How To Make Milk Conditioner: ಸುಂದರವಾದ ಕೂದಲು ಹುಡುಗಿಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರತಿಯೊಬ್ಬರೂ ರೇಷ್ಮೆ, ಮೃದು ಮತ್ತು ಹೊಳೆಯುವ ಕೂದಲು ತಮ್ಮದಾಗಬೇಕು ಎಂದು ಇಚ್ಚಿಸುತ್ತಾರೆ. ಮಹಿಳೆಯರು ತಮ್ಮ ಕೂದಲನ್ನು ರೇಷ್ಮೆ ಮತ್ತು ಮೃದುವಾಗಿಸಲು ಕಂಡಿಷನರ್ ಬಳಸುತ್ತಾರೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಹಲವು ರೀತಿಯ ಕಂಡಿಷನರ್‌ಗಳು ಲಭ್ಯವಿದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಹಲವು ಹೇರ್ ಕಂಡಿಷನರ್‌ಗಳು (Hair Care Tips) ಅನೇಕ ಬಾರಿ ಕೂದಲಿಗೆ ಸಾಕಷ್ಟು ಹಾನಿಯನ್ನುಂಟುಮಾಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಮನೆಯಲ್ಲಿಯೇ ಇರುವ  ವಸ್ತುಗಳನ್ನು ಬಳಸಿ ಕೂದಲಿನ ಮೇಲೆ ಕಂಡಿಷನರ್ ಮಾಡಬಹುದು. ಇದಕ್ಕಾಗಿ ನೀವು ಹಾಲನ್ನು ಬಳಸಬಹುದು. ಹೇರ್ ಕಂಡೀಷನಿಂಗ್‌ಗಾಗಿ ಹಾಲನ್ನು (Milk Conditioner) ಯಾವ ರೀತಿ ಬಳಸಬಹುದು ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಹಾಲು ಮತ್ತು ನಿಂಬೆ ರಸದಿಂದ ಕಂಡಿಷನರ್ (Milk Conditioner) ತಯಾರಿಸಿ- ಇದಕ್ಕಾಗಿ ನೀವು ಅರ್ಧ ಕಪ್ ಹಸಿ ಹಾಲನ್ನು (ಫುಲ್ ಕ್ರೀಂ ಹಾಲು) ತೆಗೆದುಕೊಳ್ಳಿ. ಈಗ ಅದಕ್ಕೆ ಒಂದು ಚಮಚ ನಿಂಬೆ ರಸ ಸೇರಿಸಿ ಮತ್ತು ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಶಾಂಪೂ ಮಾಡಿದ ತಕ್ಷಣ, ಈ ಮಿಶ್ರಣವನ್ನು ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ (ತಲೆಯ ಮೇಲ್ಮೈ) ಚೆನ್ನಾಗಿ ಹಚ್ಚಿ ಇಪ್ಪತ್ತು ನಿಮಿಷಗಳ ಕಾಲ ಬಿಡಿ. ಬಳಿಕ ಐದು ನಿಮಿಷಗಳ ಕಾಲ ನಿಮ್ಮ ತಲೆಯನ್ನು ಮಸಾಜ್ ಮಾಡಿ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.


ಇದನ್ನೂ ಓದಿ-  Curry Leaf Benefits: ಕರಿಬೇವಿನ ಎಲೆ ರಸ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ


ಹಾಲು ಮತ್ತು ರೋಸ್ ವಾಟರ್- ಇದಕ್ಕಾಗಿ, ಅರ್ಧ ಕಪ್  ಹಸಿ ಹಾಲನ್ನು  (ಫುಲ್ ಕ್ರೀಂ ಹಾಲು) ತೆಗೆದುಕೊಂಡು ಅದಕ್ಕೆ ಐದು ಚಮಚ ರೋಸ್ ವಾಟರ್ ಸೇರಿಸಿ. ಈಗ ಚಮಚದ ಸಹಾಯದಿಂದ ಇವೆರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಕೂದಲನ್ನು (Hair) ಶಾಂಪೂ ಮಾಡಿದ ನಂತರ, ಈ ಕಂಡಿಷನರ್ ಅನ್ನು ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಹಚ್ಚಿ ಐದು ನಿಮಿಷಗಳ ಕಾಲ ಮಸಾಜ್ ಮಾಡಿ. ಇದರ ನಂತರ, ಅದನ್ನು ಹದಿನೈದು ನಿಮಿಷಗಳ ಕಾಲ ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿರಿ.


ಇದನ್ನೂ ಓದಿ -  Betel Leaf Benefits For Men: ವಿವಾಹಿತ ಪುರುಷರು ರಾತ್ರಿ ಮಲಗುವ ಮುನ್ನ ವಿಳ್ಳೆದೆಲೆ ಸೇವಿಸುವುದರಿಂದ ಸಿಗುತ್ತೆ ಈ ಲಾಭ


ಹಾಲು ಮತ್ತು ಜೇನುತುಪ್ಪ- ಇದಕ್ಕಾಗಿ, ನೀವು ಎರಡು ಚಮಚ ಜೇನುತುಪ್ಪವನ್ನು ಅರ್ಧ ಕಪ್ ಹಾಲಿನಲ್ಲಿ ಬೆರೆಸಿ ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಕೂದಲನ್ನು ಶಾಂಪೂ ಮಾಡಿದ ನಂತರ, ಈ ಮಿಶ್ರಣವನ್ನು ಕೂದಲು ಮತ್ತು ನೆತ್ತಿಯ ಮೇಲೆ ಚೆನ್ನಾಗಿ ಹಚ್ಚಿ. ನಂತರ, ಐದು ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ. ಇಪ್ಪತ್ತು ನಿಮಿಷಗಳ ಕಾಲ ಕೂದಲನ್ನು ಹಾಗೆ ಬಿಟ್ಟು ನಂತರ ನೀರಿನಿಂದ ಕೂದಲನ್ನು ಚೆನ್ನಾಗಿ ವಾಶ್ ಮಾಡಿ.


ಈ ರೀತಿ ಮಾಡುವುದರಿಂದ ರೇಷ್ಮೆಯಂತಹ ಮೃದುವಾದ ಕೂದಲು ನಿಮ್ಮದಾಗುತ್ತದೆ.


(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ