ಮಹಾರಾಷ್ಟ್ರ : ಇದು ಒಂದು ಮೊಟ್ಟೆಯ ಕಥೆಯಲ್ಲ. ಮೂರು ಮೊಟ್ಟೆಯ ಕಥೆ. ಮೂರು ಮೊಟ್ಟೆಗಾಗಿ (Three Eggs) ಗಂಡಹೆಂಡತಿ ನಡುವೆ ನಡೆದ ಮಹಾಭಾರತದ ಕಥೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂದು ಹೇಳುತ್ತಾರೆ. ಆದರೆ, ಈ ಮೊಟ್ಟೆ ಮೇಲೆ ನಡೆದ ಕುರುಕ್ಷೇತ್ರ ಮನೆಯಿಂದ ಪೊಲೀಸ್ ಠಾಣೆಯ (Police Station) ತನಕವೂ ಬಂತು. ಪೊಲೀಸರಿಗೂ ಫಜೀತಿ ತಂದಿಟ್ಟಿತು. ಕೊನೆಗೆ ಪೊಲೀಸರೇ ಅದನ್ನು ಬಗೆಹರಿಸಿದ್ರು, ಅದು ಇನ್ನೂ ಸ್ವಾರಸ್ಯಕರ.
ಅಸಲಿಗೆ ಆಗಿದ್ದೇನು. .?
ಅಸಲಿಗೆ ಇದೊಂದು ಸಣ್ಣ ಜಗಳ.. ಗಂಡ ಮನೆಗೆ ಊಟಕ್ಕೆ ಬರುವಾಗ ಮೂರು ಮೊಟ್ಟೆ ತಂದಿದ್ದ. ಹೆಂಡತಿ ಕೈಗೆ ಮೂರು ಮೊಟ್ಟೆ (Egg) ಇಟ್ಟು, ಬುರ್ಜಿ ಮಾಡು ಅಂತ ಹೇಳಿ ಹೊರಗೆ ಹೋದ. ಗಂಡ ಊಟಕ್ಕೆ ಕುಳಿತಾಗ ಬುರ್ಜಿ ಕಾಣಿಸಲೇ ಇಲ್ಲ. ಎಲ್ಲಿ ಬುರ್ಜಿ..? ಅಂತಾ ಹೆಂಡತಿಗೆ ಪ್ರಶ್ನೆ ಮಾಡಿದ. ‘ನಾನು ಮೂರು ಮೊಟ್ಟೆ ಹಾಕಿ ಬುರ್ಜಿ (Egg Burji) ಏನೋ ಮಾಡಿದ್ದೆ. ಆದರೆ, ಆ ಬುರ್ಜಿ ಎಲ್ಲಾ ಮಗಳೆ ತಿಂದುಬಿಟ್ಲು. ನಿಮಗೆ ಮೊಟ್ಟೆ ಬುರ್ಜಿ ಉಳಿಸಲಿಲ್ಲ.ಅವಳೇ ಎಲ್ಲಾ ಖಾಲಿ ಮಾಡಿದ್ಳು.’ ಅಂತಾ ಮುಖ ತಿರುಗಿಸಿಕೊಂಡು ಪತ್ನಿ ಕಡೆಯಿಂದ ಉತ್ತರ. ರೋಸಿ ಹೋದ ಗಂಡ, ತನ್ನ ಹೆಂಡತಿಗೆ ‘ಮಂಗಳಾರತಿ’ ಶುರುಮಾಡಿದ. ಮಾತು ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಯಿತು. ಎಷ್ಟರ ಮಟ್ಟಿಗೆ ಅಂದರೆ ಗಂಡ ಹೆಂಡತಿ ಇಬ್ಬರೂ ಪೊಲೀಸ್ ಸ್ಟೇಷನ್ ಗೆ (Police station) ದೂರು ಕೊಟ್ರು.
ಇದನ್ನೂ ಓದಿ : ಸಚಿನ್ ತೆಂಡೂಲ್ಕರ್ ಗೆ ಶರದ್ ಪವಾರ್ ನೀಡಿದ ಆ ಸಲಹೆ ಏನು ಗೊತ್ತೇ?
ಪೊಲೀಸರಿಗೆ ಫಜೀತಿ..!
ಮೂರು ಮೊಟ್ಟೆಯ ಮಹಾಭಾರತ ಕೇಸ್ ಟೇಬಲ್ ಮೇಲೆ ಬಂದಾಗ ಪೊಲೀಸರಿಗೆ ಫಜೀತಿ. ನಗಬೇಕೋ ಬೈಬೇಕೋ ಅನ್ನೋ ಸಂದಿಗ್ಥತೆ. ಆದರೆ ಗಂಡ ಹೆಂಡತಿ ಪೊಲೀಸ್ ಸ್ಟೇಷನ್ ನಲ್ಲೂ ನಡೆದುಕೊಂಡ ರೀತಿ ನೋಡಿದಾಗ ಪೊಲೀಸರಿಗೆ (Police) ಕೇಸ್ ಸಿಕ್ಕಾಪಟ್ಟೆ ‘ಸೀರಿಯಸ್’ ಇದೆ ಅಂತನ್ನಿಸಿತು. ಇಬ್ಬರನ್ನೂ ಕೂರ್ಸಿ ಶಾಂತಿ ಸಂಧಾನ ಮಾತುಕತೆ ಆಯಿತು. ಇಬ್ರೂ ಜಪ್ಪಯ್ಯ ಅನ್ಲಿಲ್ಲ. ಮೊಟ್ಟೆ ಮಹಾಭಾರತದಲ್ಲಿ ಶಾಂತಿ ಮೂಡಲೇ ಇಲ್ಲ.
ಪೊಲೀಸರು ಕೊನೆಗೆ ಏನ್ ಮಾಡಿದ್ರು ಗೊತ್ತಾ..?
ಇದು ಹೀಗೆ ಬಗೆಹರಿಯಲ್ಲ ಅನ್ನೋದು ಮನವರಿಕೆಯಾಗುತ್ತಿದ್ದಂತೆ ಠಾಣಾಧಿಕಾರಿಗೆ ಒಂದು ಜಬರ್ ದಸ್ತ್ ಐಡಿಯಾ ಬಂತು. ಪೇದೆನೊಬ್ಬರನ್ನು ಕರೆದು ಮಾರ್ಕೆಟ್ ಗೆ (Market) ಕಳ್ಸಿ ಮೂರು ಮೊಟ್ಟೆ ತರ್ಸಿದ್ರು. ಗಂಡ – ಹೆಂಡತಿ ನಡುವೆ ಮೂರು ಮೊಟ್ಟೆ ಇಟ್ಟು, ಪಿರ್ಯಾದಿ ನೀಡಿದ ಮಹಿಳೆಗೆ (women) ಹೇಳಿದ್ರು. ಮತ್ತೆ ಮೂರು ಮೊಟ್ಟೆ ಇದೆ. ಈ ಮೊಟ್ಟೆ ಮನೆಗೆ ತಗೊಂಡುಹೋಗಿ ಮತ್ತೆ ಬುರ್ಜಿ ಮಾಡಿ ಗಂಡನಿಗೆ ಬಡ್ಸಿ. ನಿಮ್ ಕೇಸ್ ಅಲ್ಲಿಗೆ ಕ್ಲೋಸಾಗುತ್ತೆ ಅಂತಾ ಹೇಳಿದ್ರು. ಕೊನೆಗೂ ಪೊಲೀಸರು ಕೊಟ್ಟ ಮೂರುಮೊಟ್ಟೆ ಹಿಡ್ಕೊಂಡು ಗಂಡ – ಹೆಂಡತಿ ಮನೆ ಸೇರಿದ್ರು. ಮನೆಯಲ್ಲಿ ಮತ್ತೆ ‘ಬುರ್ಜಿ’ ಆಯಿತಾ ಅಥವಾ ‘ಮಹಾಭಾರತ’ ಮುಂದುವರಿಯಿತಾ ಎನ್ನುದು ಮಾತ್ರ ಗೊತ್ತಾಗಲಿಲ್ಲ. ಅಂದ ಹಾಗೆ ಈ ಸ್ವಾರಸ್ಯಕರ ಘಟನೆ ನಡೆದಿದ್ದು ಮಹಾರಾಷ್ಟ್ರದ ಬುಲ್ಡಾನದಲ್ಲಿರುವ ಸಖರ್ಕೇದ ಎಂಬ ಹಳ್ಳಿಯಲ್ಲಿ
ಇದನ್ನೂ ಓದಿ : ಸ್ನೇಹಿತೆಯ ಆತ್ಮಹತ್ಯೆಗೆ ಕಾರಣರಾಗಿದ್ದ ನಾಲ್ವರು ವಿದ್ಯಾರ್ಥಿನಿಯರಿಗೆ 5 ವರ್ಷ ಜೈಲು ಶಿಕ್ಷೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.