ನವದೆಹಲಿ: ಮೊಬೈಲ್ ಫೋನ್ಗಳನ್ನು ಅತಿ ಹೆಚ್ಚು ಬಳಸುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಈ ಬಗ್ಗೆ ಸಾಕಷ್ಟು ಸಂಶೋಧನಾ ವರದಿಗಳು ಸಾಬೀತುಪಡಿಸಿವೆ. ಆದರೆ, ICMR ನಡೆಸಿರುವ ನೂತನ ಅಧ್ಯಯನ ವರದಿ ನಿಮಗೆ ನಿಜಕ್ಕೂ ಆತಂಕ ಮೂಡಿಸಲಿದೆ. 


COMMERCIAL BREAK
SCROLL TO CONTINUE READING

ಹೌದು, ನವದೆಹಲಿಯ AIIMS ಮತ್ತು ICMR ಜಂಟಿಯಾಗಿ ಮೊಬೈಲ್ ಪೋನ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ನೂತನ ಸಂಶೋಧನೆಯೊಂದನ್ನು ಆರಂಭಿಸಿದೆ. ಅತಿ ಹೆಚ್ಚು ಮೊಬೈಲ್ ಪೋನ್ ಬಳಕೆಯು ಮಾನವನ ಒಳಗೆ ಜೈವಿಕ ಬದಲಾವಣೆಗಳಿಗೆ ಕಾರಣವಾಗುತ್ತಿದೆ ಎಂದು ಪ್ರಾಥಮಿಕ ಹಂತದ ಅಧ್ಯಯನದಿಂದ ಬಹಿರಂಗವಾಗಿದೆ. ಆದರೆ, ಈ ಅಧ್ಯಯನ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು ಪೂರ್ಣಗೊಳ್ಳದ ಕಾರಣ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದಿಲ್ಲ. 


AIIMS ಮತ್ತು ICMR ಜಂಟಿಯಾಗಿ ನವದೆಹಲಿಯಲ್ಲಿ ಮೊಬೈಲ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ 2013ರಲ್ಲಿಯೇ ಅಧ್ಯಯನ ಆರಂಭಿಸಿದ್ದು, 2018ರಲ್ಲಿ ಪೂರ್ಣಗೊಳಿಸುವ ಯೋಜನೆ ಹೊಂದಿತ್ತು. ಆದರೆ, ಈ ಅಧ್ಯಯನದ ವ್ಯಾಪ್ತಿ ಸಾಕಷ್ಟು ವಿಸ್ತಾರವಾಗಿದ್ದು, ಅಧ್ಯಯನ ಪೂರ್ಣಗೊಳ್ಳಲು ಇನ್ನೂ 3 ರಿಂದ 4 ವರ್ಷಗಳಾಗಲಿದೆ. ಅಷ್ಟೇ ಅಲ್ಲದೆ, ಇದಕ್ಕಾಗಿ 4500ಕ್ಕೂ ಹೆಚ್ಚು ಮಂದಿಯನ್ನು ಸಂಶೋಧನೆಗೆ ಒಳಪಡಿಸಲಾಗಿದೆ.