Kalmegh Benefits: ಮಧುಮೇಹ ಸೇರಿದಂತೆ 12 ಕ್ಕೂ ಅಧಿಕ ಕಾಯಿಲೆಗಳಿಗೆ ಅತ್ಯದ್ಭುತ ಮನೆಮದ್ದಾಗಿದೆ ಈ ನೆಲಬೇವು

Kalmegh Benefits: ಕಾಲಮೇಘ ಅಥವಾ ನೆಲಬೇವು ಎಂದು ಕರೆಯಲಾಗುವ ಇದು ಒಂದು ಔಷಧೀಯ ಸಸ್ಯವಾಗಿದೆ. ಇದರ ಬಳಕೆಯಿಂದ ಮಧುಮೇಹ, ಜ್ವರ, ಉದರವ್ಯಾಧಿ, ಉರಿಯೂತದಂತಹ ಹಲವು ಕಾಯಿಲೆಗಳಲ್ಲಿ ಭಾರಿ ಪರಿಹಾರ ಸಿಗುತ್ತದೆ. ಇದು ತ್ವಚೆಯ ಆರೋಗ್ಯಕ್ಕೂ ಕೂಡ ತುಂಬಾ ಲಾಭಕಾರಿಯಾಗಿದೆ.   

Written by - Nitin Tabib | Last Updated : Sep 10, 2022, 05:27 PM IST
  • ಹಲವು ಬಾರಿ ಶಾರೀರಿಕ ದೌರ್ಬಲ್ಯ ಎದುರಿಸುವ ಜನರು ಪದೇ ಪದೇ ಜ್ವರದಿಂದ ಬಳಲುತ್ತಾರೆ.
  • ಇದೇ ವೇಳೆ, ಹವಾಮಾನ ಬದಲಾದ ತಕ್ಷಣ, ದುರ್ಬಲ ದೇಹವು ಆಕ್ರಮಣ ಮಾಡುವವಲ್ಲಿ ಮುಂಚೂಣಿಯಲ್ಲಿರುತ್ತದೆ.
  • ನೀವು ನಿಮ್ಮ ದೇಹವನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಅಥವಾ ಅಜಾಗರೂಕತೆಯಿಂದ ಇದ್ದರೆ, ಸಮಸ್ಯೆ ಕಟ್ಟಿಟ್ಟ ಬುತ್ತಿ
Kalmegh Benefits: ಮಧುಮೇಹ ಸೇರಿದಂತೆ 12 ಕ್ಕೂ ಅಧಿಕ ಕಾಯಿಲೆಗಳಿಗೆ ಅತ್ಯದ್ಭುತ ಮನೆಮದ್ದಾಗಿದೆ ಈ ನೆಲಬೇವು title=
Kalmegha Health Benefits

Kalmegh Benefits: ಹಲವು ಬಾರಿ ಶಾರೀರಿಕ ದೌರ್ಬಲ್ಯ ಎದುರಿಸುವ ಜನರು ಪದೇ ಪದೇ ಜ್ವರದಿಂದ ಬಳಲುತ್ತಾರೆ. ಇದೇ ವೇಳೆ, ಹವಾಮಾನ ಬದಲಾದ ತಕ್ಷಣ, ದುರ್ಬಲ ದೇಹವು ಆಕ್ರಮಣ ಮಾಡುವವಲ್ಲಿ ಮುಂಚೂಣಿಯಲ್ಲಿರುತ್ತದೆ. ನೀವು ನಿಮ್ಮ ದೇಹವನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಅಥವಾ ಅಜಾಗರೂಕತೆಯಿಂದ ಇದ್ದರೆ, ಆಗ ಜ್ವರ, ಶೀತ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಇರುತ್ತವೆ. ಇವೆಲ್ಲಕ್ಕೂ  ಒಂದು ನೈಸರ್ಗಿಕ ಔಷಧಿ ಇದೆ, ಇದನ್ನು ಬಳಸಿ ಇಂತಹ ಕಾಯಿಲೆಗಳಿಂದ ದೂರವಿರಬಹುದು. ಇಂತಹ ಪರಿಸ್ಥಿತಿಯಲ್ಲಿ, ನಾವು ನಿಮಗೆ ಕಾಲಮೇಘ ಅಥವಾ ನೆಲಬೇವು ಎಂದು ಕರೆಯಲಾಗುವ ಒಂದು ಆಯುರ್ವೆದಿಕ ಗಿಡ ಮೂಲಿಕೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ರುಚಿಯಲ್ಲಿ ಕಹಿಯಾಗಿದ್ದರೂ ಕೂಡ ಕಾಲಮೇಘ ಅಥವಾ ನೆಲಬೇವನ್ನು ನೀವು  ಟಾನಿಕ್ ರೂಪದಲ್ಲಿ  ಜ್ವರ, ಗ್ಯಾಸ್, ಲಿವರ್ ಸಮಸ್ಯೆಗಳಿಗೆ ಮತ್ತು ಹೊಟ್ಟೆಯಲ್ಲಿನ ಹುಳುಗಳನ್ನು ತೆಗೆದುಹಾಕಲು ಬಳಸಬಹುದು. ಆದರೆ ಬಹುತೇಕ ಜನರಿಗೆ ಈ ಆಯುರ್ವೇದ ಗಿಡಮೂಲಿಕೆಯ ಬಗ್ಗೆ ಮಾಹಿತಿಯೇ ಇಲ್ಲ. ಹಾಗಾದರೆ ಬನ್ನಿ ಕಾಲಮೇಘದ  ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ನೆಲಬೇವಿನ ಗುಣಲಕ್ಷಣಗಳು
>> ಕಾಲಮೇಘ ಜ್ವರ ಕಡಿಮೆ ಮಾಡುವ, ಬ್ಯಾಕ್ಟೀರಿಯಾ ವಿರೋಧಿ, ಉತ್ಕರ್ಷಣ ನಿರೋಧಕ, ಯಕೃತ್ತಿನ ಸಮಸ್ಯೆಗಳನ್ನು ನಿವಾರಿಸುವ ಗುಣಗಳನ್ನು ಹೊಂದಿದೆ, ಇದು ಹೊಟ್ಟೆಯಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದನ್ನು ವಿಶೇಷವಾಗಿ ಮಕ್ಕಳಿಗೆ ಬಳಸಲಾಗುತ್ತದೆ. ಕೆಲವೊಮ್ಮೆ ಚಿಕ್ಕ ಮಕ್ಕಳಿಗೆ ಹೊಟ್ಟೆಯಲ್ಲಿ ಹುಳುಗಳ ಸಮಸ್ಯೆ ಎದುರಾಗುತ್ತದೆ, ಅದಕ್ಕೆ ನೆಲಬೇವು ತುಂಬಾ ಪರಿಣಾಮಕಾರಿ ಮನೆಮದ್ದಾಗಿದೆ. ಜೀರ್ಣಾಂಗ ವ್ಯವಸ್ಥೆ, ಜ್ವರ ಮತ್ತು ಉದರ ಸಮಸ್ಯೆಗಳಿಗೆ ಸಂಬಂಧಿಸಿದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಕಾಲಮೇಘ ಬಹಳ ಸಹಾಯಕವಾಗಿದೆ.

>> ಕಾಲಮೇಘ ಎಂಬ ಈ ಮೂಲಿಕೆಗೆ ಆಯುರ್ವೇದದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಸಸ್ಯವನ್ನು ಸಾಮಾನ್ಯವಾಗಿ ಅಲಂಕಾರವಾಗಿ ನೆಡಲಾಗುತ್ತದೆ. ಇದು ರಕ್ತವನ್ನು ಶುದ್ಧೀಕರಿಸುವ ಮೂಲಿಕೆಯಾಗಿದೆ. ಈ ಗುಣಲಕ್ಷಣಗಳಿಂದಾಗಿ, ಕಾಲಮೇಘ ಚರ್ಮದ ಸಮಸ್ಯೆಗಳು, ಬೊಬ್ಬೆಗಳು ಅಥವಾ ದೇಹದಲ್ಲಿನ ಇತರ ಗಾಯಗಳಿಗೆ ಬಳಸಲಾಗುತ್ತದೆ.

>> ವೈಜ್ಞಾನಿಕವಾಗಿ ಆಂಡ್ರೋಗ್ರಾಫಿಸ್ ಪನಿಕ್ಯುಲಾಟಾ ಎಂದು ಕರೆಯಲ್ಪಡುವ ಈ ಗಿಡಮೂಲಿಕೆ ಮಧುಮೇಹ, ಅಧಿಕ ರಕ್ತದೊತ್ತಡ, ಹುಣ್ಣು, ಶ್ವಾಸನಾಳಗಳ ಉರಿಯೂತ, ಚರ್ಮ ರೋಗಗಳು, ಆಮಶಂಕೆ, ಮತ್ತು ಮಲೇರಿಯಾಗಳಂತಹ ಕಾಯಿಲೆಗಳ ನಿವಾರಣೆಗಾಗಿ ಬಳಸಲಾಗುತ್ತದೆ.

ಮಧುಮೇಹ ರೋಗಿಗಳಿಗೆ ಹೇಗೆ ಲಾಭಕಾರಿಯಾಗಿದೆ?
ನೆಲಬೇವಿನ ಗಿಡಮೂಲಿಕೆಯಲ್ಲಿರುವ ಆಂಡ್ರೋಗ್ರಾಫ಼ೋಲೈಡ್ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಇದು ಮೇದೋಜೀರಕ ಗ್ರಂಥಿಯಿಂದ ಇನ್ಸುಲಿನ್ ಸ್ರವಿಕೆಯನ್ನು ಉತ್ತೇಜಿಸುತ್ತದೆ. ಹೀಗಾಗಿ ಇದು ಮಧುಮೇಹ ಕಾಯಿಲೆಯಿಂದಾಗುವ ಅಪಾಯವನ್ನು ಬಹುತೇಕ ಕಡಿಮೆ ಮಾಡುತ್ತದೆ.

ನೆಲಬೇವನ್ನು ಈ ರೀತಿ ಬಳಸಿ
1. ನಿಮಗೆ ಅಜೀರ್ಣ ಅಥವಾ ಮಲಬದ್ಧತೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಕಾಲಮೇಘ ತುಂಬಾ ಸಹಕಾರಿಯಾಗಿದೆ. ಇದಕ್ಕಾಗಿ, ಲೈಕೋರೈಸ್, ಕಾಲಮೇಘ ಮತ್ತು ಆಮ್ಲಾವನ್ನು ನೀರಿನಲ್ಲಿ ಕುದಿಸಿ. ಇದು ಕಷಾಯ ರೂಪದಲ್ಲಿ ಸಿದ್ಧವಾದಾಗ, ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ.

 2. ಕಲ್ಮೇಘ ಚರ್ಮ ರೋಗಗಳಿಗೆ ಒಂದು ಉತ್ತಮ ಮನೆಮದ್ದಾಗಿದೆ. ಇದಕ್ಕಾಗಿ ನೆಲಬೇವಿನ ಎಲೆಗಳನ್ನು ಸ್ವಚ್ಛಗೊಳಿಸಿ ನೀರಿನಲ್ಲಿ ಕುದಿಸಿ. ನಂತರ ಅದಕ್ಕೆ ಸ್ವಲ್ಪ ಬೆಲ್ಲವನ್ನು ಹಾಕಿ ಅದು ಗಟ್ಟಿಯಾದ ನಂತರ ತಣ್ಣಗಾಗಿಸಿ ಅದರಿಂದ ಉಂಡೆಗಳನ್ನು ತಯಾರಿಸಿ ತಿನ್ನಬಹುದು ಅಥವಾ ನೆಲಬೇವವನ್ನು ಅರೆದು ಮುಖದ ಗಾಯ ಅಥವಾ ಮೊಡವೆಗಳ ಮೇಲೆ ಹಚ್ಚಬಹುದು. ಇದು ರಕ್ತವನ್ನು ಶುದ್ಧೀಕರಿಸುತ್ತದೆ, ಇದರಿಂದಾಗಿ ಚರ್ಮವು ಹೊಳಪನ್ನು ಪಡೆಯುತ್ತದೆ.

ಇದನ್ನೂ ಓದಿ-Health Tips : ಈ ತರಕಾರಿಗಳನ್ನು ಹಸಿಯಾಗಿ ತಿಂದ್ರೆ ಕಿಡ್ನಿಸ್ಟೋನ್ ಕಟ್ಟಿಟ್ಟಬುತ್ತಿ

3. ಹೃದ್ರೋಗಕ್ಕೆ ಕಾಲಮೇಘ ತುಂಬಾ ಉಪಯುಕ್ತವಾಗಿದೆ. ಹೃದಯವನ್ನು ಆರೋಗ್ಯವಾಗಿಡಲು ನೆಲಬೇವನ್ನು ಬಳಸಲಾಗುತ್ತದೆ. ಕಾಲಮೇಘ ಸೇವನೆಯಿಂದ ಹೃದಯಾಘಾತವನ್ನು ತಡೆಯಬಹುದು.

ಇದನ್ನೂ ಓದಿ-ಡಯಾಬಿಟೀಸ್ ರೋಗಿಗಳಿಗೆ ಸಂಜೀವಿನಿ ಈ ಐದು ಆಹಾರ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News