Alcohol Addiction: ಮನುಷ್ಯರಿಗೆ ಮದ್ಯ ಸೇವನೆಯ ಅಭ್ಯಾಸ ಏಕೆ ಬೀಳುತ್ತದೆ? ವಿಜ್ಞಾನಿಗಳು ಕಂಡು ಹಿಡಿದ ವಿಶಿಷ್ಟ ಕಾರಣ ಇಲ್ಲಿದೆ

Know Why There Is An Addiction To Alcohol - ಮನುಷ್ಯರು ಕುಡಿತದ ಚಟಕ್ಕೆ ಏಕೆ ಒಳಗಾಗುತ್ತಾರೆ ಗೊತ್ತಾ? ಈ ಕಾರಣವನ್ನು ಕಂಡುಹಿಡಿಯಲು, ವಿಜ್ಞಾನಿಗಳು ಕಳೆದ 25 ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ. ಫೈನಲಿ ಈ ಪ್ರಶ್ನೆಗೆ ಅವರು ಉತ್ತರವನ್ನು ಕಂಡುಕೊಂಡಿದ್ದಾರೆ.

Written by - Nitin Tabib | Last Updated : Apr 3, 2022, 01:52 PM IST
  • ಮನುಷ್ಯರಿಗೆ ಕುಡಿತದ ಚಟ ಏಕೆ ಬೀಳುತ್ತದೆ?
  • ವಿಜ್ಞಾನಿಗಳು ಕಂಡು ಹಿಡಿದ ವಿಶಿಷ್ಟ ಕಾರಣ ಇಲ್ಲಿದೆ.
  • ಮಂಗಗಳ ಮೇಲೆ ನಡೆದ ಸಂಶೋಧನೆ.
Alcohol Addiction: ಮನುಷ್ಯರಿಗೆ ಮದ್ಯ ಸೇವನೆಯ ಅಭ್ಯಾಸ ಏಕೆ ಬೀಳುತ್ತದೆ? ವಿಜ್ಞಾನಿಗಳು ಕಂಡು ಹಿಡಿದ ವಿಶಿಷ್ಟ ಕಾರಣ ಇಲ್ಲಿದೆ title=
Alcohol Addiction To Humans

ನವದೆಹಲಿ: Alcohol Addiction To Humans - ಮನುಷ್ಯರು ಕುಡಿತದ ಚಟಕ್ಕೆ ಏಕೆ ಒಳಗಾಗುತ್ತಾರೆ? ಎಂಬುದಕ್ಕೆ ಕೊನೆಗೂ ಉತ್ತರ ಸಿಕ್ಕಿಬಿಟ್ಟಿದೆ. ಮನುಷ್ಯರು ಕುಡಿತದ ಚಟಕ್ಕೆ ಏಕೆ ಬೀಳುತ್ತಾರೆ ಎಂಬುದನ್ನು ತಿಳಿಯಲು ಮಂಗಗಳ ಮೇಲೆ ಸಂಶೋಧನೆ ನಡೆಸಲಾಗಿದೆ. ಇದಕ್ಕಾಗಿ ಮಂಗಗಳು ತಿಂದ ಹಣ್ಣುಗಳು ಹಾಗೂ ಅವುಗಳ ಮೂತ್ರದ ಮಾದರಿಗಳನ್ನು ಹಲವು ಬಾರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆಗಳಲ್ಲಿ ಆಘಾತಕಾರಿ ಅಂಶಗಳು ಬಹಿರಂಗವಾಗಿವೆ. ಹಣ್ಣಾಗಿ, ಸ್ವಲ್ಪ ಕೊಳೆತ ಹಣ್ಣುಗಳ ಹುಡುಕಾಟದಲ್ಲಿ ಮಂಗಗಳು ನಿರತವಾಗಿರುತ್ತವೆ ಎಂಬುದು ಈ ಸಂಶೋಧನೆಯಲ್ಲಿ ತಿಳಿದುಬಂದಿದೆ. ಮಂಗಗಳು ತಿನ್ನುವ ಹಣ್ಣುಗಳಲ್ಲಿ ಶೇ.2ರಷ್ಟು ಆಲ್ಕೋಹಾಲ್ ಅಂಶ ಇರುವುದು ಈ ಸಂಶೋಧನೆಯಲ್ಲಿ ಬಹಿರಂಗವಾಗಿದೆ.

ಕಳೆದ 25 ವರ್ಷಗಳಿಂದ ಸಂಶೋಧನೆ ನಡೆಯುತ್ತಿದೆ (Reasons For Alcohol Adiction)
ಮಾಧ್ಯಮ ವರದಿಗಳ ಪ್ರಕಾರ, ಈ ವರದಿ Royal Society Open Science ಜರ್ನಲ್ ನಲ್ಲಿ ಪ್ರಕಟಗೊಂಡಿದೆ. ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಜೀವಶಾಸ್ತ್ರಜ್ಞ ರಾಬರ್ಟ್ ಡಡ್ಲಿ 25 ವರ್ಷಗಳಿಂದ ಮಾನವರಲ್ಲಿ ಆಲ್ಕೊಹಾಲ್ ಚಟದ ಕುರಿತು  ಸಂಶೋಧನೆ ನಡೆಸುತ್ತಿದ್ದಾರೆ. ಅವರು 2014 ರಲ್ಲಿ ಈ ಬಗ್ಗೆ ಪುಸ್ತಕವನ್ನು ಸಹ ಬರೆದಿದ್ದಾರೆ, ಅದರಲ್ಲಿ ಮನುಷ್ಯರಲ್ಲಿನ ಮದ್ಯ ಚಟ ಮಂಗಗಳಿಗೆ ಸಂಬಂಧಿಸಿದೆ ಎಂದು ಬರೆದುಕೊಂಡಿದ್ದಾರೆ. ಮಂಗಗಳಿಗೆ ವೈನ್ ಪರಿಮಳ ಇಷ್ಟವಾಗುವ ಕಾರಣ ಹಣ್ಣುಗಳು ಹಣ್ಣಾಗಲು ಅವು ಕಾಯುತ್ತವೆ ಎನ್ನಲಾಗಿದೆ.

ಇದನ್ನೂ ಓದಿ-ಕರೋನಾ ನಂತರ ಜನರನ್ನು ಕಾಡಲಿದೆ ಈ ವೈರಸ್ , WHO ಎಚ್ಚರಿಕೆ !

ಈ ರೀತಿ ಸಂಶೋಧನೆ ನಡೆಸಲಾಗಿದೆ
ಇದರ ನಂತರ, ಮಾನವರಲ್ಲಿ ಮದ್ಯದ ಚಟವನ್ನು ತಿಳಿಯಲು ಹೊಸ ಅಧ್ಯಯನವನ್ನು ನಡೆಸಲಾಯಿತು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಜೀವಶಾಸ್ತ್ರಜ್ಞರು ಈ ಅಧ್ಯಯನವನ್ನು ನಡೆಸಿದ್ದಾರೆ. ಅವರು ಪನಾಮದಲ್ಲಿ ಕಂಡುಬರುವ ಕಪ್ಪು ಕೈಯ ಜೇಡ ಕೋತಿ ತಿಂದ  ಹಣ್ಣುಗಳು ಮತ್ತು ಅವುಗಳ ಮೂತ್ರದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಈ ಮಂಗಗಳು ಕೆಲವು ಕೊಳೆತ ಹಣ್ಣುಗಳನ್ನು ತಿನ್ನಲು ಇಷ್ಟಪಡುತ್ತವೆ. ಈ ಹಣ್ಣುಗಳು ಶೇ. 1 ರಿಂದ ಶೇ. 2ರಷ್ಟು ಆಲ್ಕೋಹಾಲ್ ಅಂಶವನ್ನು ಹೊಂದಿರುತ್ತವೆ, ಹಣ್ಣುಗಳಲ್ಲಿ ಈ ಅಂಶ ನೈಸರ್ಗಿಕ ಹುದುಗುವಿಕೆಯಿಂದ ಬಂದಿರುತ್ತದೆ ಎನ್ನಲಾಗಿದೆ. ಈ ಪ್ರಮಾಣವು ಕಡಿಮೆ ಆಲ್ಕೋಹಾಲ್ ಹೊಂದಿರುವ ಬಿಯರ್‌ನಂತೆಯೇ ಇರುತ್ತದೆ. ಇದಲ್ಲದೇ ಮಂಗಗಳ ಶೌಚಾಲಯದಲ್ಲೂ ಮದ್ಯದ ಅಂಶ ಪತ್ತೆಯಾಗಿದೆ.

ಇದನ್ನೂ ಓದಿ-ಅಫ್ಘಾನಿಸ್ತಾನದ ಹೆರಾತ್ ನಗರದಲ್ಲಿ ಸ್ಫೋಟ, 12 ಸಾವು; 25 ಮಂದಿಗೆ ಗಾಯ

ಮಂಗಗಳು ತಿಂದ ಹಣ್ಣುಗಳಿಂದ ಮನುಷ್ಯರಲ್ಲಿ ಕುಡಿತದ ಚಟ ಬಂತು!
ಈ ಸಂಶೋಧನೆಯಿಂದ ಮಂಗಗಳು ಶಕ್ತಿಗಾಗಿ ಆಲ್ಕೋಹಾಲ್ ಅನ್ನು ಬಳಸುತ್ತವೆ ಎಂದು ತೀರ್ಮಾನಿಸಲಾಯಿತು. ಮಂಗಗಳು ಹಣ್ಣುಗಳನ್ನು ತಿನ್ನುವುದರಿಂದ ಮನುಷ್ಯರಲ್ಲಿ ಮದ್ಯಪಾನ ಮಾಡುವ ಬಯಕೆ ಬಂದಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಈ ಅಧ್ಯಯನದ ಗುರಿಯಾಗಿತ್ತು. ಆದರೆ, ಅಲ್ಕೋಹಾಲ್ ಅಂಶ ಹೊಂದಿರುವ ಎಷ್ಟು ಹಣ್ಣುಗಳನ್ನು ಮಂಗಗಳು ಸೇವಿಸುತ್ತವೆ ಮತ್ತು ಅವುಗಳ ಸೇವನೆಯಿಂದ ಮಂಗಗಳ ನಡುವಳಿಕೆಯಲ್ಲಿ ಯಾವ ಯಾವ ಬದಲಾವಣೆಗಳು ಕಂಡುಬರುತ್ತವೆ ಎಂಬುದು ಇದುವರೆಗೆ ಪತ್ತೆಯಾಗಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News