Foods For Diabetes: ಇತ್ತೀಚಿನ ದಿನಗಳಲ್ಲಿ ಹಲವು ಜನರು ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ವಾಸ್ತವ ಎಂದರೆ ಮಧುಮೇಹ ಬಂತೆಂದರೆ ಅದನ್ನು ಸಂಪೂರ್ಣ ಗುಣಪಡಿಸುವುದು ಕಷ್ಟ ಸಾಧ್ಯ, ಆದರೆ ನೀವು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ ಮತ್ತು ಅದು ಸಾಧ್ಯ ಕೂಡ ಹೌದು. ಏಕೆಂದರೆ ಮಧುಮೇಹವನ್ನು ನಿರ್ವಹಿಸದಿರುವುದು ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹವು ವಾಸಿಯಾಗದ ಕಾಯಿಲೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಸಹ ಮಧುಮೇಹ ರೋಗಿಗಳಾಗಿದ್ದರೆ, ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ಇಲ್ಲಿ ನಾವು ನಿಮಗೆ ಕೆಲ ಸಂಗತಿಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅವುಗಳನ್ನು ಸೇವಿಸುವ ಮೂಲಕ ನೀವು ಮಧುಮೇಹವನ್ನು ನಿಯಂತ್ರಣದದಲ್ಲಿಟ್ಟುಕೊಳ್ಳಬಹುದು, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು, ಇದಕ್ಕಾಗಿ ನೀವು ನಿಮ್ಮ ಆಹಾರದಲ್ಲಿ ಯಾವ ಸಂಗತಿಗಳನ್ನು ಶಾಮೀಳುಗೊಲಿಸಬೇಕು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಮಧುಮೆಹಿಗಳೇ ನಿಮ್ಮ ಆಹಾರದಲ್ಲಿರಲಿ ಈ ಸೂಪರ್ ಫುಡ್ ಗಳು
ದಾಲ್ಚಿನ್ನಿ
ದಾಲ್ಚಿನ್ನಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಊಟದ ನಂತರ ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಏರುತ್ತದೆ, ಆಗ ಇದು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.ದಾಲ್ಚಿನ್ನಿ ಸೇವನೆಯು ನಿಮ್ಮ ತೂಕವನ್ನು ಸಹ ನಿಯಂತ್ರಣದಲ್ಲಿಡುತ್ತದೆ. ಹೀಗಾಗಿ ನೀವು ನಿಮ್ಮ ಆಹಾರದಲ್ಲಿ ದಾಲ್ಚಿನ್ನಿಯನ್ನು ಸೇರಿಸಬಹುದು, ಇದನ್ನು ಬಳಸಲು, ಒಂದು ಚಮಚ ದಾಲ್ಚಿನ್ನಿಗೆ ಅರ್ಧ ಚಮಚ ಅರಿಶಿನ ಮತ್ತು ಅರ್ಧ ಚಮಚ ಮೆಂತ್ಯ ಪುಡಿಯನ್ನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.


ಕರಿ ಮೆಣಸು
ಕರಿ ಮೆಣಸನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ, ಏಕೆಂದರೆ ಇದರಲ್ಲಿ ಪೈಪೆರಿನ್ ಇದೆ, ಇದು ಮಧುಮೇಹ ಹೆಚ್ಚಾಗಲು ಬಿಡುವುದಿಲ್ಲ.ಇದನ್ನು ಬಳಸಲು, ಒಂದು ಕರಿಮೆಣಸನ್ನು ಪುಡಿಮಾಡಿ, ಖಾಲಿ ಹೊಟ್ಟೆಯಲ್ಲಿ ಸಣ್ಣ ಚಮಚ ಅರಿಶಿನ ಪುಡಿಯೊಂದಿಗೆ ಸೇವಿಸಬೇಕು.


ಇದನ್ನೂ ಓದಿ-Health Care Tips: ಚಳಿಗಾಲದಲ್ಲಿ ನಿಮ್ಮ ಈ ಅಭ್ಯಾಸ ಅಧಿಕ ರಕ್ತದೊತ್ತದಕ್ಕೆ ಕಾರಣವಾಗಬಹುದು... ಎಚ್ಚರ!


ಮೆಂತೆ ಕಾಳು
ಮೆಂತ್ಯದ ರುಚಿ ಕಹಿಯಾಗಿರುತ್ತದೆ, ಆದರೆ ಮಧುಮೇಹ, ಬೊಜ್ಜು ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಇದು ಯಾವುದೇ ಗಿಡಮೂಲಿಕೆಗಿಂತ ಕಡಿಮೆಯಿಲ್ಲ.ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿದೆ, ಆದ್ದರಿಂದ ಇದನ್ನು ಮಧುಮೇಹ ಆಹಾರದಲ್ಲಿ ನೀವು ಶಾಮೀಲುಗೊಳಿಸಬಹುದು. ಇದನ್ನು ಬಳಸಲು ಒಂದು ಚಮಚ ಮೆಂತ್ಯ ಬೀಜಗಳ ಪುಡಿ ತೆಗೆದುಕೊಳ್ಳಿ ಮತ್ತು ಅದನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಿರಿ, ನೀವು ಮಲಗುವ ವೇಳೆ ಅಥವಾ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಬಹುದು.


ಇದನ್ನೂ ಓದಿ-Health Tips: ಬೆಳಗ್ಗೆ ಎದ್ದಾಕ್ಷಣ ಈ ಲಕ್ಷಣಗಳು ಕಂಡರೆ ತಕ್ಷಣ ಎಚ್ಚೆತ್ತುಕೊಳ್ಳಿ, ಕಾರಣ ಇಲ್ಲಿದೆ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.