Health Tips: ಬೆಳಗ್ಗೆ ಎದ್ದಾಕ್ಷಣ ಈ ಲಕ್ಷಣಗಳು ಕಂಡರೆ ತಕ್ಷಣ ಎಚ್ಚೆತ್ತುಕೊಳ್ಳಿ, ಕಾರಣ ಇಲ್ಲಿದೆ

Diabetes Symptoms:ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರನ್ನು ತೊಂದರೆಗೀಡು ಮಾಡುವ ಕಾಯಿಲೆಗಳಲ್ಲಿ ಮಧುಮೇಹ ಕೂಡ ಒಂದು. ಹೀಗಿರುವಾಗ ಬೆಳಗ್ಗೆ ಎದ್ದಾಕ್ಷಣ ನಿಮ್ಮ ಶರೀರದಲ್ಲಿ ಕೆಲ ಲಕ್ಷಣಗಳು ಕಂಡರೆ, ಮರೆತೂ ಕೂಡ ನೀವು ಅವುಗಳನ್ನು ನಿರ್ಲಕ್ಷಿಸಬಾರದು.  

Written by - Nitin Tabib | Last Updated : Jan 16, 2023, 08:14 PM IST
  • ಮಧುಮೇಹ ಹೊಂದಿರುವ ಜನರು ಯಾವುದೇ ಸಮಯದಲ್ಲಿ ಅದರ ಲಕ್ಷಣಗಳನ್ನು ಅನುಭವಿಸಬಹುದು.
  • ಇದೇ ವೇಳೆ ಮಧುಮೇಹದ ಲಕ್ಷಣಗಳು ಬೆಳಗ್ಗೆ ಎದ್ದ ನಂತರವೂ ಕಾಣಿಸಿಕೊಳ್ಳಬಹುದು.
Health Tips: ಬೆಳಗ್ಗೆ ಎದ್ದಾಕ್ಷಣ ಈ ಲಕ್ಷಣಗಳು ಕಂಡರೆ ತಕ್ಷಣ ಎಚ್ಚೆತ್ತುಕೊಳ್ಳಿ, ಕಾರಣ ಇಲ್ಲಿದೆ title=
Diabetes Symptoms In Morning

Early Morning Diabetes Symptoms: ಮಧುಮೇಹವು ಸಾಮಾನ್ಯ ಸಮಸ್ಯೆಯಾಗಿದೆ, ಇದರಿಂದಾಗಿ ಹೆಚ್ಚಿನ ಜನರು ಇತ್ತೀಚಿನ ದಿನಗಳಲ್ಲಿ ತೊಂದರೆಗೊಳಗಾಗುತ್ತಿದ್ದಾರೆ, ಮಧುಮೇಹದಲ್ಲಿ, ವ್ಯಕ್ತಿಯ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯ ಜೀವಕ್ಕೂ ಕೂಡ ಅಪಾಯ ಎದುರಾಗಬಹುದು. ಮತ್ತೊಂದೆಡೆ, ಮಧುಮೇಹ ಹೊಂದಿರುವ ಜನರು ಯಾವುದೇ ಸಮಯದಲ್ಲಿ ಅದರ ಲಕ್ಷಣಗಳನ್ನು ಅನುಭವಿಸಬಹುದು. ಇದೇ ವೇಳೆ ಮಧುಮೇಹದ ಲಕ್ಷಣಗಳು ಬೆಳಗ್ಗೆ ಎದ್ದ ನಂತರವೂ ಕಾಣಿಸಿಕೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ, ಬೆಳಗ್ಗೆ ಎದ್ದ ತಕ್ಷಣ ನಿಮಗೆ ಕೆಲ ರೋಗಲಕ್ಷಣಗಳು ಕಂಡುಬಂದರೆ, ನೀವು ಮರೆತೂ ಕೂಡ ಅವುಗಳನ್ನು ನಿರ್ಲಕ್ಷಿಸಬಾರದು. ಬೆಳಗ್ಗೆ ಎದ್ದ ತಕ್ಷಣ ಕಂಡುಬರುವ ಆ ಮಧುಮೇಹದ ಲಕ್ಷಣಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 

ನೀವು ಮಧುಮೇಹ ಹೊಂದಿದ್ದರೆ ಬೆಳಗ್ಗೆ ಎದ್ದ ತಕ್ಷಣ ಈ ಲಕ್ಷಣಗಳು ಕಂಡುಬರುತ್ತವೆ
ಗಂಟಲು ಒಣಗುವಿಕೆ
ಬೆಳಗ್ಗೆ ಎದ್ದ ತಕ್ಷಣ ಬಾಯಾರಿಕೆಯ ಅನುಭವವಾದರೆ ಅದು ಮಧುಮೇಹದ ಲಕ್ಷಣವಾಗಿರಬಹುದು.ಇನ್ನೊಂದೆಡೆ ಪ್ರತಿದಿನ ಬೆಳಗ್ಗೆ ಎದ್ದ ನಂತರ ನೀರು ಕುಡಿಯಬೇಕು ಎಂಬ ಆಸೆ ಇದ್ದರೆ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳಬೇಕು. ಏಕೆಂದರೆ ಒಣ ಗಂಟಲು ಮಧುಮೇಹದ ಆರಂಭಿಕ ಚಿಹ್ನೆಯಾಗಿರಬಹುದು.

ಆಯಾಸ
ಪ್ರತಿಯೊಬ್ಬರೂ ಬೆಳಗ್ಗೆ ಎದ್ದ ನಂತರ ಹೊಸ ಚೈತನ್ಯವನ್ನು ಅನುಭವಿಸಬೇಕು. ಆದರೆ ಬೆಳಗ್ಗೆ ಎದ್ದಾಕ್ಷಣ ನಿಮಗೆ ಸುಸ್ತು ಅನುಭವಕ್ಕೆ ಬಂದರೆ, ಅದು ಮಧುಮೇಹದ ಲಕ್ಷಣವಾಗಿರಬಹುದು. ಹೀಗಾಗಿ ಅದನ್ನು ನಿರ್ಲಕ್ಷಿಸಬೇಡಿ. ಇದು ಸಂಭವಿಸಿದಲ್ಲಿ, ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.

ಮಂದ ದೃಷ್ಟಿ
ನೀವು ಸ್ಪಷ್ಟವಾಗಿ ನೋಡಲು ಸಾಧ್ಯವಾಗದಿದ್ದರೆ ಅಥವಾ ಬೆಳಿಗ್ಗೆ ಎದ್ದ ತಕ್ಷಣ ನೀವು ನಿಮ್ಮ ದೃಷ್ಟಿ ಅಸ್ಪಷ್ಟವಾಗಿದ್ದರೆ, ಅದು ಮಧುಮೇಹದ ಲಕ್ಷಣವಾಗಿರಬಹುದು. ಅದನ್ನು ಸಾಮಾನ್ಯ ಎಂದು ನಿರ್ಲಕ್ಷಿಸಬೇಡಿ. ಏಕೆಂದರೆ ಮಧುಮೇಹದಿಂದ ದೃಷ್ಟಿ ಮಂದವಾಗುತ್ತದೆ. ಇದು ಒಂದು ಅಥವಾ ಎರಡೂ ಕಣ್ಣುಗಳಿಗೆ ಸಂಭವಿಸಬಹುದು.

ಇದನ್ನೂ ಓದಿ-Health Care Tips: ಈ ಮೊಳಕೆ ಕಾಳು ಸೇವನೆಯಿಂದ ಆರೋಗ್ಯಕ್ಕೆ ಹಲವು ಲಾಭಗಳಾಗುತ್ತವೆ

ತುರಿಕೆ
ದೇಹದಲ್ಲಿ ತುರಿಕೆ ಮಧುಮೇಹದ ಸಂಕೇತವಾಗಿದೆ. ಬೆಳಗ್ಗೆ ಎದ್ದ ನಂತರ ತುರಿಕೆ ಅನುಭವಕ್ಕೆ ಬಂದರೆ ಅದನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಚರ್ಮದ ಮೇಲೆ ತುರಿಕೆ ಮಧುಮೇಹದ ದೊಡ್ಡ ಲಕ್ಷಣವಾಗಿದೆ.

ಇದನ್ನೂ ಓದಿ-Weight Loss Drink: ತೂಕ ಇಳಿಕೆಗೆ ಇಲ್ಲಿದೆ ಒಂದು ಅದ್ಭುತ ಪಾನೀಯ, ಕೊಲೆಸ್ಟ್ರಾಲ್ ಕೂಡ ನಿಯಂತ್ರಣದಲ್ಲಿರುತ್ತದೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News