Banana Peel Is Beneficial For Skin: ಬಾಳೆಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಸಾಮಾನ್ಯವಾಗಿ ನಾವು ಬಾಳೆಹಣ್ಣನ್ನು ಸೇವಿಸಿದ ಬಳಿಕ ಬಾಳೆಹಣ್ಣಿನ ಸಿಪ್ಪೆಯನ್ನು (Banana Peel) ಎಸೆಯುತ್ತೇವೆ. ನೀವೂ ಕೂಡ ಇದೇ ರೀತಿ ಮಾಡುತ್ತಿದ್ದರೆ ಇನ್ನು ಮುಂದೆ ಹಾಗೆ ಮಾಡಬೇಡಿ. ಏಕೆಂದರೆ ಬಾಳೆಹಣ್ಣುಗಳು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದರೆ, ಅದರ ಸಿಪ್ಪೆ ಸಹ ನಿಮಗೆ ಹೆಚ್ಚು ಉಪಯುಕ್ತವಾಗಿದೆ. ಬಾಳೆಹಣ್ಣಿನ ಸಿಪ್ಪೆಯೊಂದಿಗೆ ನೀವು ಚರ್ಮದ ಸಮಸ್ಯೆಗಳನ್ನು (Skin Problems) ತೊಡೆದುಹಾಕಬಹುದು. ಬಾಳೆಹಣ್ಣಿನ ಸಿಪ್ಪೆಗಳು ಮುಖದ ಮೇಲಿನ ಮೊಡವೆ, ಕಲೆಯಂತಹ ಸಮಸ್ಯೆಯನ್ನು ನಿವಾರಿಸುತ್ತವೆ. ಬಾಳೆಹಣ್ಣಿನ ಸಿಪ್ಪೆಗಳಲ್ಲಿ ವಿಟಮಿನ್ ಬಿ -6, ಬಿ -12, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇವು ಚರ್ಮಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
ಬಾಳೆಹಣ್ಣಿನ ಸಿಪ್ಪೆ ಚರ್ಮಕ್ಕೆ ಯಾವ ರೀತಿ ಪ್ರಯೋಜನಕಾರಿಯಾಗಿದೆ (Use Of Peel) ಎಂದು ತಿಳಿಯೋಣ:
1. ಬಾಳೆಹಣ್ಣಿನ ಸಿಪ್ಪೆ ಬಳಕೆಯ ವಿಧಾನ:
>> ಮೊದಲು ಕ್ಲೆನ್ಸರ್ ಮೂಲಕ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ
>> ಸಿಪ್ಪೆಯ ಒಳ ಭಾಗದೊಂದಿಗೆ ನಿಮ್ಮ ಮುಖವನ್ನು 10 ನಿಮಿಷಗಳ ಕಾಲ ಮಸಾಜ್ ಮಾಡಿ
>> ತಾಜಾ ಸಿಪ್ಪೆಯಿಂದ ಮಸಾಜ್ ಮಾಡಿದರೆ ಒಳಿತು
>> ಮುಖಕ್ಕೆ ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿದ ಸುಮಾರು 20 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ.
ಬಾಳೆಹಣ್ಣಿನ ಸಿಪ್ಪೆ ಹೇಗೆ ಕೆಲಸ ಮಾಡುತ್ತದೆ?
ಬಾಳೆಹಣ್ಣಿನ ಸಿಪ್ಪೆಯು (Banana Peel) ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುವ ಮೂಲಕ ನಿಮ್ಮ ಚರ್ಮವನ್ನು ಆರೋಗ್ಯಕರಗೊಳಿಸುತ್ತದೆ. ಇದು ಮೊಡವೆಗಳಿಂದಾಗಿ ಮುಖದ ಮೇಲೆ ಉಂಟಾಗಿರುವ ಕಲೆಗಳನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ, ಮೊಡವೆಗಳು ಬರದಂತೆ ತಡೆಯುತ್ತದೆ. ಇದಲ್ಲದೆ, ಬಾಳೆಹಣ್ಣಿನ ಸಿಪ್ಪೆಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ- ಹೀಗೆ ಮಾಡಿದರೆ ಬೇಸಿಗೆಯಲ್ಲಿ ಬಾಳೆಹಣ್ಣು ಕಪ್ಪಾಗದಂತೆ ತಡೆಯಬಹುದು..!
2. ಅರಿಶಿನ ಮತ್ತು ಬಾಳೆಹಣ್ಣಿನ ಸಿಪ್ಪೆ :
* 1 ಹಿಸುಕಿದ ಬಾಳೆಹಣ್ಣಿನ ಸಿಪ್ಪೆ
* 1 ಟೀಸ್ಪೂನ್ ಅರಿಶಿನ
* ತೈಲ ಮುಕ್ತ ಮಾಯಿಶ್ಚರೈಸರ್
ಅರಿಶಿನ ಮತ್ತು ಬಾಳೆಹಣ್ಣಿನ ಸಿಪ್ಪೆಯನ್ನು ಈ ರೀತಿ ಬಳಸಿ:
- ಮೇಲೆ ತಿಳಿಸಿದ ವಸ್ತುಗಳ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ.
- ನಂತರ ನಿಮ್ಮ ಚರ್ಮವನ್ನು ವೃತ್ತಾಕಾರದ ಚಲನೆಯಲ್ಲಿ ನಿಧಾನವಾಗಿ ಮಸಾಜ್ ಮಾಡಿ.
- ಸುಮಾರು 15 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ.
- 15 ನಿಮಿಷಗಳ ನಂತರ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ.
- ಮುಖವನ್ನು ತೊಳೆದ ನಂತರ ಅದರ ಮೇಲೆ ಮಾಯಿಶ್ಚರೈಸರ್ ಹಚ್ಚಿ.
ಮೊಡವೆ ಸಮಸ್ಯೆ ದೂರವಾಗುತ್ತದೆ :
ಬಾಳೆಹಣ್ಣಿನ ಸಿಪ್ಪೆ (Banana peel is beneficial for skin) ಮತ್ತು ಅರಿಶಿನ ಎರಡೂ ಮೊಡವೆಗಳ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ.
ಇದನ್ನೂ ಓದಿ- ಯೋಗಾಸನದ ಬಳಿಕ ಈ ಐದು ಆಹಾರಗಳನ್ನು ತಿನ್ನಬೇಕು
3. ಓಟ್ಸ್ ಮತ್ತು ಬಾಳೆಹಣ್ಣಿನ ಸಿಪ್ಪೆ:
ಅಗತ್ಯ ಸಾಮಾನುಗಳು:-
* 1 ಬಾಳೆಹಣ್ಣಿನ ಸಿಪ್ಪೆ
* ಕಪ್ ಓಟ್ಸ್
* 3 ಚಮಚ ಸಕ್ಕರೆ
* ತೈಲ ಮುಕ್ತ ಮಾಯಿಶ್ಚರೈಸರ್
ಬಳಕೆಯ ವಿಧಾನ :
>> ಬಾಳೆಹಣ್ಣಿನ ಸಿಪ್ಪೆ, ಓಟ್ಸ್ ಮತ್ತು ಸಕ್ಕರೆಯನ್ನು ಬ್ಲೆಂಡರ್ನಲ್ಲಿ ಮಿಶ್ರಣ ಮಾಡಿ.
>> ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ ನಂತರ ಚರ್ಮವನ್ನು ಮೃದುವಾಗಿ ಮಸಾಜ್ ಮಾಡಿ.
>> ಸುಮಾರು 10 ನಿಮಿಷಗಳ ಕಾಲ ಮುಖಕ್ಕೆ ಹೀಗೆ ಮಾಡಿ.
>> 10 ನಿಮಿಷಗಳ ನಂತರ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆದು ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ.
ಏನು ಪ್ರಯೋಜನ?
ಈ ಚಿಕಿತ್ಸೆಯು ಮುಖದ ಮೇಲೆ ಸ್ಕ್ರಬ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಮುಖದ ಮೇಲಿನ ಡೆಡ್ ಸ್ಕಿನ್ ಅನ್ನು ನಿವಾರಿಸುತ್ತದೆ. ಇದು ಮುಖದ ಮೇಲಿನ ಮೊಡವೆಗಳನ್ನು ತೆಗೆದುಹಾಕುತ್ತದೆ. ಆದರೆ ಇದನ್ನು ಮುಖದ ಮೇಲೆ ತೀವ್ರವಾಗಿ ಉಜ್ಜಬಾರದು, ಹೀಗೆ ಮಾಡುವುದರಿಂದ ಮೊಡವೆ ಬರುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.