Dangerous Combination With Papaya : ಪಪ್ಪಾಯ ಜೊತೆ ಈ ವಸ್ತುಗಳನ್ನು ತಿನ್ನುವ ತಪ್ಪು ಮಾಡಬೇಡಿ

 Dangerous Combination With Papaya : ಬಹಳಷ್ಟು ಜನರು ಫ್ರೂಟ್ ಚಾಟ್ ಮಾಡುವಾಗ ಅದರಲ್ಲಿ ಪಪ್ಪಾಯ ಹಣ್ಣು ಇದ್ದೇ ಇರುತ್ತದೆ. ಈ  ಚಾಟ್ ನಲ್ಲಿ ಪಪ್ಪಾಯದ ಜೊತೆ ಬೇರೆ ಹಣ್ಣುಗಳು ಕೂಡ ಇರುತ್ತೆ. ಆದರೆ ನೆನಪಿಡಿ ಪಪ್ಪಾಯದ ಜೊತೆ ಕೆಲವೊಂದು ಹಣ್ಣುಗಳ ಸೇವನೆ ಕೂಡಾ ನಿಷಿದ್ಧ.

Written by - Ranjitha R K | Last Updated : Jul 9, 2021, 01:36 PM IST
  • ಪಪ್ಪಾಯ ಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
  • ಈ ಹಣ್ಣಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ.
  • ಈ ಹಣ್ಣಿನ ಜೊತೆ ಕೆಲವೊಂದು ಆಹಾರ ವಸ್ತುಗಳನ್ನು ಸೇವಿಸಲೇಬಾರದು
Dangerous Combination With Papaya : ಪಪ್ಪಾಯ ಜೊತೆ ಈ ವಸ್ತುಗಳನ್ನು ತಿನ್ನುವ ತಪ್ಪು ಮಾಡಬೇಡಿ  title=
ಪಪ್ಪಾಯ ಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. (photo india.com)

ನವದೆಹಲಿ : Dangerous Combination With Papaya : ಪಪ್ಪಾಯ ಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪಪ್ಪಾಯಿ ಮಧುಮೇಹ ರೋಗಿಗಳು ಪಪ್ಪಾಯಿ ಹಣ್ಣು ಸೇವಿಸಿದರೆ, ಆರೋಗ್ಯದ ಮೇಳೆ ಉತ್ತಮ ಪರಿಣಾಮ ಬೀರುತ್ತದೆ. ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಕೂಡಾ ಮುಕ್ತಿ ನೀಡುತ್ತದೆ. ಈ ಹಣ್ಣಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಪಪ್ಪಾಯಿಯಲ್ಲಿ ವಿಟಮಿನ್ ಎ, ಬಿ, ಡಿ, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಆದರೂ ಈ ಹಣ್ಣಿನ ಜೊತೆ ಕೆಲವೊಂದು ಆಹಾರ ವಸ್ತುಗಳನ್ನು ಸೇವಿಸಲೇಬಾರದು. ಒಂದು ವೇಳೆ ಈ ವಸ್ತುಗಳನ್ನು ಪಪ್ಪಾಯ ಹಣ್ಣಿನ ಜೊತೆ ತಿಂದರೆ ಲಾಭಕ್ಕಿಂತ ನಷ್ಟವೆ ಹೆಚ್ಚಾಗಲಿದೆ. 

ಬಹಳಷ್ಟು ಜನರು ಫ್ರೂಟ್ ಚಾಟ್ ಮಾಡುವಾಗ ಅದರಲ್ಲಿ ಪಪ್ಪಾಯ ಹಣ್ಣು (Papaya) ಇದ್ದೇ ಇರುತ್ತದೆ. ಈ  ಚಾಟ್ ನಲ್ಲಿ ಪಪ್ಪಾಯದ ಜೊತೆ ಬೇರೆ ಹಣ್ಣುಗಳು ಕೂಡ ಇರುತ್ತೆ. ಆದರೆ ನೆನಪಿಡಿ ಪಪ್ಪಾಯದ ಜೊತೆ ಕೆಲವೊಂದು ಹಣ್ಣುಗಳ ಸೇವನೆ ಕೂಡಾ ನಿಷಿದ್ಧ.  ಅಲ್ಲದೆ, ಕೆಲವು ವಸ್ತುಗಳನ್ನು ಕೂಡಾ ಪಪ್ಪಾಯಿಯೊಂದಿಗೆ ತಿನ್ನಬಾರದು (Dangerous Combination With Papaya). ಮೊದಲೇ ಹೇಳಿದ ಹಾಗೆ ಇದರಿಂದ ಲಾಭವಾಗುವ ಬದಲು ನಷ್ಟವೇ ಸಂಭವಿಸಬಹುದು. 

ಇದನ್ನೂ ಓದಿ : ಇಷ್ಟು ಗಂಟೆಗಳ ನಂತರ Fridge ನಲ್ಲಿಟ್ಟ ಆಹಾರ ತಿನ್ನಲೇ ಬಾರದು

ಮೊಸರು :  ಪಪ್ಪಾಯಿ ಮತ್ತು ಮೊಸರನ್ನು (Curd) ಎಂದಿಗೂ ಒಟ್ಟಿಗೆ ತಿನ್ನಬಾರದು. ಈ ಎರಡು ವಸ್ತುಗಳ ಗುಣಗಳು ಬೇರೆ ಬೇರೆಯಾಗಿರುತ್ತವೆ. ಮೊಸರು ದೇಹವನ್ನು ತಣ್ಣಗಿರಿಸಿದರೆ, ಪಪ್ಪಾಯಿ (health benefits of papaya) ಉಷ್ಣ ಪ್ರವೃತಿಯನ್ನು ಹೊಂದಿರುತ್ತದೆ.  ಈ ಕಾರಣಕ್ಕಾಗಿ, ಈ ಎರಡು ಆಹಾರ ವಸ್ತುಗಳನ್ನು ಜೊತೆಯಲ್ಲಿ ತಿನ್ನಬಾರದು. ಈ ಎರಡು ವಿರುದ್ಧ ಗುಣಗಳಿರುವ ವಸ್ತುಗಳನ್ನು ಒಟ್ಟಿಗೆ ಸೇವಿಸಿದರೆ ನಮ್ಮ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮವೇ ಬೀರುತ್ತದೆ. 

ನಿಂಬೆ ಹಣ್ಣು : ಪಪ್ಪಾಯಿ ಮತ್ತು ನಿಂಬೆಯನ್ನು (Lemon) ಒಟ್ಟಿಗೆ ಸೇವಿಸುವುದರಿಂದ ದೇಹಕ್ಕೆ ಹಾನಿಕಾರ ಎನ್ನುವುದು ಕೂಡಾ ಈಗಾಗಲೇ ಸಾಬೀತಾಗಿದೆ. ಈ ಎರಡನ್ನು ಒಟ್ಟಿಗೆ ಸೇವಿಸುವುದರಿಂದ ರಕ್ತಹೀನತೆಯ (Anemia) ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. 

ಕಿತ್ತಳೆ ಹಣ್ಣು : ಫ್ರೂಟ್ ಚಾಟ್‌ನಲ್ಲಿ(Fruit chat)  ಪಪ್ಪಾಯಿ ಹಣ್ಣಿನ ಜೊತೆ ಕಿತ್ತಳೆ ಹಣ್ಣನ್ನು ಕೂಡ ಸೇರಿಸಲಾಗುತ್ತದೆ. ಆದರೆ ಹೀಗೆ ಮಾಡಬಾರದು. ಪಪ್ಪಾಯ ಜೊತೆ ಕಿತ್ತಳೆ ಹಣ್ಣು (Orange) ಸೇವನೆ ಒಳ್ಳೆಯದಲ್ಲ. ಇವೆರಡು ಹಣ್ಣನು ಜೊತೆಯಲ್ಲಿ ತಿನ್ನುವುದು ಹಾನಿಕಾರಕವಾಗಿ ಪರಿಣಮಿಸಬಹುದು . 

ಇದನ್ನೂ ಓದಿ : ಮೊಟ್ಟೆಯ ಜೊತೆ ಎಂದಿಗೂ ಈ ವಸ್ತುಗಳನ್ನು ಸೇವಿಸಬಾರದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News