Health Benefits of Chia Seeds: ಚಿಯಾ ಸೀಡ್ಸ್‌ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಪ್ರತಿದಿನ ಚೀಯಾ ಬೀಜಗಳ ಸೇವನೆಯಿಂದ ನೀವು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ದೇಹದ ರೋಗ ನಿರೋಧ ಶಕ್ತಿ ಹೆಚ್ಚಿಸಲು, ತೂಕ ಇಳಿಕೆಗೆ ಈ ಬೀಜ ಸಹಕಾರಿಯಾಗಿದೆ. ಫೈಬರ್ ಸಮೃದ್ಧವಾಗಿರುವ ಚಿಯಾ ಬೀಜಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒಮೆಗಾ–3 ಫ್ಯಾಟಿ ಆಸಿಡ್‌ಗಳಿಂದ ಸಮೃದ್ಧವಾಗಿರುವ ಚೀಯಾ ಸೀಡ್ಸ್‌ ತ್ವಚೆಯ ಅಂದ ಹೆಚ್ಚುವುದರಿಂದ ಹಿಡಿದು ಹೃದಯದ ಆರೋಗ್ಯದವರೆಗೆ ಲಾಭ ನೀಡುತ್ತವೆ.  


COMMERCIAL BREAK
SCROLL TO CONTINUE READING

ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ಚಿಯಾ ಬೀಜಗಳನ್ನು ಅತಿಯಾಗಿ ಸೇವಿಸಬಾರದು. ನಿಯಮಿತ ಪ್ರಮಾಣದಲ್ಲಿ ಸೇವಿಸಿದ್ರೆ ಏನೂ ತಂದರೆಯಿಲ್ಲ. ಆದರೆ ಅತಿಯಾಗಿ ಸೇವಿಸಿದ್ರೆ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೀಗಾಗಿ ಮೊದಲಿಗೆ ಕೇವಲ 1 ಟೇಬಲ್ ಸ್ಪೂನ್ ಚಿಯಾ ಬೀಜಗಳನ್ನು ಸೇವಿಸಲು ಪ್ರಯತ್ನಿಸಿ. ಹೆಚ್ಚು ಚಿಯಾ ಬೀಜಗಳನ್ನು ಸೇವಿಸುವುದು ದುಷ್ಪರಿಣಾಮಗಳಿಗೆ ಕಾರಣವಾಗಬಹುದು. ಕ್ರಮೇಣವಾಗಿ ನಿಮ್ಮ ಆಹಾರದಲ್ಲಿ ಸ್ವಲ್ಪ ಹೆಚ್ಚು ಚಿಯಾ ಬೀಜವನ್ನು ಸೇರಿಸಬಹುದು. ಆದರೆ ಇವು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಹೀಗಾಗಿ ಇದರ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ. 


ಇದನ್ನೂ  ಓದಿ: ಮಧುಮೇಹಿಗಳಿಗೆ ವರದಾನ ಈ ಹಣ್ಣು.. ನಿತ್ಯ ಸೇವಿಸಿದರೇ ಎಂದಿಗೂ ಹೆಚ್ಚಾಗುವುದಿಲ್ಲ ಶುಗರ್!!


ಚಿಯಾ ಬೀಜಗಳ ಹೊರಗಿನ ಪದರವು ತುಂಬಾ ತೆಳುವಾಗಿರುವುದರಿಂದ, ನೀವು ಅವುಗಳನ್ನು ಅಗಿಯುವಾಗ ಸುಲಭವಾಗಿ ಒಡೆಯುತ್ತವೆ. ಆದರೆ ನೀವು ಅವುಗಳನ್ನು ಆಹಾರದ ಮೇಲೆ ಹಾಕಿದರೆ ಪೋಷಕಾಂಶಗಳನ್ನು ಹೆಚ್ಚು ಸುಲಭವಾಗಿ ಹೀರಿಕೊಳ್ಳಬಹುದು. ನೀವು ಇವುಗಳನ್ನು ನಿಧಾನವಾಗಿ ಪುಡಿಮಾಡಿ ಸೇವಿಸಬಹುದು. ಚಿಯಾ ಬೀಜದ ನೀರನ್ನು ಕುಡಿಯುವುದು ಸಹ ನಿಮಗೆ ಹೆಚ್ಚಿನ ಪ್ರಯೋಜನ ನೀಡುತ್ತವೆ. ಹೆಚ್ಚಿನ ಫೈಬರ್ ಆಹಾರಗಳು ನಿಮ್ಮನ್ನು ನಿರ್ಜಲೀಕರಣಗೊಳಿಸಬಹುದು. 


ಚಿಯಾ ಬೀಜಗಳಿಗೆ ನೀರನ್ನು ಸೇರಿಸುವುದರಿಂದ ನೀವು ಬೀಜಗಳಲ್ಲಿನ ಪೋಷಕಾಂಶಗಳ ಪ್ರಯೋಜನಗಳನ್ನು ಪಡೆಯುವಾಗ ಹೈಡ್ರೀಕರಿಸಿದ ಸ್ಥಿತಿಯಲ್ಲಿರಲು ಸಹಾಯ ಮಾಡುತ್ತದೆ. ಚಿಯಾ ಬೀಜಗಳಲ್ಲಿನ ಫೈಬರ್ ಚೆನ್ನಾಗಿ ಕೆಲಸ ಮಾಡಲು, ಕೆಲವು ತಜ್ಞರು ಊಟದ ಜೊತೆಗೆ ಚಿಯಾ ಬೀಜದ ನೀರನ್ನು ಕುಡಿಯಲು ಸಲಹೆ ನೀಡುತ್ತಾರೆ. ಚಿಯಾ ಬೀಜಗಳು ಫೈಬರ್‌ನ ಅತ್ಯುತ್ತಮ ಮೂಲವಾಗಿದ್ದು, ಇದು ಉರಿಯೂತವನ್ನು ಕಡಿಮೆ ಮಾಡಲು, ಕರುಳಿನ ಕಾರ್ಯವನ್ನು ನಿಯಂತ್ರಿಸಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.  


ಇದನ್ನೂ  ಓದಿ: ಡಯಾಬಿಟಿಸ್ ರೋಗಿಗಳು ತಿನ್ನಬಹುದೇ ಬೆಲ್ಲ?ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.