Tips To Loose Weight: ದಿನನಿತ್ಯ ಹೆಚ್ಚಾಗುತ್ತಿರುವ ತೂಕದ ಕುರಿತು ಬಹುತೇಕ ಜನರು ಚಿಂತಿತರಾಗುತ್ತಾರೆ. ಏಕೆಂದರೆ ಸಾಕಷ್ಟು ಓಡಾಟದಿಂದ ಕೂಡಿರುವ ಇಂದಿನ ಜೀವನಶೈಲಿಯಲ್ಲಿ ಜನರ ಬಳಿ ವ್ಯಾಯಾಮ ಮಾಡಲು ಸಮಯವಿಲ್ಲ. ಹೀಗಾಗಿ ನೀವು ಕೆಲವು ಆರೋಗ್ಯಕರ ಬೀಜಗಳನ್ನು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಿ ಸ್ಥೂಲಕಾಯತೆ ಸಂಸ್ಯೆಯಿಂದ ಪಾರಾಗಬಹುದು.

COMMERCIAL BREAK
SCROLL TO CONTINUE READING

ತೂಕ ಇಳಿಕೆಗೆ ಈ ಬೀಜಗಳನ್ನು ಬಳಸಿ
ಅಗಸೆ ಬೀಜಗಳು

ಅಗಸೆ ಬೀಜಗಳು ಒಮೆಗಾ -3 ನ ಫ್ಯಾಟಿ ಆಸಿಡ್ ಗಳ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಒಮೆಗಾ 3 ಫ್ಯಾಟಿ ಆಸಿಡ್ ನಿಮ್ಮ ದೇಹದ ಕೊಬ್ಬನ್ನು ಸುಡುವ ಕೆಲಸ ಮಾಡುತ್ತದೆ. ಇದಲ್ಲದೆ, ಅಗಸೆ ಬೀಜಗಳಲ್ಲಿ ಸಾಕಷ್ಟು ಕಬ್ಬಿಣ, ಪ್ರೋಟೀನ್ ಮತ್ತು ಫೈಬರ್ ಕೂಡ ಇದೆ. ಅವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಹೇಗಿರುವಾಗ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ನೀವೂ ಬಯಸುತ್ತಿದ್ದರೆ ನೀವೂ ಅಗಸೆ ಬೀಜಗಳನ್ನು ಸೇವಿಸಬಹುದು. ಇವುಗಳನ್ನು ನೀವೂ ಸ್ಮೂಥಿಗಳಲ್ಲಿ, ಪಾನೀಯಗಳಲ್ಲಿ, ತರಕಾರಿಗಳಲ್ಲಿ ಬೆರೆಸಿ ಕೂಡ ಸೇವಿಸಬಹುದು.


ಸೂರ್ಯಕಾಂತಿ ಬೀಜಗಳು
ಸೂರ್ಯಕಾಂತಿ ಅಂದರೆ ಸನ್ ಫ್ಲಾವರ್ ಬೀಜಗಳು ತೂಕವನ್ನು ಇಳಿಕೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿವೆ. ಇವುಗಳನ್ನು ನೀವೂ ಸಲಾಡ್ ಅಥವಾ ಸೂಪ್‌ಗೆ ಬೆರೆಸಿಕೊಳ್ಳುವ ಮೂಲಕ ಕೂಡ ಸೇವಿಸಬಹುದು, ಇವು ವಿಟಮಿನ್ ಇ ಯ ಉತ್ತಮ ಮೂಲವಾಗಿದೆ. ಇದನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಹೆಚ್ಚಿನ ಕ್ಯಾಲೋರಿಗಳು ಸುಡಲ್ಪಡುತ್ತವೆ. ಆದ್ದರಿಂದ ಇದು ನಿಮ್ಮ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ-Diabetes ರೋಗಿಗಳಿಗೆ ಈ ಎಲೆಗಳ ಚೂರ್ಣ ಒಂದು ವರದಾನಕ್ಕೆ ಸಮಾನ!


ಚಿಯಾ ಬೀಜಗಳು
ಚಿಯಾ ಬೀಜಗಳು ತೂಕವನ್ನು ಇಳಿಕೆಗಾಗಿ ಹೆಚ್ಚು ಪರಿಣಾಮಕಾರಿಯಾಗಿವೆ. ಏಕೆಂದರೆ ಇವು ನಿಮ್ಮ ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಅದಕ್ಕಾಗಿಯೇ ಇದನ್ನು ಸೇವಿಸುವುದರಿಂದ ದೀರ್ಘಕಾಲದವರೆಗೆ ಹಸಿವಿನ ಅನುಭವ ಉಂಟಾಗುವುದಿಲ್ಲ.


ಇದನ್ನೂ ಓದಿ-Health Tips: ರಾತ್ರಿ ಮಲಗುವ ಮುನ್ನ ಅಪ್ಪಿತಪ್ಪಿಯೂ ಕೂಡ ಈ ಆಹಾರಗಳನ್ನು ಸೇವಿಸಬೇಡಿ, ಹೆಲ್ತ್ ಹಾಳಾಗುತ್ತೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.