ಕೂದಲು ಉದುರುವಿಕೆ, ಬಿಳಿ ಕೂದಲಿಗೆ ಅತ್ಯುತ್ತಮ ಪರಿಹಾರ.. ʼಫ್ಲಾಕ್ಸ್ ಸೀಡ್ ಹೇರ್ ಸ್ಪಾʼ..!
Flaxseed for hair : ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಆಯುರ್ವೇದ ತಜ್ಞರು ಸೂಚಿಸಿದಂತೆ ನಿಯಮಿತವಾಗಿ ಫ್ಲಾಕ್ಸ್ ಸೀಡ್ ಹೇರ್ ಸ್ಪಾ ಜೆಲ್ ಅನ್ನು ಬಳಸಿದರೆ ಉತ್ತಮ ಫಲಿತಾಂಶವನ್ನು ಪಡೆಬಹುದು.. ಇದರಲ್ಲಿರುವ ಗುಣಲಕ್ಷಣಗಳು ಕೂದಲನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
White hair treatment : ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂದಲು ಉದುರುವುದರ ಜೊತೆಗೆ ಬಿಳಿ ಕೂದಲಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆಧುನಿಕ ಜೀವನಶೈಲಿಯಿಂದ ಈ ಸಮಸ್ಯೆಗಳು ಉಂಟಾಗುತ್ತಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆದ್ದರಿಂದ, ಅಂತಹ ಸಮಸ್ಯೆಗಳನ್ನು ತಪ್ಪಿಸಲು ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು ಜೊತೆಗೆ ಆರೋಗ್ಯಕರ ಆಹಾರ ಸೇವಿಸಬೇಕು. ಇದರ ಹೊರತಾಗಿ, ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ಈ ಕೂದಲಿನ ಸಮಸ್ಯೆಗಳನ್ನು ತೊಡೆದುಹಾಕಬಹುದು.
ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವ ಅನೇಕ ಜನರು ದುಬಾರಿ ಹೇರ್ ಸ್ಪಾಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಇಂತಹ ಚಿಕಿತ್ಸೆಗಳನ್ನು ಫಲ ನೀಡುವುದಿಲ್ಲ ಎನ್ನುತ್ತಾರೆ ಆಯುರ್ವೇದ ತಜ್ಞರು. ಆದ್ದರಿಂದ ಈ ಕೆಳಗೆ ನೀಡಿರುವ ಮನೆ ಮದ್ದುಗಳನ್ನು ಬಳಸಿ ನೀವು ಸುಲಭವಾಗಿ ಪರಿಹಾರವನ್ನು ಪಡೆಯಬಹುದು.
ಇದನ್ನೂ ಓದಿ:ತೀವ್ರ ಹಲ್ಲಿನ ನೋವಿಗೆ 5 ನಿಮಿಷದಲ್ಲಿ ಪರಿಹಾರ..! ಈ ಮನೆಮದ್ದು ಬಳಸಿ
ಅಗಸೆ ಬೀಜ ಕೂದಲಿಗೆ ಉತ್ತಮ ಫಲಿತಾಂಶ ನೀಡುತ್ತದೆ. ಇದರಲ್ಲಿ ಕಂಡುಬರುವ ಪ್ರೋಟೀನ್, ಫೈಬರ್, ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಇ, ಆಂಟಿಆಕ್ಸಿಡೆಂಟ್ಗಳು ಮತ್ತು ವಿಟಮಿನ್ ಬಿ ಕೂದಲನ್ನು ಸುಂದರವಾಗಿಸಲು ಸಹಾಯ ಮಾಡುತ್ತದೆ. ಕೂದಲಿಗೆ ಪೋಷಣೆ ನೀಡುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತದೆ. ಸಧ್ಯ ಅಗಸೆ ಬೀಜಗಳನ್ನು ಕೂದಲಿಗೆ ಹೇಗೆ ಬಳಸಬೇಕೆಂದು ತಿಳಿಯೋಣ.
ಫ್ಲಾಕ್ಸ್ ಸೀಡ್ ಹೇರ್ ಸ್ಪಾ ಜೆಲ್ ತಯಾರಿಗೆ ಬೇಕಾದ ಪರಿಕರಗಳು
ಅಗಸೆ ಬೀಜಗಳು
ಅಲೋವೆರಾ ಜೆಲ್
ತೆಂಗಿನ ಎಣ್ಣೆ
ಸಾಸಿವೆ ಎಣ್ಣೆ
ನೀರು
ಹೇರ್ ಸ್ಪಾ ಜೆಲ್ ತಯಾರಿಸುವ ವಿಧಾನ
ಅಗಸೆ ಬೀಜಗಳಿಂದ ತಯಾರಿಸಿದ ಹೇರ್ ಸ್ಪಾ ಜೆಲ್ ಕೂದಲಿಗೆ ತುಂಬಾ ಪ್ರಯೋಜನಕಾರಿ. ಈ ಜೆಲ್ ಮಾಡಲು ಮೊದಲು ನೀವು 1 ಕಪ್ ನೀರನ್ನು ತೆಗೆದುಕೊಳ್ಳಬೇಕು. ನೀರನ್ನು ಚೆನ್ನಾಗಿ ಕುದಿಸಿ ಮತ್ತು 2 ಟೇಬಲ್ಸ್ಪೂನ್ ಅಗಸೆ ಬೀಜಗಳನ್ನು ಸೇರಿಸಿ, ಸುಮಾರು 10 ನಿಮಿಷಗಳ ಕಾಲ ಕುದಿಸಿ. ಎಲ್ಲಾ ನೀರು ಆವಿಯಾದ ನಂತರ, ಬೀಜಗಳು ಜೆಲ್ ಆಗುತ್ತವೆ. ನಂತರ ಜೆಲ್ ಅನ್ನು ಒಂದು ಬೌಲ್ನಲ್ಲಿ ಹಾಕಿಕೊಳ್ಳಿ. ನಂತರ, ಅದಕ್ಕೆ ಅಲೋವೆರಾ ಜೆಲ್, ತೆಂಗಿನ ಎಣ್ಣೆ ಮತ್ತು ಸಾರಭೂತ ತೈಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.