High Cholesterol Symptoms In Eyes:  ಕೊಲೆಸ್ಟ್ರಾಲ್ ನಮ್ಮ ರಕ್ತನಾಳಗಳಲ್ಲಿ ಕಂಡುಬರುವ ಜಿಗುಟಾದ ವಸ್ತುವಾಗಿದೆ. ಆರೋಗ್ಯಕರ ಕೋಶಗಳನ್ನು ನಿರ್ಮಿಸುವುದು ಇದರ ಕೆಲಸವಾಗಿರುತ್ತದೆ. ಆದರೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ಹೆಚ್ಚಾದರೆ, ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ, ಟ್ರಿಪಲ್ ವೆಸೆಲ್ ಡಿಸೀಸ್, ಪಾರ್ಶ್ವವಾಯು ಮತ್ತು ಪರಿಧಮನಿಯ ಕಾಯಿಲೆಯ ಅಪಾಯ ಹೆಚ್ಚುತ್ತದೆ.   ಕೆಟ್ಟ ಕೊಲೆಸ್ಟ್ರಾಲ್ ನಮ್ಮ ಕಣ್ಣುಗಳ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ. 


COMMERCIAL BREAK
SCROLL TO CONTINUE READING

ಕೊಲೆಸ್ಟ್ರಾಲ್ ಹೆಚ್ಚಾದರೆ ಕಾಣಿಸುತ್ತದೆ ಈ ಲಕ್ಷಣಗಳು : 
ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದ ತಕ್ಷಣ, ಅದರ  ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಅದರ ರೋಗಲಕ್ಷಣಗಳನ್ನು ನಮ್ಮ ಕಾಲುಗಳು ಅಥವಾ ಕೈಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ಕಣ್ಣುಗಳಲ್ಲಿ ಕಂಡುಬರುವ ಕೊಲೆಸ್ಟ್ರಾಲ್ ಲಕ್ಷಣಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ. 


ಇದನ್ನೂ ಓದಿ : Lemon in Diabetes : ಹೆಚ್ಚುತ್ತಿರುವ ಮಧುಮೇಹದ ನಿಯಂತ್ರಣಕ್ಕೆ 'ನಿಂಬೆ ಹಣ್ಣು'


ಈ 3  ಲಕ್ಷಣಗಳು ಕಣ್ಣುಗಳಲ್ಲಿ ಕಂಡು ಬರುತ್ತವೆ.  :
ಕೊಲೆಸ್ಟ್ರಾಲ್ ಮಿತಿ ಮೀರಿ ಹೆಚ್ಚಾದಾಗ, ಕಣ್ಣುಗಳಲ್ಲಿ ಮತ್ತು ಕಣ್ಣುಗಳ   ಸುತ್ತಲೂ ಕೊಬ್ಬು ಸಂಗ್ರಹಗೊಳ್ಳಲು ಆರಂಭವಾಗುತ್ತದೆ. ಸಮಯಕ್ಕೆ ಸರಿಯಾಗಿ ಅದನ್ನು ಪತ್ತೆ ಹಚ್ಚಬೇಕು. ಇಲ್ಲದಿದ್ದರೆ ಅಪಾಯವನ್ನು ಎದುರಿಸಬೇಕಾಗಬಹುದು. ಅತ್ಯಂತ ಅಪಾಯಕಾರಿಯಾದ 3 ಲಕ್ಷಣಗಳು  : 


1. ಕಣ್ಣುಗಳ ಬಳಿ ಹಳದಿ ಕಾಣಿಸಿಕೊಳ್ಳುವುದು 
2. ಮಂದ ದೃಷ್ಟಿ 
3. ಕಾರ್ನಿಯಾದ ಸುತ್ತಲೂ ಹಳದಿ, ಕಂದು ಮತ್ತು ಬಿಳಿ ಬಣ್ಣದ ದದ್ದುಗಳು 


ಇದನ್ನೂ ಓದಿ : Cooking Tips: ಅಲ್ಯುಮಿನಿಯಂ ಅಷ್ಟೇ ಅಲ್ಲ, ಸ್ಟೀಲ್ ಪಾತ್ರೆಯಲ್ಲಿ ಆಹಾರ ಬೇಯಿಸುವುದು ಕೂಡ ಕೆಲವೊಮ್ಮೆ ಅಪಾಯಕಾರಿ!


ಕೊಲೆಸ್ಟ್ರಾಲ್ ಕಡಿಮೆ ಮಾಡಲು ಏನು ಮಾಡಬೇಕು?
ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಬೇಕಾದರೆ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ತಕ್ಷಣ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ದೇಹವು ಬಹಳಷ್ಟು ಬಳಲುತ್ತದೆ. ಇದಕ್ಕಾಗಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು. ಎಣ್ಣೆಯುಕ್ತ ಆಹಾರ ಮತ್ತು ಸಿಹಿ ವಸ್ತುಗಳಿಂದ ದೂರವಿರಬೇಕು. ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ಗಳಿಂದ ಆದಷ್ಟು  ಅಂತರ ಕಾಯ್ದುಕೊಳ್ಳಿ. 


 



 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
 
 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.