ಡಯಾಬಿಟಿಸ್ ರೋಗಿಗಳು ತಿನ್ನಬಹುದೇ ಬೆಲ್ಲ?ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ ?

ಮಧುಮೇಹ ರೋಗಿಗಳು ಸಕ್ಕರೆ ಸೇವಿಸಬಾರದು ಎಂದು ಹೇಳಲಾಗುತ್ತದೆ.ಆದರೆ ಸಕ್ಕರೆ ಬದಲು ಬೆಲ್ಲ ಸೇವಿಸಬಹುದು ಎನ್ನುವುದೇ ಬಹುತೇಕರ ನಂಬಿಕೆ.ಈ ನಂಬಿಕೆಯ ಹಿಂದಿರುವ ಸತ್ಯವನ್ನು ಮೊದಲು ತಿಳಿದುಕೊಳ್ಳಿ.  

Written by - Ranjitha R K | Last Updated : May 28, 2024, 03:45 PM IST
  • ಮಧುಮೇಹ ರೋಗಿಗಳು ಸಕ್ಕರೆ ಸೇವಿಸಬಾರದು
  • ಹಾಗಿದ್ದರೆ ಬೆಲ್ಲ ಇವರಿಗೆ ಪ್ರಯೋಜನಕಾರಿಯೇ?
  • ಬೆಲ್ಲ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲವೇ ?
ಡಯಾಬಿಟಿಸ್ ರೋಗಿಗಳು ತಿನ್ನಬಹುದೇ ಬೆಲ್ಲ?ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ ?  title=

ಬೆಂಗಳೂರು : ಮಧುಮೇಹ ಕಾಣಿಸಿಕೊಳ್ಳುವುದಕ್ಕೆ ವಯಸ್ಸಿನ ಮಿತಿಯಿಲ್ಲ. ಇದು ಯಾವ ವಯಸ್ಸಿನಲ್ಲಿ ಬೇಕಾದರೂ ಕಾಡಬಹುದು.ಮಧುಮೇಹದ ಸಮಸ್ಯೆ ಇದ್ದವರು ಏನು ತಿನ್ನಬೇಕು ಏನು ತಿನ್ನಬಾರದು ಎನ್ನುವುದು ಬಹಳ ಮುಖ್ಯ. ತಮ್ಮ ಊಟ ತಿಂಡಿಯ ಬಗ್ಗೆ ಕಾಳಜಿ ವಹಿಸಲಿಲ್ಲ ಎಂದಾದರೆ ಬಹಳಷ್ಟು ತೊಂದರೆ ಎದುರಿಸಬೇಕಾಗುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಿ,ಪ್ರಾಣಕ್ಕೆ ಸಂಚಕಾರವಾಗಲೂಬಹುದು.

ಮಧುಮೇಹ ರೋಗಿಗಳು ಸಕ್ಕರೆ ಸೇವಿಸಬಾರದು ಎಂದು ಹೇಳಲಾಗುತ್ತದೆ.ಆದರೆ ಸಕ್ಕರೆ ಬದಲು ಬೆಲ್ಲ ಸೇವಿಸಬಹುದು ಎನ್ನುವುದೇ ಬಹುತೇಕರ ನಂಬಿಕೆ. ಇದೇ ಮಾತನ್ನು ನಂಬಿಕೊಂಡು ನೀವು ಕೂಡಾ ಸಕ್ಕರೆಯ ಬದಲು ಬೆಲ್ಲವನ್ನು ಸೇವಿಸುತ್ತೀರಾ? ಹಾಗಿದ್ದರೆ ಈ ನಂಬಿಕೆಯ ಹಿಂದಿರುವ ಸತ್ಯವನ್ನು ಮೊದಲು ತಿಳಿದುಕೊಳ್ಳಿ. ಮಧುಮೇಹಿಗಳು ಸಕ್ಕರೆ ಬದಲು ಬೆಲ್ಲ ಸೇವಿಸುತ್ತಿದ್ದರೂ ಕೂಡಾ  ಅವರ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಬಹುದು.

ಇದನ್ನೂ ಓದಿ : ಮಧುಮೇಹಿಗಳಿಗೆ ವರದಾನ ಈ ಹಣ್ಣು.. ನಿತ್ಯ ಸೇವಿಸಿದರೇ ಎಂದಿಗೂ ಹೆಚ್ಚಾಗುವುದಿಲ್ಲ ಶುಗರ್!!

ಮಧುಮೇಹಿಗಳಿಗೆ ಬೆಲ್ಲ ಹಾನಿಕಾರಕ : 
ಆಯುರ್ವೇದದ ಪ್ರಕಾರ ಮಧುಮೇಹ ರೋಗಿಗಳು ಸಕ್ಕರೆ ಮಾತ್ರವಲ್ಲ ಬೆಲ್ಲ ಕೂಡಾ ತಿನ್ನಬಾರದು.ಶ್ವಾಸಕೋಶದ ಸೋಂಕು, ಗಂಟಲು ನೋವು, ಮೈಗ್ರೇನ್ ಮತ್ತು ಅಸ್ತಮಾ ಸಮಸ್ಯೆಯಲ್ಲಿ ಬೆಲ್ಲದ ಸೇವನೆ ಪ್ರಯೋಜನಕಾರಿಯಾಗಲಿದೆ.ಆದರೆ , ಮಧುಮೇಹದ ಸಮಸ್ಯೆಯಲ್ಲಿ ಬೆಲ್ಲವನ್ನು ತಿಂದರೆ ಆಗುವುದು ಪ್ರಯೋಜನವಲ್ಲ ಹಾನಿ.ಬೆಲ್ಲದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಸತು,ಮೆಗ್ನೀಸಿಯಮ್, ಪೊಟ್ಯಾಸಿಯಮ್,ತಾಮ್ರ ಮತ್ತು ರಂಜಕದಂತಹ ಅನೇಕ ಪೋಷಕಾಂಶಗಳಿವೆ. ಆದರೆ,ಇದು ಮಧುಮೇಹ ರೋಗಿಗಳಿಗೆ ಸೂಕ್ತವಲ್ಲ.

ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕ :
ಮಧುಮೇಹ ರೋಗಿಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರವನ್ನೇ ಸೇವಿಸಬೇಕು. ಆದರೆ, ಬೆಲ್ಲದಲ್ಲಿ ಶೇಕಡಾ 65ರಿಂದ 85ರಷ್ಟು ಸುಕ್ರೋಸ್ ಇರುತ್ತದೆ. ಬೆಲ್ಲದ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಹೆಚ್ಚಾಗಿರುತ್ತದೆ.ಹಾಗಾಗಿ ಇದರ ಸೇವನೆಯು ಮಧುಮೇಹ ರೋಗಿಗಳಿಗೂ ಅಪಾಯಕಾರಿ. 

ಇದನ್ನೂ ಓದಿ : ಹೈ ಬಿಪಿಗಾಗಿ ನಿತ್ಯ ಔಷಧಿ ತೆಗೆದುಕೊಳ್ಳುವ ಬದಲು ಈರುಳ್ಳಿ ರಸವನ್ನು ಹೀಗೆ ಸೇವಿಸಿ ! ನಾರ್ಮಲ್ ಆಗುವುದು ರಕ್ತದೊತ್ತಡ

ಬೆಲ್ಲದ ಬದಲಿಗೆ ಜೇನುತುಪ್ಪ : 
ಆರೋಗ್ಯ ತಜ್ಞರ ಪ್ರಕಾರ,ಮಧುಮೇಹ ರೋಗಿಗಳು ಬೆಲ್ಲವನ್ನು ತಿನ್ನದೆ ಸಾವಯವ ಜೇನುತುಪ್ಪವನ್ನು ಸೇವಿಸಬಹುದು.ಆದರೆ ಸಕ್ಕರೆಯ ಬದಲು ಬೆಲ್ಲವನ್ನು ಸೇವಿಸಬಹುದು ಎನ್ನುವುದು ಮಾತ್ರ ಜನರ ಮನದಲ್ಲಿರುವ ತಪ್ಪು ತಿಳುವಳಿಕೆ.

(ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News