Eggs Benefits : ಈ ವಯಸ್ಸಿನವರು ತಪ್ಪದೆ ಸೇವಿಸಿ ಮೊಟ್ಟೆ, ಇಲ್ಲದಿದ್ದರೆ ದೌರ್ಬಲ್ಯ ಸಮಸ್ಯೆ!

Egg For 40 Plus Age Group : ಮೊಟ್ಟೆಯನ್ನು ಸೂಪರ್‌ಫುಡ್‌ನ ಎಂದು ಕರೆಯಲಾಗುತ್ತದೆ, ಏಕೆಂದರೆ ಇದು ನಮ್ಮ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುವ ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಬೇಗನೆ ಫಾಸ್ಟ್ ಫುಡ್ ರೀತಿಯಾಗಿರುವುದರಿಂದ ಅನೇಕರು ಉಪಾಹಾರದಲ್ಲಿ ಬ್ರೆಡ್ ಜೊತೆ ತಿನ್ನಲು ಇಷ್ಟಪಡುತ್ತಾರೆ.

Last Updated : Dec 4, 2022, 04:29 PM IST
  • ಈ ವಯಸ್ಸಿನವರು ತಪ್ಪದೆ ಸೇವಿಸಬೇಕು ಮೊಟ್ಟೆ
  • ಮೊಟ್ಟೆಯಲ್ಲಿ ಕಂಡುಬರುವ ಪೋಷಕಾಂಶಗಳು
  • ದೌರ್ಬಲ್ಯ ದೂರವಾಗುತ್ತದೆ
Eggs Benefits : ಈ ವಯಸ್ಸಿನವರು ತಪ್ಪದೆ ಸೇವಿಸಿ ಮೊಟ್ಟೆ, ಇಲ್ಲದಿದ್ದರೆ ದೌರ್ಬಲ್ಯ ಸಮಸ್ಯೆ! title=

Egg For 40 Plus Age Group : ಮೊಟ್ಟೆಯನ್ನು ಸೂಪರ್‌ಫುಡ್‌ನ ಎಂದು ಕರೆಯಲಾಗುತ್ತದೆ, ಏಕೆಂದರೆ ಇದು ನಮ್ಮ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುವ ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಬೇಗನೆ ಫಾಸ್ಟ್ ಫುಡ್ ರೀತಿಯಾಗಿರುವುದರಿಂದ ಅನೇಕರು ಉಪಾಹಾರದಲ್ಲಿ ಬ್ರೆಡ್ ಜೊತೆ ತಿನ್ನಲು ಇಷ್ಟಪಡುತ್ತಾರೆ. ಜಿಮ್ ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುವವರು ಮೊಟ್ಟೆಯ ಬಿಳಿಭಾಗವನ್ನು ತಪ್ಪದೆ ಸೇವಿಸುತ್ತಾರೆ. ಮೊಟ್ಟೆ ಎಲ್ಲಾ ವಯಸ್ಸಿನವರಿಗೆ ಪ್ರಯೋಜನಕಾರಿಯಾಗಿದ್ದರೂ, ನಿರ್ದಿಷ್ಟ ವಯಸ್ಸಿನವರಿಗೆ ಈ ಸೂಪರ್‌ಫುಡ್ ತಪ್ಪದೆ ಸವಿಸಬೇಕು. ಏಕೆಂದರೆ ಇದು ಅವರ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.

ಈ ವಯಸ್ಸಿನವರು ತಪ್ಪದೆ ಸೇವಿಸಬೇಕು ಮೊಟ್ಟೆ

ನಾವು 40 ವರ್ಷ ದಾಟಿದವಾರ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ವಯಸ್ಸು ಹೆಚ್ಚಾದಂತೆ ಮತ್ತು ಜನರು ಮಧ್ಯವಯಸ್ಸನ್ನು ತಲುಪಲು ಪ್ರಾರಂಭಿಸಿದಾಗ, ಅವರ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ ಮತ್ತು ಸ್ನಾಯು ನೋವು ಆಗಾಗ್ಗೆ ಸಂಭವಿಸುತ್ತದೆ. ಹೀಗಾಗಿ, ಮೊಟ್ಟೆಗಳನ್ನು ತಿನ್ನುವ ಅವರ ಅಗತ್ಯವು ಹೆಚ್ಚು ಹೆಚ್ಚಾಗುತ್ತದೆ. ಇದನ್ನು ಸೇವಿಸುವುದರಿಂದ ಪ್ರೊಟೀನ್‌ನ ಅಗತ್ಯವು ಪೂರ್ಣಗೊಳ್ಳುತ್ತದೆ, ಜೊತೆಗೆ ವಿಟಮಿನ್‌ಗಳು ಮತ್ತು ಕ್ಯಾಲ್ಸಿಯಂ ದೇಹಕ್ಕೆ ಲಭ್ಯವಾಗುತ್ತದೆ.

ಇದನ್ನೂ ಓದಿ : Health Tips : ಕಾಫಿ ಪ್ರಿಯರೆ ಎಚ್ಚರ : ಅತಿಯಾದ ಸೇವನೆಯು ಆರೋಗ್ಯಕ್ಕೆ ಅಪಾಯ!

ಮೊಟ್ಟೆಯಲ್ಲಿ ಕಂಡುಬರುವ ಪೋಷಕಾಂಶಗಳು

ನೀವು ಬೇಯಿಸಿದ ಮೊಟ್ಟೆಯನ್ನು ಸೇವಿಸಿದರೆ, ದೇಹಕ್ಕೆ 6.3 ಗ್ರಾಂ ಪ್ರೋಟೀನ್, 77 ಕ್ಯಾಲೋರಿಗಳು, 212 ಮಿಲಿಗ್ರಾಂ ಕೊಲೆಸ್ಟ್ರಾಲ್, 0.6 ಗ್ರಾಂ ಕಾರ್ಬೋಹೈಡ್ರೇಟ್ಗಳು, 5.3 ಗ್ರಾಂ ಆರೋಗ್ಯಕರ ಕೊಬ್ಬುಗಳು, ಜೊತೆಗೆ ವಿಟಮಿನ್-ಎ, ವಿಟಮಿನ್-ಬಿ2, ವಿಟಮಿನ್-ಬಿ5. ರಂಜಕ ಮತ್ತು ಸೆಲೆನಿಯಮ್. ಅದಕ್ಕಾಗಿಯೇ ನೀವು ಮೊಟ್ಟೆಗಳನ್ನು ತಿನ್ನದಿರಲು ಯಾವುದೇ ಕಾರಣವಿಲ್ಲ.

ದೌರ್ಬಲ್ಯ ದೂರವಾಗುತ್ತದೆ

ಮಧ್ಯವಯಸ್ಸಿನವರು ಪ್ರೋಟೀನ್, ವಿಟಮಿನ್ ಮತ್ತು ಕ್ಯಾಲ್ಸಿಯಂ ಪಡೆಯುವುದನ್ನು ಮುಂದುವರಿಸಿದರೆ, ಅವರ ದೇಹವು ಪೂರ್ಣ ಶಕ್ತಿಯನ್ನು ಪಡೆಯುತ್ತದೆ ಮತ್ತು ದೌರ್ಬಲ್ಯ ಎಂಬ ಹೆಸರು ಮಾಯವಾಗುತ್ತದೆ. ಅದಕ್ಕಾಗಿಯೇ ನೀವು 40 ನೇ ವಯಸ್ಸಿನಲ್ಲಿ ನಿಮ್ಮ ನಿಯಮಿತ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಿಕೊಳ್ಳಬೇಕು.

ದಿನಕ್ಕೆ ಎಷ್ಟು ಮೊಟ್ಟೆ ಸೇವಿಸಬೇಕು?

ಗ್ರೇಟರ್ ನೋಯ್ಡಾದ GIMS ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಿದ್ಧ ಆಹಾರ ತಜ್ಞ ಡಾ. ಆಯುಷಿ ಯಾದವ್ ಅವರ ಪ್ರಕಾರ, 40 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ವಾರದಲ್ಲಿ ಕನಿಷ್ಠ 7 ಮೊಟ್ಟೆಗಳನ್ನು ತಿನ್ನಬೇಕು, ಅಂದರೆ ದಿನಕ್ಕೆ ಒಂದು ಮೊಟ್ಟೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಬೇಯಿಸಿದ ಮೊಟ್ಟೆಗಳನ್ನು ಮಾತ್ರ ತಿನ್ನಲು ಪ್ರಯತ್ನಿಸಿ, ಏಕೆಂದರೆ ಇದು ಆರೋಗ್ಯಕರ ಮಾರ್ಗವಾಗಿದೆ.

ಇದನ್ನೂ ಓದಿ : Winter Health Tips : ಚಳಿಗಾಲದಲ್ಲಿ ತಪ್ಪದೆ ಸೇವಿಸಿ ಮೂಲಂಗಿ : ಯಾಕೆ? ಇಲ್ಲಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News