Free Health Camp: ಮಾರ್ಚ್ 18ರಂದು ಮಾಧ್ಯಮದವರಿಗೆ ಉಚಿತ ಆರೋಗ್ಯ ಶಿಬಿರ !
ನಗರದ ಪ್ರೆಸ್‌ಕ್ಲಬ್ ಆವರಣದಲ್ಲಿ ಮಾಧ್ಯಮದವರು ಹಾಗೂ ಕುಟುಂಬಸ್ಥರಿಗೆ ಮಾರ್ಚ್ 18ರಂದು 9 ಗಂಟೆಯಿಂದ ಮಧ್ಯಾಹ್ನ 3ರವರೆಗೆ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧ ವಿತರಣೆ ಶಿಬಿರ ಆಯೋಜಿಸಲಾಗಿದೆ.
ಬೆಂಗಳೂರು: ಮಾಧ್ಯಮ ಮತ್ತು ಅವರ ಕುಟುಂಬದ ಕಾಳಜಿ ದೃಷ್ಟಿಯಿಂದ ಇದೇ ಮಾರ್ಚ್ 18 9ಗಂಟೆಗೆ ಕರ್ನಾಟಕ ವಿಡಿಯೊ ಜರ್ನಲಿಸ್ಟ್ ಅಸೋಸಿಯೇಷನ್, ಹಾರ್ಟ್ ಮೆಡಿಕಲ್ ಸೆಂಟರ್, ಚೈಲ್ಡ್ ವಿಕಾಸ್ ಫೌಂಡೇಶನ್ ಹಾಗೂ ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ಸಹಯೋಗದಲ್ಲಿ ನಗರದ ಪ್ರೆಸ್‌ಕ್ಲಬ್ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿರತಣೆ ಶಿಬಿರ ಆಯೋಜಿಸಲಾಗಿದೆ.
ಇದನ್ನೂ ಓದಿ: ಕೆಮ್ಮು ಜ್ವರ ಈಗ ಸಾಮಾನ್ಯ ! ಆದರೆ H3N2 ಮತ್ತು ಕೋವಿಡ್ 19 ನಡುವಿನ ವ್ಯತ್ಯಾಸ ಪತ್ತೆ ಹಚ್ಚುವುದು ಹೇಗೆ ?
ಈ ಉಚಿತ ಶಿಬಿರದಲ್ಲಿ ತಜ್ಞ ವೈದ್ಯರು ಹೃದ್ರೋಗ, ಮೊಣಕಾಲು ನೋವು, ಬೆನ್ನು ನೋವು, ಮಧುಮೇಹ ಇನ್ನಿತರ ಆರೋಗ್ಯ ಸಮಸ್ಯೆಗಳ ಕುರಿತು ತಪಾಸಣೆ ನಡೆಸಲಿದ್ದಾರೆ. ಅಲ್ಲದೆ ಇದೆ ವೇಳೆ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಡಯಾಬಿಟಿಕ್ ರಿವರ್ಸಲ್, ಡಯಟ್ ಮತ್ತು ನ್ಯೂಟ್ರೇಷನ್, ಹೋಮಿಯೋಪಥಿ ವೈದ್ಯರು ಉಪಸ್ಥಿತರಿರಲಿದ್ದು, ತಪಾಸಣೆ ಬಳಿಕ ಉಚಿತ ಔಷಧ ವಿತರಿಸಲಿದ್ದಾರೆ.
ಇದನ್ನೂ ಓದಿ:ಮಧುಮೇಹದಿಂದ ದೇಹದ ಈ ಭಾಗಗಳಿಗೆ ಗರಿಷ್ಠ ಹಾನಿ!https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ