ನವದೆಹಲಿ: Sleeping Technique - ಇಂದಿನ ಒತ್ತಡದಿಂದ ಕೂಡಿದ ಜೀವನದಲ್ಲಿ, ಜನರು ರಾತ್ರಿಯ ನಿದ್ರೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಇದರ ಹೊರತಾಗಿಯೂ, ಜನರು ನೆಮ್ಮದಿಯ ನಿದ್ದೆ ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ Google CEO ಸುಂದರ್ ಪಿಚೈ (Sunder Pichai) ಕೂಡ ವಿಭಿನ್ನ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. 8 ಗಂಟೆಗಳ ನಿದ್ರೆಯನ್ನು 4 ಗಂಟೆಗಳಲ್ಲಿ ಪೂರ್ಣಗೊಳಿಸುವುದು ಕೇವಲ ನಿದ್ದೆಯಿಲ್ಲದ ಆಳವಾದ ವಿಶ್ರಾಂತಿ ಅಂದರೆ NSDR ಯಿಂದ ಮಾತ್ರ ಸಾಧ್ಯ, ಇದು ಕಡಿಮೆ ಸಮಯದಲ್ಲಿ ಸಂಪೂರ್ಣವಾಗಿ ವಿಶ್ರಾಂತಿ ನಿದ್ರೆ ನೀಡುತ್ತದೆ. ಹೀಗಿರುವಾಗ ಈ Non-Sleep Deep Rest ತಂತ್ರ ಏನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

COMMERCIAL BREAK
SCROLL TO CONTINUE READING

ಏನಿದು Non-Sleep Deep Rest ತಂತ್ರ? (What Is Non Sleep Deep Rest)
ಸರಳ ಭಾಷೆಯಲ್ಲಿ ಹೇಳುವುದಾದರೆ, ನಿದ್ರೆಯ ಈ ಪ್ರಕ್ರಿಯೆ ಒಂದು ರೀತಿಯ ಮೆಡಿಟೇಶನ್ ಆಗಿದೆ. ಇದರಲ್ಲಿ ಮಲಗಿರುವ ಭಂಗಿಯಲ್ಲಿಯೇ ಧ್ಯಾನ ನಡೆಸಲಾಗುತ್ತದೆ. ಈ ತಂತ್ರ ನಿಮಗೆ ಎಚ್ಚರದಿಂದ ಇರುವಾಗಲು ಕೂಡ ಸಂಪೂರ್ಣ ನಿದ್ರೆಯ ಅನುಭವ ನೀಡುತ್ತದೆ ಎಂದು ಹೇಳಿದರೆ ನಿಮಗೂ ಆಶ್ಚರ್ಯವಾದೀತು. ಈ ಅವಧಿಯಲ್ಲಿ ಮೆದುಳು, ಸಾಮಾನ್ಯ ನಿದ್ರೆಯಲ್ಲಿರುವಂತೆಯೇ ವಿಶ್ರಾಂತಿ ಪಡೆಯುತ್ತದೆ. ಈ ತಂತ್ರ ಒತ್ತಡದಿಂದ ಮುಕ್ತಿ ನೀಡುವುದರ ಜೊತೆಗೆ ಗಾಢ ನಿದ್ರೆಯನ್ನು ದಯಪಾಲಿಸುತ್ತದೆ. ಇದರ ಸತತ ಪ್ರ್ಯಾಕ್ಟಿಸ್ ಮೂಲಕ ನೀವು 8 ಗಂಟೆಗಳ ನಿದ್ರೆಯನ್ನು 4 ಗಂಟೆಗಳಲ್ಲಿ ಪೂರ್ಣಗೊಳಿಸಬಹುದು.

NSDR ಹೇಗೆ ಮಾಡಬೇಕು?
ನಮ್ಮ ಮೆದುಳಿನಿಂದ ಹಲವು ರೀತಿಯ ನ್ಯೂರಾನ್ ತರಂಗಗಳು ಹೊರಹೊಮ್ಮುತ್ತವೆ ಹಾಗೂ ಅವುಗಳಿಂದ ಹೊರಹೊಮ್ಮುವ ಅಲ್ಫಾ ತರಂಗಗಳು ಮಾತ್ರ ಮೆದುಳನ್ನು ಖುಷಿಯಾಗಿಡುವ ಸಂಕೇತ ನೀಡುತ್ತವೆ. ಯೋಗ ಹಾಗೂ ಮೆಡಿಟೇಶನ್ ಮೂಲಕ ಈ ಅಲ್ಫಾ ತರಂಗಗಳನ್ನು ಸಕ್ರೀಯಗೊಳಿಸು ಪ್ರಯತ್ನಿಸಲಾಗುತ್ತದೆ. ಈ ತರಂಗಗಳನ್ನು ಸಕ್ರೀಯಗೊಳಿಸುವುದರಿಂದ ಹಲವು ರೀತಿಯ ಸ್ಟ್ರೆಸ್ ಗೆ ಅಂತ್ಯಹಾಡಬಹುದು ಹಾಗೂ ಮೆದುಳು ಸಂಪೂರ್ಣ ರಿಲ್ಯಾಕ್ಸ್ ಮೋಡ್ ಗೆ ಜಾರುತ್ತದೆ.

>> ಇದನ್ನು ಹೇಗೆ ಪ್ರ್ಯಾಕ್ಟೀಸ್ ಮಾಡಬೇಕು? (How To Do NSDR)

>> ಕತ್ತಲೆಯಲ್ಲಿ ಅಥವಾ ಕಡಿಮೆ ಬೆಳಕಿನ ಕೋಣೆಯಲ್ಲಿ ನಿಮ್ಮ ಹಾಸಿಗೆಯ ಮೇಲೆ ನಿಮ್ಮ ಬೆನ್ನಿನ ಮೇಲೆ ಮಲಗಿಕೊಳ್ಳಿ.

>> ದೇಹವನ್ನು ಸಡಿಲವಾಗಿ ಬಿಡಿ ಮತ್ತು ಕೈ ಮತ್ತು ಕಾಲುಗಳನ್ನು ಸಂಪೂರ್ಣವಾಗಿ ಸಡಿಲುಗೊಳಿಸಿ.

>> ಅಂಗೈಗಳನ್ನು ತೆರೆಯಿರಿ ಮತ್ತು ಅವುಗಳನ್ನು ಆಕಾಶದ ಕಡೆಗೆ ತಿರುಗಿಸಿ.

>> ಆಳವಾದ ಉಸಿರನ್ನು ತೆಗೆದುಕೊಂಡು ಬಲ ಅಂಗೈಮೇಲೆ ಮೇಲೆ ಧ್ಯಾನ ಆರಂಭಿಸಿ ಮತ್ತು ಅದರ ನಂತರ. ಅಂಗೈಯಿಂದ ತಲೆಗೆ ಬರುವ ಎಲ್ಲಾ ಅಂಗಗಳ ಬಗ್ಗೆ ಧ್ಯಾನ ಮಾಡಿ.

>> ಈ ಪ್ರಕ್ರಿಯೆಯ ವೇಳೆ ನಿಮ್ಮ ಉಸಿರಾಟ ಸಾಮಾನ್ಯವಾಗಿರಲಿ.

>> ಇದರ ನಂತರ, ದೇಹವನ್ನು ಸಂಪೂರ್ಣವಾಗಿ ಸಡಿಲಗೊಳಿಸಿ ಮತ್ತು ಧ್ಯಾನದ ಪ್ರಕ್ರಿಯೆಯಲ್ಲಿಯೇ ಉಳಿಯಿರಿ.

>> ಸ್ವಲ್ಪವೇ ಸಮಯದಲ್ಲಿ ನೀವು ಗಾಢ ನಿದ್ರೆಗೆ ಜಾರುವಿರಿ.


ಇದನ್ನೂ ಓದಿ-Alcohol Addiction: ಮನುಷ್ಯರಿಗೆ ಮದ್ಯ ಸೇವನೆಯ ಅಭ್ಯಾಸ ಏಕೆ ಬೀಳುತ್ತದೆ? ವಿಜ್ಞಾನಿಗಳು ಕಂಡು ಹಿಡಿದ ವಿಶಿಷ್ಟ ಕಾರಣ ಇಲ್ಲಿದೆ

ಮಹಾಭಾರತ ಕಾಲದಲ್ಲಿಯೂ ಕೂಡ ಇದರ ಬಳಕೆಯಾಗುತ್ತಿತ್ತು
ಪತಂಜಲಿ ಯೋಗಸೂತ್ರದಲ್ಲಿಯೂ ಕೂಡ ಈ ನಿದ್ರೆಯ ಪ್ಯಾಟರ್ನ್ ಕುರಿತು ಚರ್ಚಿಸಲಾಗಿದೆ.ಅಷ್ಟೇ ಅಲ್ಲ ಮಹಾಭಾರತ ಕಾಲದಲ್ಲಿಯೂ ಅರ್ಜುನ ತನ್ನ ನಿದ್ರೆಯನ್ನು ಪೂರ್ಣಗೊಳಿಸಲು ಇದೆ ಧ್ಯಾನ ತಂತ್ರದ ನೆರವನ್ನು ಪಡೆಯುತ್ತಿದ್ದ ಎನ್ನಲಾಗಿದೆ. ಸ್ಟ್ಯಾನ್ ಫೋರ್ಡ್ ಸ್ಕೂಲ್ ಆಫ್ ಮೆಡಿಸಿನ್ ವಿಜ್ಞಾನಿಯಾಗಿರುವ ಡಾ. ಆಂಡ್ರೂ ಹುಬರ್ಮನ್ ಕೂಡ ಇದೆ ತಂತ್ರಜ್ಞಾನದ ಕುರಿತು ವಿಸ್ತೃತವಾಗಿ ಹೇಳಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೆಯ.


ಇದನ್ನೂ ಓದಿ-World's Most Valuable Coin: ಇದುವೇ ವಿಶ್ವದ ಅತ್ಯಂತ ದುಬಾರಿ ಬೆಲೆಗೆ ಮಾರಾಟಗೊಂಡ ನಾಣ್ಯ, ಬೆಲೆ ಕೇಳಿ ನೀವೂ ಬೆಚ್ಚಿಬೀಳಬಹುದು

(Disclaimer - ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆಯನ್ನು ಪಡೆದುಕೊಳ್ಳಲು ಮರೆಯಬೇಡಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.