Health Tips: ಹೃದ್ರೋಗ ತಡೆಗಟ್ಟಲು ಈ 6 ಉಪಯುಕ್ತ ಸಲಹೆ ಪಾಲಿಸಿ
Heart disease prevention and treatment: ಮಾನಸಿಕ ಒತ್ತಡ, ಅನಾರೋಗ್ಯಕರ ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಯೇ ಹೃದಯಾಘಾತ ಅಥವಾ ಹೃದಯ ಸ್ತಂಭನಕ್ಕೆ ಕಾರಣ.
ನವದೆಹಲಿ: ಜೀವನಶೈಲಿಯ ಬದಲಾವಣೆಯಿಂದ ಸಣ್ಣಮಕ್ಕಳು, ಯುವಕರಲ್ಲಿಯೂ ಹೃದ್ರೋಗ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಚಿಕ್ಕ ಪ್ರಾಯದಲ್ಲಿಯೇ ಹೃದಯಾಘಾತ ಏಕಾಗುತ್ತದೆ ಅನ್ನೋದರ ಬಗ್ಗೆ ತಿಳಿದುಕೊಳ್ಳಬೇಕು. ಮಾನಸಿಕ ಒತ್ತಡ, ಅನಾರೋಗ್ಯಕರ ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಯೇ ಹೃದಯಾಘಾತ ಅಥವಾ ಹೃದಯ ಸ್ತಂಭನಕ್ಕೆ ಕಾರಣ. ಹೃದ್ರೋಗ ತಡೆಗಟ್ಟಲು ಪ್ರತಿಯೊಬ್ಬರೂ ಪಾಲಿಸಬೇಕಾದ 6 ಉಪಯುಕ್ತ ಸಲಹೆಗಳು ಇಲ್ಲಿವೆ.
ನಿಮ್ಮ ಅಪಾಯ ತಿಳಿದುಕೊಳ್ಳಿ
ದಿನನಿತ್ಯದ ಜೀವನದಲ್ಲಿ ಕೆಲವು ಅಂಶಗಳು ನಿಮ್ಮ ಅಪಾಯ ಹೆಚ್ಚಿಸಬಹುದು. ಧೂಮಪಾನ, ಮೂತ್ರಪಿಂಡ ಕಾಯಿಲೆ ಅಥವಾ ನಿಮ್ಮ ಪೂರ್ವಜರಲ್ಲಿದ್ದ ಆರಂಭಿಕ ಹೃದಯ ಕಾಯಿಲೆ. ಹೀಗೆ ನಿಮ್ಮ ಅಪಾಯಕಾರಿ ಅಂಶಗಳನ್ನು ಮೊದಲೇ ತಿಳಿದುಕೊಳ್ಳುವುದು ಉತ್ತಮ. ಇದರಿಂದ ವೈದ್ಯರು ಉತ್ತಮ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ. ಆದಷ್ಟು ದುಶ್ಚಟಗಳಿಂದ ಮುಕ್ತವಾಗಿ ಬದುಕುವುದನ್ನು ರೂಢಿಸಿಕೊಂಡರೆ ಹೃದ್ರೋಗ ಸಮಸ್ಯೆಯನ್ನು ದೂರವಿಡಬಹುದು.
ಇದನ್ನೂ ಓದಿ: Diabetes: ಕೆಲವೇ ದಿನಗಳಲ್ಲಿ ಮಧುಮೇಹ ನಿಯಂತ್ರಕ್ಕೆ ಬೆಳಗ್ಗೆ ಈ ಒಂದು ಕೆಲಸ ಮಾಡಿ ಸಾಕು!
ಆರೋಗ್ಯಕರ ಆಹಾರ ಸೇವನೆ
ತರಕಾರಿಗಳು, ಹಣ್ಣುಗಳು, ಧಾನ್ಯಗಳು, ದ್ವಿದಳ ಧಾನ್ಯಗಳು, ಬೀಜಗಳು, ಸಸ್ಯ ಆಧಾರಿತ ಪ್ರೋಟೀನ್ ಗಳು, ಮಾಂಸಾಹಾರ ಮತ್ತು ಮೀನು ಸೇವನೆ ನಿಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕು.
ವ್ಯಾಯಾಮ ಮಾಡಿ
ಆರೋಗ್ಯಕರ ಜೀವನದ ಪ್ರಮುಖ ಭಾಗವೇ ದೈಹಿಕವಾಗಿ ಸಕ್ರಿಯವಾಗಿರುವುದು. ಆರೋಗ್ಯವಾಗಿರಲು ಇದು ಒಂದು ಉತ್ತಮ ವಿಧಾನವಾಗಿದೆ. ವಯಸ್ಕರು ಪ್ರತಿವಾರ ಕನಿಷ್ಠ 150 ನಿಮಿಷಗಳ ಕಾಲ ಏರೋಬಿಕ್ ಚಟುವಟಿಕೆ ಅಥವಾ 75 ನಿಮಿಷ ದೈಹಿಕ ಚಟುವಟಿಕೆ ಮಾಡಬೇಕು ಎಂದು ಹೇಳಲಾಗಿದೆ.
ನಿಮ್ಮ ತೂಕ ಪರಿಶೀಲಿಸಿರಿ
ಯಾವುದೇ ಒಬ್ಬ ವ್ಯಕ್ತಿ ಆರೋಗ್ಯವಾಗಿದ್ದಾನೆಂದು ತಿಳಿಯುವುದೇ ಆತನ ತೂಕದಿಂದ. ನೀವು ಆರೋಗ್ಯಕರ ತೂಕ ಹೊಂದಿದ್ದೀರಾ ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕು. ನೀವು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದರೆ ಸಾಧ್ಯವಾದಷ್ಟು ತೂಕ ಕಳೆದುಕೊಳ್ಳಲು ಪ್ರಯತ್ನಿಸಿ. ಕಡಿಮೆ ಕ್ಯಾಲೊರಿ ಆಹಾರ ಸೇವಿಸುವುದು ಕೂಡ ನಿಮ್ಮ ಜೀವನಶೈಲಿಯ ಭಾಗವಾಗಿರಲಿ.
ಇದನ್ನೂ ಓದಿ: Health Tips: ಯಾವ ಸಮಯದಲ್ಲಿ ಕಾಫಿ ಕುಡಿಯುವುದು ಆರೋಗ್ಯಕ್ಕೆ ಉತ್ತಮ..?
ತಂಬಾಕಿನಿಂದ ದೂರವಿರಿ
ನೀವು ಧೂಮಪಾನ ಮಾಡುತ್ತಿದ್ದರೆ ಇಂದೇ ಬಿಟ್ಟುಬಿಡಿ. ನಿಮ್ಮ ಮನೆಯಲ್ಲಿ ಯಾರಾದರೂ ಧೂಮಪಾನ ಮಾಡುತ್ತಿದ್ದರೆ ಅದನ್ನು ತ್ಯಜಿಸಲು ಸಲಹೆ ನೀಡಿ. ನೀವು ಧೂಮಪಾನ ಅಥವಾ ತಂಬಾಕು ಉತ್ಪನ್ನ ಬಳಸದಿದ್ದರೆ ಅವುಗಳ ಸಹವಾಸಕ್ಕೆ ಹೋಗಬೇಡಿ.
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ನಿಮ್ಮ ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸಬೇಕು. ಇದು ದೀರ್ಘಾವಧಿಯ ಆರೋಗ್ಯಕರ ಜೀವನ ನಡೆಸಲು, ಹೃದ್ರೋಗ ಅಥವಾ ಪಾರ್ಶ್ವವಾಯು ಅಪಾಯ ಕಡಿಮೆ ಮಾಡಲು ಸಹಕಾರಿ. ಸಾಧ್ಯವಾದಷ್ಟು ಪ್ರತಿದಿನ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಪರಿಶೀಲಿಸುತ್ತಾ ಇರಬೇಕು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.