ಬೆಂಗಳೂರು: ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಉತ್ತಮವಾದ ಆಹಾರ ಅಭ್ಯಾಸಗಳು ಹಲವು ರೋಗಗಳು ನಮ್ಮ ಬಳಿ ಬರುವುದನ್ನು ತಡೆಯುತ್ತವೆ. ನಮ್ಮ ಆಹಾರಾಭ್ಯಾಸ ಸರಿ ಇಲ್ಲದಿದ್ದರೆ ದೇಹದ ಬೊಜ್ಜು ಹೆಚ್ಚಾಗುವುದು ಮಾತ್ರವಲ್ಲ ಹಲವು ರೋಗಗಳಿಗೆ ಆಹ್ವಾನ ನೀಡಿದಂತೆ ಎಂದರೆ ತಪ್ಪಾಗಲಾರದು.


COMMERCIAL BREAK
SCROLL TO CONTINUE READING

ಬೊಜ್ಜು ನಿಯಂತ್ರಿಸಲು ಉತ್ತಮ ಆಹಾರ ಅಥವಾ ಆಹಾರ ಪದ್ಧತಿ ಬಹಳ ಮುಖ್ಯ. ಆನಿಯನ್ ರಿಂಗ್, ಚಿಲ್ಲಿ ಪೊಟಾಟೋ, ಆಲೂಗೆಡ್ಡೆ ಚಿಪ್ಸ್, ಫ್ರೆಂಚ್ ಫೈ ಸೇರಿದಂತೆ ಹಲವು ಆಹಾರಗಳು ದೇಹದ ತೂಕ ಹೆಚ್ಚಿಸುತ್ತವೆ. ಹಾಗಾಗಿಯೇ ಕೆಲವರು ಎಣ್ಣೆ ಪದಾರ್ಥಗಳಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಆದರೆ ಕೆಲವು ತರಕಾರಿಗಳು (Vegetables) ಸಹ ಬೊಜ್ಜು ಹೆಚ್ಚಿಸುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಹೌದು ಕೆಲವು ತರಕಾರಿಗಳು ಬಹಳಷ್ಟು ಪಿಷ್ಟವನ್ನು ಹೊಂದಿರುತ್ತವೆ. ಇದರಿಂದಾಗಿ ದೇಹವು ಅವುಗಳನ್ನು ಜೀರ್ಣಿಸಿಕೊಳ್ಳುತ್ತದೆ. ಇದರಿಂದಾಗಿ ಹೆಚ್ಚುವರಿ ಸಕ್ಕರೆ ಕೊಬ್ಬಾಗಿ ಬದಲಾಗುತ್ತದೆ. ಅಂತಹ ಕೆಲವು ತರಕಾರಿಗಳ ಬಗ್ಗೆ ಇಂದಿನ ಲೇಖನದಲ್ಲಿ ಮಾಹಿತಿ ನೀಡುತ್ತಿದ್ದೇವೆ.


ಸ್ವೀಟ್ ಕಾರ್ನ್ (Sweet Corn)ಗೆ ಹೇಳಿ ಬೈ ಬೈ:
ನೀವು ಸ್ವೀಟ್ ಕಾರ್ನ್ ತಿನ್ನುವ ಅಭ್ಯಾಸ ಹೊಂದಿದ್ದರೆ ಮೊದಲು ಅದನ್ನು ಬಿಡಿ. ಇದು ಆರೋಗ್ಯಕ್ಕೆ ಅಪಾಯಕಾರಿ, ಜೊತೆಗೆ ಇದು ತೂಕವನ್ನು ಹೆಚ್ಚಿಸುತ್ತದೆ. ಸ್ವೀಟ್ ಕಾರ್ನ್ ಬಹಳಷ್ಟು ಪಿಷ್ಟವನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ (Blood sugar) ಪ್ರಮಾಣವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು  ಸ್ವೀಟ್ ಕಾರ್ನ್ ತಿನ್ನದಿರುವುದು ಉತ್ತಮ.


ವಿಷಕಾರಿ ತರಕಾರಿಗಳಿಂದ ಬಚಾವ್ ಆಗುವುದು ಹೇಗೆ? ಇಲ್ಲಿದೆ ಸರಳ ಪರಿಹಾರ


ಆಲೂಗಡ್ಡೆ (Potato) ಸೇವನೆಯನ್ನು ಕಡಿಮೆ ಮಾಡಿ:
ನಾವು ಆಲೂಗಡ್ಡೆಯನ್ನು ತರಕಾರಿಯಾಗಿ ಬಳಸುತ್ತೇವೆ. ಆದರೆ ಅದನ್ನು ಹೆಚ್ಚು ಸೇವಿಸಬಾರದು. ಇದೂ ಕೂಡ ತೂಕವನ್ನು ಹೆಚ್ಚಿಸುತ್ತದೆ.  ಅಷ್ಟೇ ಅಲ್ಲದೆ ಮಂಡಿ ನೋವಿನ ರೀತಿಯ ಸಮಸ್ಯೆಗಳು ಉಂಟಾಗುತ್ತವೆ.


ಕ್ಯಾರೆಟ್: 
ಕ್ಯಾರೆಟ್ ಕೂಡ ಸಿಹಿ ಅಂಶವನ್ನು ಹೊಂದಿದ್ದು ತೂಕ ನಷ್ಟ (Weight Lose)ಮಾಡಲು ಬಯಸುವವರು ಕ್ಯಾರೆಟ್ ಅನ್ನು ಅತಿಯಾಗಿ ಸೇವಿಸದೆ ಇರುವುದು ಉತ್ತಮ ಎಂದು ಹೇಳಲಾಗುತ್ತದೆ.


ಹೂಕೋಸು (Cauliflower) :
ಎಲೆಕೋಸು, ಗಡ್ಡೆಕೋಸು ಸೇವನೆಯು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಆದರೆ ಇವುಗಳನ್ನು ಅತಿಯಾಗಿ ಸೇವಿಸುವುದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ಇದಲ್ಲದೆ ಎಲೆಕೋಸು ಆಮ್ಲೀಯತೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ.


ನಿಮಗೂ Throat Infection ಸಮಸ್ಯೆ ಇದ್ದರೆ ಈ ಮನೆಮದ್ದನ್ನು ಪ್ರಯತ್ನಿಸಿ


ಪ್ಯಾಕೇಜ್ ಮಾಡಿದ ಸಲಾಡ್ ತಿನ್ನುವುದನ್ನು ತಪ್ಪಿಸಿ :
ನೀವು ಪ್ಯಾಕ್ ಮಾಡಲಾದ ಸಲಾಡ್ ಬಳಕೆಯನ್ನು ತಪ್ಪಿಸಬೇಕು. ರೆಸ್ಟೋರೆಂಟ್‌ನಿಂದ ಆರ್ಡರ್ ಮಾಡಿ ತರಿಸಿದ ಆಹಾರದಲ್ಲಿ ನೀಡಲಾಗುವ ಸಲಾಡ್ ಅನ್ನು ಕಡಿಮೆ ತಿನ್ನಬೇಕು. ಇಲ್ಲವೇ ಇದೂ ಕೂಡ ನಿಮ್ಮ ಬೊಜ್ಜು ಹೆಚ್ಚಿಸುತ್ತದೆ.