Health Tips : ಕಾಫಿ ಪ್ರಿಯರೆ ಎಚ್ಚರ : ಅತಿಯಾದ ಸೇವನೆಯು ಆರೋಗ್ಯಕ್ಕೆ ಅಪಾಯ!

What Is The Perfect Amount of Coffee : ಯಾವುದನ್ನಾದರೂ ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಂದರೆ ಅತಿಯಾದರೆ ಅಮೃತವು ವಿಷ ಅಂತೇ. ಕಾಫಿ ಕೂಡ ಇದಕ್ಕೆ ಹೊರತಾಗಿಲ್ಲ. ಕೆಲವರು ಕಾಫಿಗೆ ಅಷ್ಟು ಅಡಿಕ್ಟ್ ಆಗಿರುತ್ತಾರೆ ಎಂದರೆ. ಅದನ್ನ ಬಿಟ್ಟರೆ ಜೀವವೆ ಇಲ್ಲ ಅನ್ನುವ ಅಡಿಕ್ಟ್ ಆಗಿರುತ್ತಾರೆ.

Last Updated : Dec 4, 2022, 03:29 PM IST
  • ಯಾವುದನ್ನಾದರೂ ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ
  • ಹೆಚ್ಚು ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಆಗುವ ಹಾನಿಗಳೇನು?
  • ಹೆಚ್ಚು ಕಾಫಿ ಕುಡಿಯುವುದರಿಂದ ನಿದ್ರಾಹೀನತೆಯ ಸಮಸ್ಯೆ
Health Tips : ಕಾಫಿ ಪ್ರಿಯರೆ ಎಚ್ಚರ : ಅತಿಯಾದ ಸೇವನೆಯು ಆರೋಗ್ಯಕ್ಕೆ ಅಪಾಯ! title=

What Is The Perfect Amount of Coffee : ಯಾವುದನ್ನಾದರೂ ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಂದರೆ ಅತಿಯಾದರೆ ಅಮೃತವು ವಿಷ ಅಂತೇ. ಕಾಫಿ ಕೂಡ ಇದಕ್ಕೆ ಹೊರತಾಗಿಲ್ಲ. ಕೆಲವರು ಕಾಫಿಗೆ ಅಷ್ಟು ಅಡಿಕ್ಟ್ ಆಗಿರುತ್ತಾರೆ ಎಂದರೆ. ಅದನ್ನ ಬಿಟ್ಟರೆ ಜೀವವೆ ಇಲ್ಲ ಅನ್ನುವ ಅಡಿಕ್ಟ್ ಆಗಿರುತ್ತಾರೆ. ಜನ ವಿಶೇಷವಾಗಿ ಚಳಿಗಾಲದಲ್ಲಿ ಇದನ್ನೂ ಹೆಚ್ಚು ಸೇವಿಸಲು ಇಷ್ಟ ಪಡುತ್ತಾರೆ. ಎಲ್ಲದರಂತೆ, ಕಾಫಿ ಸೇವನೆಯಿಂದ ಪ್ರಯೋಜನಗಳಿವೆ. ಆದರೆ ಇದರ ಅತಿಯಾದ ಸೇವನೆಯುವು ಆರೋಗ್ಯಕ್ಕೆ ಹನಿ ಉಂಟು ಮಾಡುತ್ತದೆ. ಹೀಗಾಗಿ, ದೇಹಕ್ಕೆ ಯಾವುದೇ ಹಾನಿಯಾಗದಂತೆ ದಿನಕ್ಕೆ ಎಷ್ಟು ಕಾಫಿ ಸೇವಿಸಬೇಕು ಎಂಬ ದೊಡ್ಡ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಉತ್ತರ, ಇದರ ಅಪಾಯದ ಬಗ್ಗೆ ನಿಮಗಾಗಿ ಮಾಹಿತಿ ಇಲ್ಲಿದೆ ನೋಡಿ..

ಮೊದಲನೆಯದಾಗಿ, ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ ನಿಗದಿತ ಪ್ರಮಾಣದ ಕಾಫಿ ಸೇವನೆ ಒಳ್ಳೆಯದು. ಆದರೆ ದಿನದಲ್ಲಿ ಒಂದು ಅಥವಾ ಎರಡು ಕಪ್ ಕಾಫಿಯನ್ನು ಸೇವಿಸಬಹುದು ಒಳ್ಳೆಯದು. ಆದರೆ ಕಾಫಿಯನ್ನು ಇದಕ್ಕಿಂತ ಹೆಚ್ಚಿಗೆ ಸೇವಿಸಿದರೆ ಆರೋಗ್ಯಕ್ಕೆ ಅಪಾಯ ತಪ್ಪಿದಲ್ಲ.

ಇದನ್ನೂ ಓದಿ : Winter Health Tips : ಚಳಿಗಾಲದಲ್ಲಿ ತಪ್ಪದೆ ಸೇವಿಸಿ ಮೂಲಂಗಿ : ಯಾಕೆ? ಇಲ್ಲಿದೆ ನೋಡಿ

ಹೆಚ್ಚು ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಆಗುವ ಹಾನಿಗಳೇನು? 

ಹೆಚ್ಚು ಕಾಫಿ ಕುಡಿಯುವುದರಿಂದ ನಿದ್ರಾಹೀನತೆಯ ಸಮಸ್ಯೆ ಕಾಡಬಹುದು. ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಕೆಫೀನ್ ಇದೆ, ಇದು ಮೆದುಳನ್ನು ಉತ್ತೇಜಿಸಲು ಕೆಲಸ ಮಾಡುತ್ತದೆ, ಇದು ನಿದ್ರಾಹೀನತೆಗೆ ಕಾರಣವಾಗಬಹುದು.

ಕಾಫಿ ಕುಡಿಯುವುದರಿಂದ ಗ್ಯಾಸ್ಟ್ರಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ, ಇದು ಕರುಳಿನ ಚಟುವಟಿಕೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಆದ್ದರಿಂದ, ಅತಿಯಾದ ಕಾಫಿ ಸೇವನೆಯು ಹೊಟ್ಟೆಯ ತೊಂದರೆಗೆ ಕಾರಣವಾಗಬಹುದು.

ಕಾಫಿಯಲ್ಲಿ ಸಾಕಷ್ಟು ಕೆಫೀನ್ ಇದೆ. ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಸೇವಿಸುವುದರಿಂದ ಮೂಳೆಗಳಿಗೆ ಹಾನಿಯಾಗುತ್ತದೆ, ಮೂಳೆಗಳು ತೆಳುವಾಗುತ್ತವೆ ಮತ್ತು ದುರ್ಬಲವಾಗುತ್ತವೆ. ಇದಲ್ಲದೆ, ಆಸ್ಟಿಯೊಪೊರೋಸಿಸ್ ಬರುವ ಅಪಾಯವೂ ಹೆಚ್ಚಾಗುತ್ತದೆ.

ಇದನ್ನೂ ಓದಿ : Women's Health : ಮಹಿಳೆಯರಿಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನ ಈ 3 ವಿಧದ ಜ್ಯೂಸ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News