ನವದೆಹಲಿ: ಚಳಿಗಾಲದಲ್ಲಿ ಮಾರುಕಟ್ಟೆಯಲ್ಲಿ ನೆಲ್ಲಿಕಾಯಿ ವ್ಯಾಪಕವಾಗಿ ಕಂಡುಬರುತ್ತದೆ. ಹೆಚ್ಚಿನ ಜನರು ಇದನ್ನು ತಿನ್ನಲು ಇಷ್ಟಪಡುತ್ತಾರೆ. ಏಕೆಂದರೆ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಜೀರ್ಣಕ್ರಿಯೆ ಸುಧಾರಿಸಲು ನೀವು ಆಹಾರದಲ್ಲಿ ನೆಲ್ಲಿಕಾಯಿ ಸೇರಿಸಿಕೊಳ್ಳಬೇಕು. ಕೆಲವು ಕಾಯಿಲೆ ಹೊಂದಿರುವ ಜನರು ಅಪ್ಪಿತಪ್ಪಿಯೂ ನೆಲ್ಲಿಕಾಯಿಯನ್ನು ಸೇವಿಸಬಾರದು. ಹೌದು, ಕೆಲವು ಕಾಯಿಲೆಗಳಿಂದ ಬಳಲುತ್ತಿರುವವರು ನೆಲ್ಲಿಕಾಯಿಯನ್ನು ಸೇವಿಸಬಾರದು. 


COMMERCIAL BREAK
SCROLL TO CONTINUE READING

ಈ ಜನರು ನೆಲ್ಲಿಕಾಯಿ ಸೇವಿಸಬಾರದು


ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾದವರು


ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆ ಹೊಂದಿರುವ ಜನರು ನೆಲ್ಲಿಕಾಯಿಯಿಂದ ದೂರವಿರಬೇಕು. ಏಕೆಂದರೆ ನೀವು ನೆಲ್ಲಿಕಾಯಿ ಸೇವಿಸಿದರೆ ಅದು ಸಕ್ಕರೆಯ ಮಟ್ಟವನ್ನು ಇನ್ನಷ್ಟು ಹದಗೆಡಿಸುತ್ತದೆ. ಬಳಿಕ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದಕ್ಕಾಗಿಯೇ ಮಧುಮೇಹಿಗಳು ನೆಲ್ಲಿಕಾಯಿಯನ್ನು ನಿರಂತರವಾಗಿ ಸೇವಿಸುವುದನ್ನು ತಪ್ಪಿಸಬೇಕು.


ಇದನ್ನೂ ಓದಿ: Health Tips : ಕಾಫಿ ಪ್ರಿಯರೆ ಎಚ್ಚರ : ಅತಿಯಾದ ಸೇವನೆಯು ಆರೋಗ್ಯಕ್ಕೆ ಅಪಾಯ!


ನೆಗಡಿ ಮತ್ತು ಕೆಮ್ಮು


ನೆಗಡಿ ಮತ್ತು ಕೆಮ್ಮಿನಿಂದ ಬಾಯಿಯ ರುಚಿ ಕೆಟ್ಟದಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನರು ನೆಲ್ಲಿಕಾಯಿಯನ್ನು ಸೇವಿಸುತ್ತಾರೆ. ಆದರೆ ಹೀಗೆ ಮಾಡಬಾರದು. ನೆಗಡಿ ಮತ್ತು ಕೆಮ್ಮಿನ ಸಂದರ್ಭದಲ್ಲಿ ನೆಲ್ಲಿಕಾಯಿಯನ್ನು ತಿನ್ನಬಾರದು, ಏಕೆಂದರೆ ನೆಲ್ಲಿಕಾಯಿ ಶೀತವಾಗಿದ್ದು, ಅದನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮ.  


ಕಿಬ್ಬೊಟ್ಟೆಯ ಊತದ ಸಂದರ್ಭದಲ್ಲಿ 


ಯಾವುದೋ ಕಾರಣದಿಂದ ಹೊಟ್ಟೆಯಲ್ಲಿ ಸದಾ ಊತ ಇರುವವರು ನೆಲ್ಲಿಕಾಯಿ ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಆಮ್ಲಾ ಸೇವನೆಯು ನಿಮ್ಮ ಸಮಸ್ಯೆಯನ್ನು ಹೆಚ್ಚಿಸಬಹುದು. ಆದ್ದರಿಂದ ಇದನ್ನು ಸೇವಿಸುವುದನ್ನು ತಪ್ಪಿಸುವುದೇ ಉತ್ತಮ.


ಇದನ್ನೂ ಓದಿ: Winter Health Tips : ಚಳಿಗಾಲದಲ್ಲಿ ತಪ್ಪದೆ ಸೇವಿಸಿ ಮೂಲಂಗಿ : ಯಾಕೆ? ಇಲ್ಲಿದೆ ನೋಡಿ


ಕಿಡ್ನಿ ಸಮಸ್ಯೆ


ನೀವು ಯಾವುದೇ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರೆ ನೆಲ್ಲಿಕಾಯಿ ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಇದು ದೇಹದಲ್ಲಿ ಸೋಡಿಯಂ ಪ್ರಮಾಣವನ್ನು ಹೆಚ್ಚಿಸುತ್ತದೆ. ಸೋಡಿಯಂ ಪ್ರಮಾಣವನ್ನು ಹೆಚ್ಚಿಸುವುದರಿಂದ ನಿಮಗೆ ಅನೇಕ ತೊಂದರೆಗಳು ಉಂಟಾಗಬಹುದು. ಆದ್ದರಿಂದ ನೀವು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರೆ ನೆಲ್ಲಿಕಾಯಿ ಸೇವಿಸಬೇಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.