Honey For Mens: ಪುರುಷರ ಈ 5 ಸಮಸ್ಯೆಗಳಿಗೆ ರಾಮಬಾಣ ಉಪಾಯ ಜೇನುತುಪ್ಪ
Honey For Mens Health: ಜೇನುತುಪ್ಪವು ಪುರುಷರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ಇದು ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವುದಲ್ಲದೆ, ಹಲವು ರೀತಿಯ ಆರೋಗ್ಯ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ. ಹಾಗಾದರೆ ಇದರ ಇತರ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Honey For Mens Health: ಜೇನುತುಪ್ಪ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅಂದರೆ, ಜೇನುತುಪ್ಪವನ್ನು ಸೇವಿಸದ ಜನರು, ಅದರ ಹಲವು ಮಹತ್ವದ ಪ್ರಯೋಜನಗಳಿಂದ ವಂಚಿತರಾಗಿದ್ದೀರಿ ಎಂದರ್ಥ. ಅದರಲ್ಲಿಯೂ ವಿಷೆಶವಾಗ್ ವಿಶೇಷವಾಗಿ ಪುರುಷರು ಇದನ್ನು ತಕ್ಷಣ ತಮ್ಮ ಆಹಾರದಲ್ಲಿ ಶಾಮೀಲುಗೊಳಿಸಲೇಬೇಕು. ಇದರಲ್ಲಿರುವ ಗುಣಲಕ್ಷಣಗಳು ಹಲವು ರೀತಿಯ ಸಮಸ್ಯೆಗಳನ್ನು ಸುಲಭವಾಗಿ ತೊಡೆದುಹಾಕುತ್ತದೆ. ಜೇನಿತುಪ್ಪದಲ್ಲಿ ಹಲವು ವಿಧಗಳಿವೆ. ಆದರೆ, ಅವುಗಳಲ್ಲಿ ರಾಯಲ್ ಬೀ ಹಾಗೂ ಮನುಕಾ ಜೇನು ಹೆಚ್ಚು ಪ್ರಯೋಜನಕಾರಿ ಎಂದು ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಹೇಳುತ್ತಾರೆ. ಮನುಕಾ ಹನಿ ನ್ಯೂಜಿಲೆಂಡ್‌ನಿಂದ ಬಂದಿದೆ, ಇದು ಅನೇಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀವಕೋಶದ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.
1. ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿ
ಮನುಕಾ ಹನಿ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ನಿಖಿಲ್, ಇದೊಂದು ಆಂಟಿಆಕ್ಸಿಡೆಂಟ್ ಗಳ ಆಗರವಾಗಿದ್ದು, ನಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಅಂದರೆ, ಪುರುಷರು ಸಹ ಇದನ್ನು ಟ್ರೈ ಮಾಡಿ ನೋಡಬಹುದು. ಇದರಿಂದ ನಮ್ಮ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳೂ ಕೊಡ ನಿವಾರಣೆಯಾಗುತ್ತದೆ. ಇದು ನಮ್ಮ ರಕ್ತನಾಳಗಳನ್ನು ನೈಸರ್ಗಿಕ ರೀತಿಯಲ್ಲಿ ತೆರೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಿಖಿಲ್ ಹೇಳುತ್ತಾರೆ. ಇದೇ ಕಾರಣದಿಂದಾಗಿ, ಪರ್ಕಿನ್ಸನ್, ಆಲ್ಝೈಮರ್ನಂತಹ ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳಿಂದ ಮುಕ್ತಿ ಪಡೆಯಲು ಇದು ತುಂಬಾ ಸಹಾಯಕವಾಗಿದೆ ಎನ್ನುತ್ತಾರೆ, ಆದರೂ ಈ ಬಗ್ಗೆ ಇನ್ನೂ ಸಾಕಷ್ಟು ಸಂಶೋಧನೆಗಳು ನಡೆಸುವ ಅವಶ್ಯಕತೆ ಇದೆ.
2. ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸಹ ಸಹಕಾರಿ
ಜೇನುತುಪ್ಪದ ಸೇವನೆಯು ಪುರುಷರ ವೀರ್ಯದ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಅಂದರೆ, ಯಾರ ವೈವಾಹಿಕ ಜೀವನವು ಸರಿಯಾಗಿ ನಡೆಯುತ್ತಿಲ್ಲವೋ ಅಂತಹ ಪುರುಷರು ಜೇನುತುಪ್ಪವನ್ನು ಸೇವಿಸಲು ಪ್ರಾರಂಭಿಸಬೇಕು. ಇದರಿಂದ ಅವರಿಗೆ ಲಾಭಸಿಗಲಿದೆ. ವೈವಾಹಿಕ ಜೀವನದಲ್ಲಿ ಸಮಸ್ಯೆ ಇರುವವರು ವಾರಕ್ಕೊಮ್ಮೆಯಾದರೂ ಕೂಡ ಜೇನುತುಪ್ಪವನ್ನು ಸೇವಿಸಬೇಕು.
3. ಮೂಳೆಗಳು ಮತ್ತು ಸ್ನಾಯುಗಳ ಆರೋಗ್ಯ ರಕ್ಷಣೆ
ಇದಲ್ಲದೆ, ಜೇನುತುಪ್ಪದ ಸೇವನೆಯು ನಮ್ಮ ಮೂಳೆಗಳ ಮತ್ತು ಸ್ನಾಯುಗಳನ ಆರೋಗ್ಯ ಬಲಪಡಿಸುತ್ತದೆ. ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ಹೆಚ್ಚಿನ ಜನರು ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೀಲು ನೋವುಗಳ ಸಮಸ್ಯೆ ಇರುವವರು ನಿಯಮಿತವಾಗಿ ಜೇನುತುಪ್ಪವನ್ನು ಸೇವಿಸಿ ಲಾಭ ಪಡೆಯಬಹುದು.
4. ಮಲಬದ್ಧತೆಯನ್ನು ನಿವಾರಿಸುತ್ತದೆ
ಮಲಬದ್ಧತೆಯಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಜೇನುತುಪ್ಪವನ್ನು ಸಹ ಶಾಮೀಲುಗೊಳಿಸಬಹುದು. ಇದರಿಂದ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ಇದನ್ನು ಸೇವಿಸುವುದರಿಂದ, ನಿಮ್ಮ ಹೊಟ್ಟೆಯು ಉತ್ತಮವಾಗಿರುತ್ತದೆ ಮತ್ತು ಯಾವುದೇ ರೀತಿಯ ಸಮಸ್ಯೆಯು ನಿಮ್ಮಿಂದ ದೂರವಿರುತ್ತದೆ.
ಇದನ್ನೂ ಓದಿ-Sharp Nose Tips: ದಪ್ಪ ಮೂಗಿನಿಂದ ನೀವು ತೊಂದರೆಗೊಳಗಾಗಿದ್ದೀರಾ? ಸರ್ಜರಿ ಇಲ್ಲದೆ ಈ ರೀತಿ ಶಾರ್ಪ್ ನೋಸ್ ಪಡೆಯಿರಿ
5. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ
ಕರೋನಾ ಯುಗದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಖಂಡಿತವಾಗಿಯೂ ಒಂದು ಅತ್ಯಾವಶ್ಯಕ ಸಂಗತಿಯಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಜೇನುತುಪ್ಪದಿಂದ ಕೂಡ ಹೆಚ್ಚಿಸಬಹುದು. ಇದಕ್ಕಾಗಿ ನೀವು ನಿಮ್ಮ ಆಹಾರದಲ್ಲಿ ಜೇನುತುಪ್ಪವನ್ನು ಸೇರಿಸಿಕೊಳ್ಳಬೇಕು, ಅದು ನಿಮಗೆ ಪ್ರಯೋಜನಗಳನ್ನು ನೀಡುತ್ತದೆ.
ಇದನ್ನೂ ಓದಿ-Good Sleep: ಗುಣಮಟ್ಟದ ಗಾಢ ನಿದ್ರೆಗಾಗಿ ಮಲಗುವ ಮುನ್ನ ಈ ಸ್ಪೆಷಲ್ ಟೀ ಸೇವಿಸಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.