ಶೀಘ್ರದಲ್ಲಿಯೇ ಶ್ರೀಸಾಮಾನ್ಯರ Vaccination ಅಭಿಯಾನ, ಈ ದಿನ ಶುರು ಆಗುವ ಸಾಧ್ಯತೆ

Covid Vaccination - ಅನಾರೋಗ್ಯ ಪೀಡಿತರಿಗೆ ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಬಗ್ಗೆ ಆರೋಗ್ಯ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು  ಜಾರಿಗೊಳಿಸಬೇಕು ಎಂದು ಹೇಳಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಇದೆ ವೇಳೆ  ಕೇರಳ, ಮಹಾರಾಷ್ಟ್ರ, ಪಂಜಾಬ್, ಚತ್ತಿಸ್ಗಡ್  ಮತ್ತು ಮಧ್ಯಪ್ರದೇಶದಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

Written by - Nitin Tabib | Last Updated : Feb 22, 2021, 12:58 PM IST
  • ಪ್ರಸ್ತುತ ಆರ್ಯೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ.
  • ಸಾರ್ವಜನಿಕರ ವ್ಯಾಕ್ಸಿನೇಷನ್ ಗಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಶನ್.
  • ಪತ್ರದಲ್ಲಿ ಲಸಿಕಾಕರಣಕ್ಕಾಗಿ ಸಿದ್ಧತೆ ನಡೆಸಲು ಅವರು ರಾಜ್ಯಗಳಿಗೆ ಸೂಚಿಸಿದ್ದಾರೆ
ಶೀಘ್ರದಲ್ಲಿಯೇ ಶ್ರೀಸಾಮಾನ್ಯರ  Vaccination ಅಭಿಯಾನ, ಈ ದಿನ ಶುರು ಆಗುವ ಸಾಧ್ಯತೆ  title=
Corona Vaccination Update (File Photo)

ನವದೆಹಲಿ: Covid Vaccination - ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಕೊವಿಡ್ ಲಸಿಕೆ ನೀಡಿದ ಬಳಿಕ ಇದೀಗ ಶ್ರೀಸಾಮಾನ್ಯ ಜನರಿಗೆ  ಕರೋನಾ ಲಸಿಕೆ ಅನ್ವಯಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ. 50 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಮತ್ತು ಅನಾರೋಗ್ಯ ಪೀಡಿತರಿಗೆ ಲಸಿಕೆ ಹಾಕುವುದು ಮುಂದಿನ ತಿಂಗಳಿನಿಂದ ಅಂದರೆ ಮಾರ್ಚ್ 1 ರಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ (Rajesh Bhushan) ಅವರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ರಾಜ್ಯಗಳು ಎಲ್ಲಾ ರೀತಿಯ ಆರೋಗ್ಯ ಕೇಂದ್ರಗಳಲ್ಲಿ ಸಾಮೂಹಿಕ ಲಸಿಕೆ ಹಾಕಲು ಸಿದ್ಧತೆ ನಡೆಸಬೇಕು ಎಂದು ಸೂಚಿಸಿದ್ದಾರೆ. ಏಕೆಂದರೆ 50 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಅನಾರೋಗ್ಯ ಪೀಡಿತರಿಗೆ ಲಸಿಕೆ ಹಾಕುವುದು ಮಾರ್ಚ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಾರದಲ್ಲಿ ನಾಲ್ಕು ದಿನ ನಡೆಯಲಿದೆ ಲಸಿಕಾಕರಣ ಕಾರ್ಯಕ್ರಮ
ಮಾರ್ಚ್ 1 ರಿಂದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಲು ಸಿದ್ಧತೆ ಆರಂಭಿಸುವಂತೆ ಆರೋಗ್ಯ ಕಾರ್ಯದರ್ಶಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಇವುಗಳಲ್ಲಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪ ಕೇಂದ್ರಗಳು ಶಾಮೀಲಾಗಿವೆ. ವ್ಯಾಕ್ಸಿನೇಷನ್ಗೆ ಅಗತ್ಯವಿರುವ ಕೋಲ್ಡ್ ಚೈನ್ ಗಳನ್ನು  ಸುನಿಶ್ಚಿತಗೊಳಿಸಲು ಅವರು ತಿಳಿಸಿದ್ದಾರೆ. ಕರೋನಾ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ವಾರದಲ್ಲಿ ಕನಿಷ್ಠ ನಾಲ್ಕು ದಿನಗಳು ನಡೆಯಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕೇಂದ್ರಗಳಿಗೆ ಸೂಚಿಸಲಾಗಿದೆ ಮತ್ತು ಮಾರ್ಚ್ 1 ರಿಂದ ಇದು ವಿಸ್ತೃತ ರೂಪದಲ್ಲಿ ನಡೆಯಬೇಕು ಎಂದು ಅವರು ತಮ್ಮ ಪತ್ರದಲ್ಲಿ ಸೂಚಿಸಿದ್ದಾರೆ.

ಹಲವರು ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ
'ಹಿಂದೂಸ್ತಾನ್' ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ರಾಜ್ಯದ ಆರೋಗ್ಯ ಅಧಿಕಾರಿಗಳಿಗೆ ಈ ಕುರಿತು ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು ಎಂದು ರಾಜ್ಯದ ಮುಖ್ಯ ಸಚಿವರಿಗೆ ಸೂಚಿಸಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳು, ಜನವರಿ 16 ರಂದು ಲಸಿಕಾಕರಣ ಆರಂಭಗೊಂಡಿತ್ತು ಹಾಗೂ ಫೆಬ್ರವರಿ 18 ರವರೆಗೆ ಸುಮಾರು ಒಂದು ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಆದರೆ, ಅಪಾರ ಸಂಖ್ಯೆಯ ಆರೋಗ್ಯ ಹಾಗೂ ಮುಂಚೂಣಿಯಲ್ಲಿರುವ ಕಾರ್ಯಕರ್ತರು ಇದುವರೆಗೆ ಲಸಿಕೆ (Corona Vaccine) ಹಾಕಿಸಿಕೊಂಡಿಲ್ಲ. ಹೀಗಾಗಿ ಅವರಿಗೂ ಕೂಡ ಲಸಿಕೆ ಹಾಕುವುದನ್ನು ಖಚಿತಪಡಿಸಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ- Corona Vaccine Updates: ಕೊರೊನಾ ವ್ಯಾಕ್ಸಿನ್ ಕುರಿತು ವದಂತಿ ಹಬ್ಬಿಸಿದರೆ ಹುಷಾರ್! ಕೇಂದ್ರದ ವಾರ್ನಿಂಗ್

ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಬಗ್ಗೆ ಕಳವಳ
50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರನ್ನು ನೋಂದಾಯಿಸಲು ಕೋವಿನ್‌ನಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಭೂಷಣ್ ಹೇಳಿದ್ದಾರೆ. ದೇಶದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ಅನಾರೋಗ್ಯ ಮತ್ತು ರೋಗಿಗಳ ಸಂಖ್ಯೆ ಸುಮಾರು 27 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಭೂಶನ್ ಹೇಳಿದ್ದಾರೆ. ಇದೆ ವೇಳೆ  ಕೇರಳ, ಮಹಾರಾಷ್ಟ್ರ, ಪಂಜಾಬ್, ಚತ್ತಿಸ್ಗಡ್  ಮತ್ತು ಮಧ್ಯಪ್ರದೇಶದಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಕುರಿತು ಅವರು ಕಳವಳ ವ್ಯಕ್ತಪಡಿಸಿದ್ದಾರೆ.  ಕಳೆದ ಕೆಲವು ದಿನಗಳಲ್ಲಿ ಈ ರಾಜ್ಯಗಳ ಕರೋನಾ ಸೋಂಕಿತರ ಸಂಖ್ಯೆಯಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ಜನರು ತಳೆದಿರುವ ನಿರ್ಲಕ್ಷ ಧೋರಣೆಯೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಇದನ್ನೂ ಓದಿ- Corona Vaccine Update: ಈ ರಾಜ್ಯಗಳಲ್ಲಿ ಕೊರೊನಾ ಲಸಿಕೆಯ ಉಚಿತ ವಿತರಣೆ

ಪುಣೆಯಲ್ಲಿ ನಿರ್ಬಂಧ
ಹೆಚ್ಚುತ್ತಿರುವ ಕರೋನಾ (Coronavirus) ಸೋಂಕಿನ ಪ್ರಕರಣಗಳು ಮತ್ತೆ ಮಹಾರಾಷ್ಟ್ರ ಸರ್ಕಾರವನ್ನು ಪೇಚಿಗೆ ಸಿಲುಕಿಸಿವೆ.  ಸೋಂಕು ತಡೆಗಟ್ಟಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದರ ಅಡಿಯಲ್ಲಿ ಪುಣೆ ಜಿಲ್ಲಾಡಳಿತವು ರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ ಜನರ ಅನಾವಶ್ಯಕ ಓಡಾಟ ನಿಷೇಧ  ಸೇರಿದಂತೆ ಕೆಲವು ನಿರ್ಬಂಧಗಳನ್ನು ವಿಧಿಸಲು ನಿರ್ಧರಿಸಿದೆ. ಕಂಟೆನ್ಮೆಂಟ್ ಜೋನ್ ಗಳನ್ನು ನಿರ್ಮಿಸುವುದು, Covid -19 ಆರೈಕೆ ಕೇಂದ್ರಗಳನ್ನು ಪುನಃ ಸ್ಥಾಪಿಸುವುದು, ಸೋಂಕಿತರನ್ನು ಪತ್ತೆ ಹಚ್ಚುವುದು ಮತ್ತು ತನಿಖೆ ಹೆಚ್ಚಿಸುವ ಮೂಲಕ ಸೋಂಕನ್ನು ತಡೆಗಟ್ಟಲು ಪ್ರಯತ್ನಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಮಾಹಿತಿಯ ಪ್ರಕಾರ, ಪುಣೆ ವಿಭಾಗದಲ್ಲಿ ಶನಿವಾರ 998 ಹೊಸ ಕರೋನಾ ಪ್ರಕರಣಗಳು ವರದಿಯಾಗಿದ್ದು, ಒಂಬತ್ತು ರೋಗಿಗಳು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ-Covishield ಲಸಿಕೆಯ ಬೆಲೆ ಕುರಿತು ಮಹತ್ವದ ಹೇಳಿಕೆ ನೀಡಿದ Adar Poonawalla

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News