Google CEO On Covid Situation In India: ಭಾರತದಲ್ಲಿ ಕೊರೊನಾದ ಅತ್ಯಂತ ಕೆಟ್ಟ ಹಂತ ಬಾಕಿ ಇದೆ ಎಂದ ಸುಂದರ್ ಪಿಚೈ

Google CEO On Covid Situation In India: ಭಾರತದಲ್ಲಿ ಕೊರೊನಾದ (Covid-19) ಅತ್ಯಂತ ಕೆಟ್ಟ ಹಂತ ಬರುವುದು ಬಾಕಿ ಇದೆ ಎಂದು ಸುಂದರ್ ಪಿಚೈ (Google CEO)ಹೇಳಿದ್ದಾರೆ. CNN ಸುದ್ದಿ ವಾಹಿನಿಗೆ ನೀಡಿರುವ ಒಂದು ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಾರತದಲ್ಲಿನ ಸದ್ಯದ ಪರಿಸ್ಥಿತಿ ಹೃದಯ ಕದಡುವಂತಿದೆ ಎಂದು ಹೇಳಿದ್ದಾರೆ.

Written by - Nitin Tabib | Last Updated : May 3, 2021, 09:06 PM IST
  • ಭಾರತದಲ್ಲಿ ಕೊರೊನಾ ವೈರಸ್ ನ ಕೆಟ್ಟ ಹಂತ ಇನ್ನೂ ಬಾಕಿ ಇದೆ.
  • ಗೂಗಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಪಿಚೈ ಹೇಳಿಕೆ.
  • ಭಾರತದಲ್ಲಿನ ಸದ್ಯದ ಪರಿಸ್ಥಿತಿ ಹೃದಯ ಕಲಕುವಂತಿದೆ ಎಂದ ಪಿಚೈ.
Google CEO On Covid Situation In India: ಭಾರತದಲ್ಲಿ ಕೊರೊನಾದ ಅತ್ಯಂತ ಕೆಟ್ಟ ಹಂತ ಬಾಕಿ ಇದೆ ಎಂದ ಸುಂದರ್ ಪಿಚೈ title=
Google CEO On Covid Situation In India (File Photo)

ನವದೆಹಲಿ: Google CEO On Covid Situation In India - ಭಾರತದಲ್ಲಿನ ಕೊರೊನಾ ಪರಿಸ್ಥಿತಿಯ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆಗಳು ಮುಂದುವರೆದಿವೆ. ಏತನ್ಮಧ್ಯೆ Google CEO ಸುಂದರ್ ಪಿಚೈ (Google CEO Sunder Pichai), ಇನ್ನೂ ಭಾರತದಲ್ಲಿ ಕೊರೊನಾ ವೈರಸ್ ನ ಕೆಟ್ಟ ಹಂತ (Worst Stage) ಬರುವುದು ಬಾಕಿ ಇದೆ ಎಂದಿದ್ದಾರೆ. CNN ಸುದ್ದಿವಾಹಿನಿಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು. ಭಾರತದಲ್ಲಿನ ಸದ್ಯದ ಪರಿಸ್ಥಿತಿ ಹೃದಯ ಹಿಂಡುವಂತಿದೆ ಎಂದಿದ್ದಾರೆ. ಕೊರೊನಾ ವೈರಸ್ (Covid-19) ನ ಈ ಭೀಕರ ಪರಿಸ್ಥಿತಿಯಲ್ಲಿ (Covid-19 Situation In India) ಅಮೇರಿಕಾ ವತಿಯಿಂದ ಭಾರತಕ್ಕೆ ನೀಡಲಾಗುವ ನೆರವಿನ ಬಗ್ಗೆ ಪಿಚೈ ಅವರು ತಮ್ಮ ಸಂದರ್ಶದದಲ್ಲಿ ಚರ್ಚಿಸಿದ್ದಾರೆ. ಅಮೆರಿಕಾದ ರಾಷ್ಟ್ರಪತಿಗಳಗಿರುವ ಜೋ ಬಿಡೆನ್ ಹಾಗೂ ವಿದೇಶಾಂಗ ಸಚಿವ ಆಂಟನಿ ಬ್ಲಿಂಕೆನ್ ಭಾರತದಲ್ಲಿನ ಪರಿಸ್ಥಿತಿಯ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದು ತುಂಬಾ ಖುಷಿ ನೀಡುವ ಸಂಗತಿಯಾಗಿದೆ. ಸಂದರ್ಶನದ ವೇಳೆ ನಿಮ್ಮ ಕಂಪನಿ ಭಾರತದ ನೆರವಿಗೆ ಏನು ಮಾಡುತ್ತಿದೆ ಎಂಬುದಾಗಿ ಪ್ರಶ್ನಿಸಲಾಗಿ. ಇದಕ್ಕೆ ಉತ್ತರಿಸಿರುವ ಪಿಚೈ, ಜನರ ಮಧ್ಯೆ ಸರಿಯಾದ ಮಾಹಿತಿ ತಲುಪಿಸುವುದರ ಮೇಲೆ ನಮ್ಮ ಕಂಪನಿಯ ಹೆಚ್ಚಿನ ಆದ್ಯತೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ- Medicine For Covid-19 Treatment: ಕೊರೊನಾ ಚಿಕಿತ್ಸೆಗಾಗಿ Natco Pharma ಕಂಪನಿಯ Baricitinib ಮಾತ್ರೆಯ ತುರ್ತು ಬಳಕೆಗೆ ಅನುಮತಿ

ಭಾರತಕ್ಕೆ ನೆರವು ನೀಡಲಿದೆಯೇ ಅಮೇರಿಕಾ? ಪಿಚೈ ಹೇಳಿದ್ದೇನು?
ಸಂದರ್ಶನದ ವೇಳೆ ಮಾತನಾಡಿದ ಓರ್ವ ಪತ್ರಕರ್ತ, ಓರ್ವ ಭಾರತೀಯ ಮೂಲದ ಅಮೇರಿಕಾ ಪ್ರಜೆ ಭಾರತದ ಸಂಕಷ್ಟಗಳನ್ನು ಪರಿಹರಿಸುವ ಸಾಮರ್ಥ್ಯ ಅಮೇರಿಕಾ ಬಳಿ ಮಾತ್ರ ಇದೆ ಎಂದು ಹೇಳಿದ್ದಾರೆ. ಈ ಕುರಿತು ನೀವು ವಿದೇಶಾಂಗ ಸಚಿವರಾಗಿರುವ ಆಂಟನಿ ಬ್ಲಿಂಕೆನ್ ಅವರಿಗೆ ಏನು ಸಲಹೆ ನೀಡಿರುವಿರಿ ಎಂದು ಪಿಚೈ ಅವರನ್ನು ಪ್ರಶ್ನಿಸಿದ್ದಾರೆ. ಪತ್ರಕರ್ತರ ಈ ಪ್ರಶ್ನೆಗೆ ಉತ್ತರ ನೀಡಿರುವ ಪಿಚೈ, ವ್ಯಾಕ್ಸಿನ್ ಉತ್ಪಾದನೆ ಹಾಗೂ ಸಪ್ಲೈ ಕ್ಷೇತ್ರದಲ್ಲಿ ತುಂಬಾ ಸಹಾಯ ಮಾಡಬಹುದು. ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿದಂತೆ ಇತರೆ ಅತ್ಯಾವಶ್ಯಕ ಉಪಕರಣಗಳು ಭಾರತಕ್ಕೆ ರವಾನಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ- 'ಕೊರೊನಾ ವೈರಸ್ ಪತ್ತೆಗಾಗಿ CT-Scan ನಡೆಸುವುದು ತುಂಬಾ ಅಪಾಯಕಾರಿ'

ಅಮೆರಿಕಾದ ರಾಷ್ಟ್ರಪತಿ ಜೋ ಬಿಡೆನ್ ಕೊರೊನಾ (Coronavirus) ವಿರುದ್ಧ ಹೋರಾಡಲು ಭಾರತಕ್ಕೆ 100 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಕಳೆದ ಶನಿವಾರ ಅಮೇರಿಕ ತನ್ನ ಪರಿಹಾರ ಸಾಮಗ್ರಿಗಳ ಮೂರನೇ ಕಂತನ್ನು ನವದೆಹಲಿಗೆ ತಲುಪಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹಲವು ಹಂತಗಳಲ್ಲಿ ಪರಿಹಾರ ಸಾಮಗ್ರಿಗಳು ಭಾರತಕ್ಕೆ ಬರುವ ನಿರೀಕ್ಷೆ ಇದೆ. ಶುಕ್ರವಾರ ಅಮೇರಿಕಾದಿಂದ ವೈದ್ಯಕೀಯ ಸಪ್ಲೈಗಳ ಮೊದಲ ಕಂತು ಬಂದು ಭಾರತಕ್ಕೆ ತಲುಪಿದೆ. ಇವುಗಳಲ್ಲಿ 400 ಆಕ್ಸಿಜನ್ ಸಿಲಿಂಡರ್ ಗಳು, 9,60,000 ತ್ವರಿತ ಪರೀಕ್ಷಣಾ ಕಿಟ್, 1 ಲಕ್ಷ N95 ಮಾಸ್ಕ್ ಹಾಗೂ ಇತರೆ ಮಹತ್ವದ ಉಪಕರಣಗಳು ಶಾಮೀಲಾಗಿವೆ.

ಇದನ್ನೂ ಓದಿ- Masaba Gupta ಹಂಚಿಕೊಂಡ Giloy Kadha Recipe, ನೀವೂ ಅವಶ್ಯ ಸೇವಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News