Sleeplessness: ಇಂದಿನ ದಿನಗಳಲ್ಲಿ ಹೆಚ್ಚಿನವರು ನಿದ್ದೆ ಬಾರದೆ ತೊಂದರೆ ಅನುಭವಿಸುತ್ತಿದ್ದಾರೆ. ರಾತ್ರಿ ಹಾಸಿಗೆಯ ಮೇಲೆ ಗಂಟೆಗಟ್ಟಲೆ ಮಲಗಿದರೂ ನಿದ್ದೆ ಬರುವುದಿಲ್ಲ. ನಿದ್ರಾಹೀನತೆಯ ಸಮಸ್ಯೆಯಿಂದ ನೀವು ಸಹ ಹೋರಾಡುತ್ತಿದ್ದರೆ, ನೀವು ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳಬೇಕು. ನಿಮಗೆ ನಿದ್ದೆ ಬರದಿದ್ದರೆ ಯಾವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ನಾವು ಇಲ್ಲಿ ಹೇಳುತ್ತೇವೆ?


COMMERCIAL BREAK
SCROLL TO CONTINUE READING

ತಿಂದ ತಕ್ಷಣ ಮಲಗಬೇಡಿ : ನೀವು ಆಳವಾದ ನಿದ್ರೆ ಬಯಸಿದರೆ, ನಂತರ ಊಟ ಮಾಡಿದ ತಕ್ಷಣ ನಿದ್ರೆ ಮಾಡಬಾರದು. ಉತ್ತಮ ನಿದ್ರೆಗಾಗಿ, ನೀವು ಊಟದ ನಂತರ ಕನಿಷ್ಟ 2 ಗಂಟೆಗಳ ನಂತರ ಮಲಗಬೇಕು. ತಿಂದ ತಕ್ಷಣ ಮಲಗುವುದು ಗ್ಯಾಸ್ ಅಥವಾ ವಾಂತಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಆಹಾರ ತಿಂದ ತಕ್ಷಣ ಮಲಗಬೇಡಿ.


ಇದನ್ನೂ ಓದಿ : ಈ ಹಸಿರು ಪಾನೀಯ ಸೇವಿಸಿ ಕೆಟ್ಟ ಕೊಲೆಸ್ಟ್ರಾಲ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಗುಡ್ ಬೈ ಹೇಳಿ!


ಬಾದಾಮಿ ಹಾಲು : ನಿಮಗೂ ರಾತ್ರಿ ನಿದ್ದೆ ಬಾರದ ಸಮಸ್ಯೆ ಇದ್ದರೆ ಮಲಗುವ ಮುನ್ನ ಬಾದಾಮಿ ಹಾಲು ಕುಡಿಯಿರಿ. ಏಕೆಂದರೆ ಇದರಲ್ಲಿ ಪೋಷಕಾಂಶಗಳಿದ್ದು ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ. ಹಾಗಾಗಿ ನಿದ್ರಾಹೀನತೆಯ ಸಮಸ್ಯೆಯಿಂದ ತೊಂದರೆಯಾಗಿದ್ದರೆ ಬಾದಾಮಿ ಹಾಲನ್ನು ಕುಡಿಯಬಹುದು.


ಚೆರ್ರಿ ಸೇವಿಸಿ : ನಿದ್ರಾಹೀನತೆಯ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ, ಆಹಾರದಲ್ಲಿ ಚೆರ್ರಿಗಳನ್ನು ಸೇರಿಸಿಕೊಳ್ಳಬಹುದು, ಏಕೆಂದರೆ ಚೆರ್ರಿಗಳು ಹೇರಳವಾದ ಮೆಲಟೋನಿನ್ ಅನ್ನು ಒಳಗೊಂಡಿರುತ್ತವೆ, ಇದು ದೇಹಕ್ಕೆ ವಿಶ್ರಾಂತಿ ನೀಡುತ್ತೆ ಮತ್ತು ನಿದ್ರೆಗೆ ಸಹಾಯ ಮಾಡುತ್ತದೆ. ಈ ಸಂದರ್ಭದಲ್ಲಿ, ಮಲಗುವ ಒಂದು ಗಂಟೆ ಮೊದಲು, ನೀವು ಚೆರ್ರಿ ರಸವನ್ನು ಕುಡಿಯಬಹುದು. ಹೀಗೆ ಮಾಡುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ.


ಅರಿಶಿನದ ಹಾಲು : ನಿದ್ರೆ ಬರದಿದ್ದರೆ ಅರಿಶಿನದ ಹಾಲು ಕುಡಿಯಬಹುದು. ಈ ಹಾಲನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯ ಸದೃಢವಾಗುವುದಲ್ಲದೆ ನಿದ್ರೆಯೂ ಬರುತ್ತದೆ. ಉತ್ತಮ ನಿದ್ರೆಗಾಗಿ ಮಲಗುವ ಮುನ್ನ ಒಂದು ಲೋಟ ಅರಿಶಿನದ ಹಾಲನ್ನು ಸೇವಿಸಿ.


ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಪ್ಪಿಯೂ ತಿನ್ನಬೇಡಿ, ಎದುರಾಗುವುದು ಈ ಸಮಸ್ಯೆ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.