How To Make Coriander Tea: ಅನೇಕ ಜನರಿಗೆ ಬೆಳಿಗ್ಗೆ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಅದೇ ಸಮಯದಲ್ಲಿ, ಅನೇಕ ಜನರು ಹಸಿರು ಚಹಾ (Green Tea), ನಿಂಬೆ ಚಹಾ (Lemon Tea) ಅಥವಾ ಕಪ್ಪು ಚಹಾ (Black Tea)ವನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಇಂದು ನಾವು ನಿಮಗೆ  ಉತ್ತಮ ರುಚಿ ಮತ್ತು ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾದ ಕೊತ್ತಂಬರಿ ಚಹಾದ ಬಗ್ಗೆ ಹೇಳಲಿದ್ದೇವೆ.


COMMERCIAL BREAK
SCROLL TO CONTINUE READING

ಕೊತ್ತಂಬರಿ ಚಹಾ (Coriander Tea) ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹ  ಸಹಾಯ ಮಾಡುತ್ತದೆ. ಇದರಲ್ಲಿ ಹಲವು ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದಲ್ಲದೆ, ಈ ಚಹಾವನ್ನು ನಿಯಮಿತವಾಗಿ ಸೇವಿಸುವುದರಿಂದ, ತೂಕವನ್ನು ಇಳಿಸಿಕೊಳ್ಳಬಹುದು. ಈ ಚಹಾವನ್ನು ತಯಾರಿಸುವ ವಿಧಾನ ಮತ್ತು ಅದರ ಪ್ರಯೋಜನಗಳ ಬಗ್ಗೆ ತಿಳಿಯಿರಿ.


ಇದನ್ನೂ ಓದಿ- Mint Tea Recipe: ಬಿರು ಬಿಸಿಲಿನ ತಾಪದಲ್ಲಿ ಶರೀರವನ್ನು ತಂಪಾಗಿಸುತ್ತದೆ ಈ ಚಹಾ


ಕೊತ್ತಂಬರಿ ಚಹಾ ಮಾಡುವುದು ಹೇಗೆ (How To Make Coriander Tea)?
ಈ ಚಹಾ (Tea) ತಯಾರಿಸಲು, ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಿ. ದಾಲ್ಚಿನ್ನಿ, ಏಲಕ್ಕಿ, ಶುಂಠಿ, ಫೆನ್ನೆಲ್, ಗ್ರೀನ್ ಟೀ ಎಲೆಗಳು, ತುಳಸಿ ಎಲೆಗಳು, ಪುದೀನ ಮತ್ತು ಕೊತ್ತಂಬರಿ ಸೇರಿಸಿ. ಸ್ವಲ್ಪ ಸಮಯ ಇವುಗಳನ್ನು ಚೆನ್ನಾಗಿ ಕುದಿಸಿದ ನಂತರ ಒಲೆಯನ್ನು ಆರಿಸಿ. ಈಗ ಅದಕ್ಕೆ ಕೆಲವು ಹನಿ ನಿಂಬೆ ರಸ ಸೇರಿಸಿ. ನಿಮ್ಮ ಕೊತ್ತಂಬರಿ ಚಹಾ ಸಿದ್ಧವಾಗಿದೆ.


ಕೊತ್ತಂಬರಿ ಚಹಾ ಸೇವನೆಯಿಂದ ಈ ಸಮಸ್ಯೆಗಳಿಂದ ದೂರವಿರಬಹುದು (Coriander tea gets rid of these problems):
>> ಕಡಿಮೆ ರೋಗನಿರೋಧಕ ಶಕ್ತಿ
>> ತೂಕ ಹೆಚ್ಚಾಗುವುದು (obesity)
>> ಥೈರಾಯ್ಡ್
>> ಸಂಧಿವಾತ
>> ಕೂದಲು ಉದುರುವುದು
>> ಮಂದ ಚರ್ಮ
>> ಕೀಲು ನೋವು
>> ಮಧುಮೇಹ (Diabetes)
>> ಪಿಸಿಓಎಸ್ ಸಮಸ್ಯೆಗಳಿಂದ ಪರಿಹಾರ ಸಿಗಲಿದೆ


ಇದನ್ನೂ ಓದಿ- Health Tips- ಖಾಲಿ ಹೊಟ್ಟೆ ಚಹಾ ಸೇವನೆಯಿಂದಾಗುವ ಹಾನಿಗಳು ನಿಮಗೆ ತಿಳಿದಿವೆಯೇ?


ಹಾರ್ಮೋನುಗಳ ಅಸಮತೋಲನದಲ್ಲಿ ಪ್ರಯೋಜನಕಾರಿ (Beneficial in hormonal imbalance):
ಕೊತ್ತಂಬರಿ ಚಹಾವನ್ನು ಸೇವಿಸುವುದರಿಂದ, ನೀವು ಹಾರ್ಮೋನುಗಳ ಅಸಮತೋಲನ ಸಮಸ್ಯೆಯನ್ನು ನಿವಾರಿಸಬಹುದು. ಇದಲ್ಲದೆ, ಇದು ನಿಮ್ಮ ಚಯಾಪಚಯವನ್ನು (Metabolism)  ಸುಧಾರಿಸುತ್ತದೆ.


ಕೊತ್ತಂಬರಿ ಚಹಾವನ್ನು ಯಾವಾಗ ಕುಡಿಯಬೇಕು? (When to Drink Coriander Tea) :
ಕೊತ್ತಂಬರಿ ಚಹಾವನ್ನು ನೀವು ದಿನದ ಯಾವುದೇ ಸಮಯದಲ್ಲಿ ಕುಡಿದರೂ ಸಹ ಇದರಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಆದರೆ ಬೆಳಿಗ್ಗೆ ಎದ್ದ ನಂತರ ನೀವು ಈ ಚಹಾವನ್ನು ಕುಡಿಯುವುದರಿಂದ ಹೆಚ್ಚು ಪ್ರಯೋಜನಕಾರಿಯಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ