವಲ್ಲದೇ ಅದು ದೇಹದ ಮೇಲೂ ಪರಿಣಾಮ ಬೀರುತ್ತದೆ. ಅದರಲ್ಲೂ ಅದರ ಲಕ್ಷಣ ಹೆಚ್ಚಾಗಿ ಕಣ್ಣಿನ ಮೇಲೆ ಬ್ಲಾಕ್‌ ಸರ್ಕಲ್‌ ಆಗಿ  ಮುಖದ ಸೌಂದರ್ಯ ಕಡೆಸುತ್ತದೆ. ಅದಕ್ಕೆ ಪರಿಹಾರವಾಗಿ ಹಾಲಿನ ಜೊತೆ ತುಂಬೆ ರಸವನ್ನು ಪ್ರತಿ ನಿತ್ಯ ಹಚ್ಚುವುದರಿಂದ  ಕಾಲ ಕ್ರಮೇಣ ಕಪ್ಪು ಕಲೆಗಳು ನಿಯಂತ್ರಣಕ್ಕೆ ಬರುತ್ತದೆ. 

ಇದನ್ನೂ ಓದಿ: Egg : ಒಂದು ದಿನದಲ್ಲಿ ಎಷ್ಟು ಮೊಟ್ಟೆ ತಿನ್ನಬೇಕು? ಹೆಚ್ಚಿಗೆ ತಿಂದರೆ ಏನಾಗುತ್ತೆ? ಇಲ್ಲಿದೆ ನೋಡಿ

ಜೀರ್ಣಕ್ರಿಯೆಗೆ ಸಹಾಕಾರಿ
ಕೆಲವೊಂದು ಬಾರಿ ತಿಂದ ಊಟ ಜೀರ್ಣವಾಗದೇ ಇರಬಹುದು ಅದು ಆಗಾಗ ವಾಕರಿಗೆ, ಹೊಟ್ಟೆ ನೋವಿಗೆ ಕಾರಣವಾಗಬಹುದು. ಆ ಸಮಯದಲ್ಲಿ ತುಂಬೆ ಎಲೆಯ ಜೊತೆಗೆ ಸ್ವಲ್ಪ ಉಪ್ಪು ಹಾಕಿ ಕುದಿಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. 

ಜಂತುಹುಳು ಸಮಸ್ಯೆಗೆ ಮದ್ದು 
ಮಕ್ಕಳಲ್ಲಿ ಜಂತುಹುಳುವಿನ ಸಮಸ್ಯೆ ನಿವಾರಿಸಲು ಇದನ್ನು ಮನೆಮದ್ದಾಗಿ ಬಳಸಬಹುದು. ತುಂಬೆ ಹೂ ಹಾಗೂ ಎಲೆಯನ್ನು ಜಜ್ಜಿ ಅದರ ರಸಕ್ಕೆ 2 ಹನಿ ಜೇನುತುಪ್ಪ ಬೆರೆಸಿ ಕುಡಿಸಿದರೆ ಮಕ್ಕಳಿಗೆ ಹೊಟ್ಟೆ ಹುಳ ಸಂಪೂರ್ಣ ನಶಿಸುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News