ಬೆಂಗಳೂರು : ಇಂದಿನ ಕಾಲದಲ್ಲಿ ಮೊಬೈಲ್ (Mobile) ನಮ್ಮ ಜೀವನದ ಪ್ರಮುಖ ಭಾಗವಾಗಿ ಬಿಟ್ಟಿದೆ. ಸ್ವಲ್ಪ ಸಮಯ ಸಿಕ್ಕಿದರೂ ಸಾಕು, ಮೊಬೈಲ್ ನೋಡಲು ಶುರು ಮಾಡಿ ಬಿಡುತ್ತೇವೆ. ಇನ್ನು ಹೆಚ್ಚಿನವರಿಗೆ  ಮಲಗುವ ಸಮಯದಲ್ಲಿ (Sleeping time), ಬಹಳಷ್ಟು ಹೊತ್ತು ಮೊಬೈಲ್ ನೋಡುವ ಅಭ್ಯಾಸವಿರುತ್ತದೆ. ಆದರೆ ಈ ರೀತಿ ಮೊಬೈಲ್‌ಗಳನ್ನು ಬಳಸುವುದು ಬಹಳ ಅಪಾಯಕಾರಿ. ನಿಮಗೂ ಮಲಗುವ  ಮುನ್ನ ಮೊಬೈಲ್ ನೋಡಿಕೊಂಡು ಮಲಗುವ ಕೆಟ್ಟ ಅಭ್ಯಾಸವಿದ್ದರೆ ಈ ಸುದ್ದಿಯನ್ನೊಮ್ಮೆ ಓದಿ.


COMMERCIAL BREAK
SCROLL TO CONTINUE READING

ಅತಿಯಾದ ಮೊಬೈಲ್ ಚಟಕ್ಕೆ ಬಿದ್ದರೆ ಎದುರಾಗುವ ಸಮಸ್ಯೆಗಳಿವು : 


ನಿದ್ರೆಯ ಕೊರತೆ :
ರಾತ್ರಿ ಮಲಗುವ ಮುನ್ನ ಮೊಬೈಲ್ (Mobile) ಬಳಸುವ ಜನರು ಸಾಮಾನ್ಯಕ್ಕಿಂತ ಕಡಿಮೆ ನಿದ್ದೆ ಮಾಡುತ್ತಾರೆ. ಅಧ್ಯಯನದ ಪ್ರಕಾರ, ಒಬ್ಬ ವ್ಯಕ್ತಿ ರಾತ್ರಿ ಮಲಗುವ ಮೊದಲು (Before sleeping) ಮೊಬೈಲ್ ನೋಡುತ್ತಿದ್ದರೆ, ಆತ ಸಾಮಾನ್ಯಕ್ಕಿಂತ ಕಡಿಮೆ ನಿದ್ದೆ ಮಾಡುತ್ತಾನೆ. ಅದೇ ಒಬ್ಬ ಮಲಗುವ ಮುನ್ನ ಪುಸ್ತಕ (Book) ಓದಿಕೊಂಡು ನಿದ್ರೆಗೆ ಜಾರಿದರೆ ಹೆಚ್ಚು ನಿದ್ದೆ  ಮಾಡುತ್ತಾನೆ ಎನ್ನುವುದು ಅಧ್ಯಯನದಲ್ಲಿ ಸಾಬೀತಾಗಿದೆ.


ಇದನ್ನೂ ಓದಿ : ಪೋಷಕಾಂಶಗಳ ಆಗರವಾಗಿರುವ ಈ ಆಹಾರ ಸೇವನೆಯಿಂದಲೂ ಕೂಡ ತೂಕ ಇಳಿಯುತ್ತದೆ


ಏಕಾಗ್ರತೆಯ ಕೊರತೆ :
ನಿದ್ರೆ ಅಂದರೆ ಅದು ನಮ್ಮ ಮನಸ್ಸಿನ ವಿಶ್ರಾಂತಿ. ವ್ಯಕ್ತಿಯ ನಿದ್ದೆ ಕಡಿಮೆ ಆದರೆ, ಆತನ  ಮನಸ್ಸಿಗೆ ವಿಶ್ರಾಂತಿ ಕಡಿಮೆಯಾಗಿದೆ ಎಂದೇ ಅರ್ಥ. ಇದರಿಂದಾಗಿ ವ್ಯಕ್ತಿಯಲ್ಲಿ ಏಕಾಗ್ರತೆಯ (Concentration) ಕೊರತೆ ಉಂಟಾಗುತ್ತದೆ. ಯಾವ ಕೆಲಸದಲ್ಲಿಯೂ ಸರಿಯಾಗಿ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಪರಿಣಾಮ ಕಾರ್ಯಕ್ಷಮತೆಯ ಮೇಲೆ ಆಗುತ್ತದೆ. ಇದರೊಂದಿಗೆ ವ್ಯಕ್ತಿಯ ಸ್ಮರಣೆಯೂ (Memory) ಕಡಿಮೆಯಾಗುತ್ತದೆ.


ದೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ: 
ಮೊಬೈಲ್‌ಗಳಿಂದ ಹೊರಹೊಮ್ಮುವ ನೀಲಿ ಕಿರಣಗಳು ನಮ್ಮ ಕಣ್ಣುಗಳಿಗೆ (eye) ಹಾನಿಯನ್ನುಂಟು ಮಾಡುತ್ತವೆ. ವಿಶೇಷವಾಗಿ ರಾತ್ರಿಯಲ್ಲಿ ಕತ್ತಲೆಯಲ್ಲಿ, ಮೊಬೈಲ್‌ಗಳನ್ನು ನೋಡುವುದರಿಂದ, ಈ ನೀಲಿ ಕಿರಣಗಳು ನಮ್ಮ ಕಣ್ಣಿಗೆ ಇನ್ನಷ್ಟು ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಇದು ನಮ್ಮ ಕಣ್ಣಿನ ರೆಟಿನಾಗೆ (Retina) ಹಾನಿಯನ್ನುಂಟುಮಾಡುತ್ತದೆ.


ಇದನ್ನೂ ಓದಿHealth Tips : ಹಸಿ ಪನೀರ್ ತಿನ್ನಲೇಬೇಕು ಈ ಕಾರಣಗಳಿಗಾಗಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.