ಬೆಂಗಳೂರು : ವಾಶಿಂಗ್ ಮೆಶಿನ್, ಫ್ರಿಜ್, ಮೈಕ್ರೋವೇವ್ ಮೊದಲಾದ ವಸ್ತುಗಳು ನಮ್ಮ ಜೀವನವನ್ನು ಸುಲಭವಾಗಿಸಿವೆ.  ಇವೆಲ್ಲಾ ಸೌಕರ್ಯ ಎಲ್ಲಾ ಮನೆಯಲ್ಲೂ ಈಗ ಕಂಡು ಬರುತ್ತದೆ. ಈಗ ತಿಂಗಳಿಗೆ ಬೇಕಾಗುವಷ್ಟು ದಿನಸಿ, ತರಕಾರಿ ಇತ್ಯಾದಿ ತಂದು ಫ್ರಿಜ್‍ ನಲ್ಲಿ (Fridge) ಇಟ್ಟು ತಿನ್ನುವುದು ಸಾಮಾನ್ಯವಾಗಿಬಿಟ್ಟಿದೆ. ದಿನಸಿ ಸಾಮಾನುಗಳನ್ನು ಫ್ರಿಜ್‍ ನಲ್ಲಿ  ಇಟ್ಟು ತಿನ್ನುವುದು ಎಷ್ಟು ಸೇಫ್.? ಎಷ್ಟು ದಿನ ದಿನಸಿ ಸಾಮಾನು, ತರಕಾರಿ, ಹಾಲು, ಹಣ್ಣು ಫ್ರಿಜ್‍ ನಲ್ಲಿ  ತಿನ್ನಬಹುದು.? ಹಾಲು (Milk), ಮೊಸರು, ಪನೀರ್, ಬ್ರೆಡ್, ಮೊಟ್ಟೆ, ತುಪ್ಪ, ಸಾಸ್, ಇವೆಲ್ಲಾ ಈಗ ಫ್ರಿಜ್‍ ನಲ್ಲೇ ಇರುತ್ತವೆ. ಕೆಲವರಂತೂ ತಯಾರು ಮಾಡಿದ ಚಪಾತಿಯನ್ನೂ ಫ್ರಿಜ್‍ ನಲ್ಲಿಟ್ಟು ಬಳಿಕ ತಿನ್ನುತ್ತಾರೆ. 


COMMERCIAL BREAK
SCROLL TO CONTINUE READING

ಕಟ್ ಮಾಡಿದ ಹಣ್ಣನ್ನು ಫ್ರಿಜ್‍ ನಲ್ಲಿಟ್ಟು ತಿನ್ನಬೇಡಿ :
ಕೆಲವರಿಗೆ ಒಂದು ಅಭ್ಯಾಸವಿರುತ್ತದೆ. ಸೇಬು, ಪಪ್ಪಾಯಿ ಹಣ್ಣು ಕಟ್ ಮಾಡಿ ಅರ್ಧ ತಿಂದು ಉಳಿದರ್ಧ ಭಾಗ ಫ್ರಿಜ್‍ ನಲ್ಲಿಟ್ಟು ಬಳಿಕ ತಿನ್ನುತ್ತಾರೆ. ಇದೊಂದು ಅನಾರೋಗ್ಯಕರ ಅಭ್ಯಾಸ. ಯಾವುದೇ ಕಟ್ ಮಾಡಿದ ಹಣ್ಣನ್ನು 6-8 ಗಂಟೆ ಮಾತ್ರ ಫ್ರಿಜ್‍ ನಲ್ಲಿಡಬಹುದು. ಸೇಬು ಕಟ್ (Sliced Apple) ಮಾಡಿದ 4 ಗಂಟೆಗಳಲ್ಲಿ ತಿನ್ನಬೇಕು. ಕಟ್ ಮಾಡಿದ ಪಪ್ಪಾಯಿ 6-8 ಗಂಟೆ ಅಷ್ಟೇ ಫ್ರಿಜ್‍ ನಲ್ಲಿ (fridge) ಸೇಫ್.  ಈ ಲಿಮಿಟ್ ಬಳಿಕ ಅದು ಫ್ರಿಜ್‍ ನಲ್ಲಿದ್ದರೆ ಅದು ಸ್ಲೋ ಪಾಯಿಸನ್ (Slow Poison) ರೀತಿಯಲ್ಲಿ ಬದಲಾಗುತ್ತದೆ. ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. 


ಇದನ್ನೂ ಓದಿ : ಶೀಘ್ರದಲ್ಲಿಯೇ ಶ್ರೀಸಾಮಾನ್ಯರ Vaccination ಅಭಿಯಾನ, ಈ ದಿನ ಶುರು ಆಗುವ ಸಾಧ್ಯತೆ


ಪನೀರ್ 2 ದಿನ ಮಾತ್ರ ಫ್ರಿಜ್‍ ನಲ್ಲಿರಲಿ:
ಸಾಮಾನ್ಯವಾಗಿ ಪನೀರ್ (Paneer) ವಾರಗಟ್ಟಲೆ ಮನೆಯ ಫ್ರಿಜ್‍ ನಲ್ಲಿರುತ್ತದೆ.  ಇದು ಸರಿಯಲ್ಲ. ರೂಂ ಟೆಂಪರೇಚರ್ (Room Temperature) ಪನೀರ್ ಒಂದೇ ದಿನ ಇಡಬಹುದು. ಫ್ರಿಜ್‍ ನ ಟೆಂಪರೇಚರಲ್ಲಿ ಎರಡು ದಿನ ಇಟ್ಟು ಬಳಿಕ ತಿನ್ನಬಹುದು. ಆದಷ್ಟೂ ಫ್ರೆಶ್ ಪನೀರ್ ತಿನ್ನಿ. Expiry date  ಹತ್ತಿರವಿರುವ ಪನೀರ್ ತಿನ್ನುವ ಗೋಜಿಗೆ ಹೋಗಬೇಡಿ. ಇನ್ನೂ ಹೆಚ್ಚು ದಿನ ಪನೀರ್ ಫ್ರಿಜ್ನಲ್ಲಿಡಬೇಕಾದ ಸನ್ನಿವೇಶ ಎದುರಾದರೆ, ಒಂದು ಪ್ಲಾಸ್ಟಿಕ್ ಬಾಕ್ಸ್ ಗೆ ನೀರು ಹಾಕಿ ಅದರೊಳಗೆ ಪನೀರ್ ಇಟ್ಟು ಫ್ರಿಜ್ ನಲ್ಲಿಡಿ.


ಫ್ರಿಜ್ನಲ್ಲಿ ಮೊಟ್ಟೆ ಇಡಬೇಡಿ :
ನಿಮಗೆ ಗೊತ್ತಿದೆ. ಮೊಟ್ಟೆ (Egg) ಇಡಲು ಫ್ರಿಜ್ನಲ್ಲಿ ಪ್ರತ್ಯೇಕ ಜಾಗ ಇದೆ. ಆದರೆ, ಗೊತ್ತಿರಲಿ. ಮೊಟ್ಟೆಯನ್ನು  ಫ್ರಿಜ್ನ ಲ್ಲಿಟ್ಟು ತಿನ್ನಬಾರದು. ಅದು ಯಾವತ್ತಿಗೂ ರೂಂ ಟೆಂಪರೇಚರ್ ನಲ್ಲಿರಬೇಕು. ಫ್ರಿಜ್ನನಲ್ಲಿರುವ ಮೊಟ್ಟೆಯಲ್ಲಿ ಪೌಷ್ಟಿಕಾಂಶ ಉಳಿಯುವುದಿಲ್ಲ.


ಇದನ್ನೂ ಓದಿ : Health Tips : ದೀರ್ಘಾಯುಷಿಗಳಾಗಿ.! ನಿಮ್ಮ ವಯಸ್ಸಿಗೆ ತಕ್ಕಂತೆ ಇಷ್ಟೇ ಪ್ರಮಾಣದಲ್ಲಿ ತುಪ್ಪ ತಿನ್ನಿ


ದಾಲ್ ಅಥವಾ ಬೇಳೆ ಸಾರು ಫ್ರಿಜ್ನಲ್ಲಿಡಬಹುದೇ..?
ದಾಲ್ ಅಥವಾ ಬೇಳೆ (daal) ಸಾರು ಫ್ರೆಶ್ ಮತ್ತು ಬಿಸಿ ಬಿಸಿ ಇದ್ದರೇನೇ ಉತ್ತಮ. ಒಂದು ವೇಳೆ ಏನಾದರೂ ಉಳಿದರೆ ಒಂದು ರಾತ್ರಿಯ ಮಟ್ಟಿಗೆ ಫ್ರಿಜ್ನಲ್ಲಿಟ್ಟು ತಿನ್ನಬಹುದು. ಅದಕ್ಕಿಂತ ಹೆಚ್ಚು ಹೊತ್ತು ಫ್ರಿಜ್ನಲ್ಲಿಟ್ಟು ತಿಂದರೆ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಸೃಷ್ಟಿಯಾಗುತ್ತದೆ.  



ಚಪಾತಿ ಫ್ರಿಜಲ್ಲಿಡಬೇಡಿ.:
ಕೆಲವರಿಗೆ ಚಪಾತಿ ಫ್ರಿಜಲ್ಲಿಟ್ಟು (roti) ಎರಡು ಮೂರು ದಿನ ಬಿಟ್ಟು ತಿನ್ನುವ ಅಭ್ಯಾಸ ಇದೆ. ಚಪಾತಿಯಲ್ಲಿ 24 ಗಂಟೆ ಮಾತ್ರ ಪೋಷಕಾಂಶ ಇರುತ್ತದೆ. ನಂತರ ಅದು ವ್ಯರ್ಥ. ಬಿಸಿ ಬಿಸಿ ತಾಜಾ ಚಪಾತಿ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದು. ಫ್ರಿಜ್ನಲ್ಲಿಟ್ಟು ತಿಂದರೆ, ಅಜೀರ್ಣ, ಹೊಟ್ಟೆ ನೋವು ಉಂಟಾಗುತ್ತದೆ. 


ಬ್ರೆಡನ್ನು 4-5 ದಿನ ಫ್ರಿಜ್ ನಲ್ಲಿಡಬಹುದು:


ಬ್ರೆಡ್ 4-5 ದಿನ ಫ್ರಿಜ್ನಲ್ಲಿಟ್ಟು ತಿಂದರೆ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಯಾವುದಾದರೂ ಒಂದು ಡಬ್ಬ ಅಥವಾ ಪೇಪರ ಲ್ಲಿ ಚೆನ್ನಾಗಿ ಸುತ್ತಿ ಫ್ರಿಜ್ನಲ್ಲಿಡಿ.


ಇದನ್ನೂ ಓದಿ : Military Diet ಅನುಸರಿಸಿ ಕೇವಲ ಮೂರೇ ದಿನಗಳಲ್ಲಿ ನಿಮ್ಮ ತೂಕ ಇಳಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.