ದಿನಕ್ಕೆ ಎಷ್ಟು ಬಾರಿ ಮಲವಿಸರ್ಜಿಸುವುದು ಆರೋಗ್ಯಕರ; ಮಲಬದ್ಧತೆಯಿಂದ ಮುಕ್ತಿ ಹೊಂದಲು ಇಲ್ಲಿವೆ ಟಿಪ್ಸ್

Foods for constipation: ಮಲವಿಸರ್ಜನೆ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾದರೂ ನಿಯಮಿತ ಚಕ್ರವನ್ನು ಹೊಂದಿರುವುದು ಮುಖ್ಯ. ತಾಜಾ ಹಣ್ಣುಗಳು ಮತ್ತು ತರಕಾರಿಗಳಿಂದ ತುಂಬಿದ ಆಹಾರವನ್ನು ನೀವು ಸೇವಿಸಬೇಕು. 

Constipation: ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅನೇಕರಿಗೆ ಇದೊಂದು ದೊಡ್ಡ ತಲೆನೋವಾಗಿ ಪರಿಣಮಿಸಿರುತ್ತದೆ. ಮಲವಿಸರ್ಜಿಸಲು ಅವರು ಇನ್ನಿಲ್ಲದ ಸರ್ಕಸ್‌ ಮಾಡುತ್ತಾರೆ. ಮಲಬದ್ಧತೆಯಿಂದ ಮುಕ್ತಿ ಪಡೆಯಲು ಜೀವನಶೈಲಿಯಲ್ಲಿ ಬದಲಾವಣೆ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು ಸೂಕ್ತ. ಸಾಕಷ್ಟು ಫೈಬರ್‌ ಹೊಂದಿರುವ ಆಹಾರ ಸೇವಿಸಬೇಕು, ಹೆಚ್ಚು ನೀರು ಕುಡಿಯಿರಿ, ನಿಯಮಿತವಾಗಿ ದೈಹಿಕ ಚಟುವಟಿಕೆಯನ್ನು ಮಾಡುವುದರಿಂದ ನೀವು ಸುಲಭವಾಗಿ ಮಲವಿಸರ್ಜಿಸಬಹುದು. ಮಲಬದ್ಧತೆಯಿಂದ ಮುಕ್ತಿ ಪಡೆಯಲು ಇಲ್ಲಿ ನೀಡಿರುವ ಈ ಸಿಂಪಲ್‌ ಸಲಹೆಗಳನ್ನು ಪಾಲಿಸಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ನೀವು ದಿನದಲ್ಲಿ ಎಷ್ಟು ಬಾರಿ ಮಲವಿಸರ್ಜನೆ ಮಾಡುತ್ತೀರಿ? ಇದು ಸಾಮಾನ್ಯವಾಗಿದೆಯೇ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹಾಗಾದ್ರೆ ಆರೋಗ್ಯವಂತ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಮಲವಿಸರ್ಜಿಸುವುದು ಉತ್ತಮ? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ...

2 /8

ಒಬ್ಬ ಆರೋಗ್ಯವಂತ ಸಾಮಾನ್ಯ ವ್ಯಕ್ತಿಯು ದಿನಕ್ಕೆ ಮೂರು ಬಾರಿಯಿಂದ ವಾರಕ್ಕೆ ಮೂರು ಬಾರಿ ಮಲವಿಸರ್ಜಿಸುವುದು ಆರೋಗ್ಯಕರ. ಆದರೆ ಮಲವು ಎಷ್ಟು ಸುಲಭವಾಗಿ ಹಾದುಹೋಗುತ್ತದೆ ಎನ್ನುವುದು ಬಹಳ ಮುಖ್ಯ.

3 /8

ನಿಮಗೆ ಮಲವಿಸರ್ಜಿಸಲು ಕಷ್ಟವಾಗುತ್ತಿದ್ದು, ವಾರಕ್ಕೆ ಮೂರು ಬಾರಿಗಿಂತ ಕಡಿಮೆ ಹೋದರೆ ನೀವು ಮಲಬದ್ಧತೆ ಹೊಂದಿರಬಹುದು. ದಿನಕ್ಕೆ ಮೂರು ಬಾರಿಗಿಂತ ಹೆಚ್ಚು ನೀರು ನೀರಾಗಿ ಸ್ರವಿಸುತ್ತಿದ್ದರೆ ಅತಿಸಾರವೆಂದು ಪರಿಗಣಿಸಲಾಗುತ್ತದೆ. 

4 /8

ನೀವು ಸೇವಿಸುವ ಆಹಾರ ಮತ್ತು ಪಾನೀಯಗಳು ನೀವು ಎಷ್ಟು ಬಾರಿ ಮಲವಿಸರ್ಜನೆ ಮಾಡುತ್ತೀರಿ ಎಂಬುದನ್ನು ನಿರ್ಧರಿಸುತ್ತವೆ. ಅವುಗಳು ಮಲದ ಬಣ್ಣ ಮತ್ತು ಸ್ಥಿರತೆಯನ್ನೂ ಬದಲಿಸುತ್ತವೆ. ಹೀಗಾಗಿ ನೀವು ಹೆಚ್ಚು ನೀರು ಕುಡಿಯುವುದು ಮುಖ್ಯ.

5 /8

ಹೆಚ್ಚು ನಾರಿನಾಂಶವಿರುವ ಆಹಾರಗಳು ಹೆಚ್ಚು ಮಲವಿಸರ್ಜನೆಗೆ ಸಹಾಯ ಮಾಡುತ್ತದೆ. ಒಂದು ವೇಳೆ ನಿಮಗೆ ಮಲವಿಸರ್ಜಿಸಲು ಕಷ್ಟವಾದರೆ, ತಾಜಾ ಹಣ್ಣುಗಳು, ತರಕಾರಿಗಳು, ಧಾನ್ಯಗಳನ್ನು ಸೇವಿಸಿರಿ. ಇವುಗಳು ನಿಮ್ಮ ಮಲವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. 

6 /8

ಬೆಳಗ್ಗೆ ಎದ್ದು ಕಾಫಿ ಕುಡಿಯುವುದರಿಂದ ನಿಮ್ಮ ಮಲವಿಸರ್ಜನೆಗೆ ಸಹಾಯವಾಗುತ್ತದೆ. ಏಕೆಂದರೆ ಕಾಫಿಯಲ್ಲಿರುವ ಕೆಫೀನ್‌ ನಿಮ್ಮ ಕರುಳಿನಲ್ಲಿನ ಸಂಕೋಚನಗಳನ್ನು ಸಕ್ರಿಯಗೊಳಿಸುತ್ತದೆ. ಮಲವು ಹೆಚ್ಚು ವೇಗವಾಗಿ ಮುಂದಕ್ಕೆ ತಳ್ಳಲು ಇದು ಸಹಾಯ ಮಾಡುತ್ತದೆ. 

7 /8

ಅತಿಸಾರ ಅಥವಾ ಇತರ ಯಾವುದೇ ಕಾರಣಗಳಲ್ಲದೆ, ನೀವು ಹೆಚ್ಚು ಮಲವಿಸರ್ಜಿಸುತ್ತಿದ್ದರೆ, ಅನ್ನ, ಪಾಸ್ತಾ, ಮೊಟ್ಟೆಯಂತಹ ಆಹಾರಗಳನ್ನು ಸೇವಿಸುವುದರಿಂದ ನೀವು ಮಲವಿಸರ್ಜನೆಯನ್ನು ನಿಯಂತ್ರಿಸಬಹುದು.

8 /8

ಮಲವಿಸರ್ಜನೆ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾದರೂ ನಿಯಮಿತ ಚಕ್ರವನ್ನು ಹೊಂದಿರುವುದು ಮುಖ್ಯ. ತಾಜಾ ಹಣ್ಣುಗಳು ಮತ್ತು ತರಕಾರಿಗಳಿಂದ ತುಂಬಿದ ಆಹಾರವನ್ನು ನೀವು ಸೇವಿಸಬೇಕು.