ನಿಮಗೂ Throat Infection ಸಮಸ್ಯೆ ಇದ್ದರೆ ಈ ಮನೆಮದ್ದನ್ನು ಪ್ರಯತ್ನಿಸಿ

ಎಲ್ಲಾ ಋತುವಿನಲ್ಲೂ ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಚಳಿಗಾಲದಲ್ಲಿ ಇದು ಬಹಳ ಉತ್ತಮವಾಗಿದೆ. ಗಂಟಲಿನ ಸೋಂಕನ್ನು ತೆಗೆದುಹಾಕಲು ಶುಂಠಿಯನ್ನು ಸೇವಿಸಬೇಕು. ನೀವು ಬಯಸಿದರೆ ನೀವು ಅದನ್ನು ಚಹಾದೊಂದಿಗೆ ಅಥವಾ ಆಹಾರದೊಂದಿಗೆ ಸೇವಿಸಬಹುದು.

Last Updated : Nov 25, 2020, 03:59 PM IST
  • ಚಳಿಗಾಲ ಆರಂಭವಾಗುತ್ತಿದ್ದಂತೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
  • ಗಂಟಲಿನ ಸೋಂಕು ಅಥವಾ ಥ್ರೋಟ್ ಇನ್ಫೆಕ್ಷನ್ ಸಮಸ್ಯೆಗೆ ಹಲವು ಕಾರಣಗಳಿವೆ.
  • ಗಂಟಲಿನ ಸೋಂಕಿಗೆ ಪರಿಹಾರ
ನಿಮಗೂ Throat Infection ಸಮಸ್ಯೆ ಇದ್ದರೆ ಈ ಮನೆಮದ್ದನ್ನು ಪ್ರಯತ್ನಿಸಿ title=

ಬೆಂಗಳೂರು: ಹವಾಮಾನ ಬದಲಾವಣೆಯ ಜೊತೆಗೆ ನಮ್ಮ ಆರೋಗ್ಯದಲ್ಲೂ ಹಲವು ಬದಲಾವಣೆಯಾಗುತ್ತದೆ. ಅದರಲ್ಲೂ ಚಳಿಗಾಲ (Winter) ಆರಂಭವಾಗುತ್ತಿದ್ದಂತೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಗಂಟಲಿನ ಸಮಸ್ಯೆ ಪ್ರಮುಖವಾಗಿದೆ. ಗಂಟಲಿನ ಸೋಂಕು ಅಥವಾ ಥ್ರೋಟ್ ಇನ್ಫೆಕ್ಷನ್ ಸಮಸ್ಯೆಗೆ ಹಲವು ಕಾರಣಗಳಿವೆ. ಆದರೆ ಕೆಲವು ಮನೆಮದ್ದನ್ನು ಬಳಸುವ ಮೂಲಕ ಇದನ್ನು ನೀವು ಸುಲಭವಾಗಿ ನಿವಾರಿಸಬಹುದು.

ಜೇನುತುಪ್ಪ ಮತ್ತು ಕರಿಮೆಣಸು  (Honey and Black pepper) 
ಗಂಟಲು ಸೋಂಕಿನ ಸಮಸ್ಯೆಯನ್ನು ಹೋಗಲಾಡಿಸಲು ಜೇನುತುಪ್ಪ (Honey) ಮತ್ತು ಕರಿಮೆಣಸು ತೆಗೆದುಕೊಳ್ಳಬೇಕು. ಇದಕ್ಕಾಗಿ ಕರಿಮೆಣಸಿನ ಪುಡಿಯನ್ನು ಅರ್ಧ ಟೀ ಚಮಚ ಜೇನುತುಪ್ಪದಲ್ಲಿ ಬೆರೆಸಿ ಸೇವಿಸಿ.

ಚಳಿಗಾಲದಲ್ಲಿ ಕಾಂತಿಯುತ ತ್ವಚೆ ನಿಮ್ಮದಾಗಲು ಇಲ್ಲಿದೆ ಟಿಪ್ಸ್

ಆಪಲ್ ವಿನೆಗರ್ (Apple vinegar)
ನಿಮ್ಮ ಗಂಟಲಿನ ಸೋಂಕನ್ನು ನಿವಾರಿಸಲು ಆಪಲ್ ವಿನೆಗರ್ (Apple vinegar) ಸಹಾಯ ಮಾಡುತ್ತದೆ. ಒಂದು ಚಮಚ ಆಪಲ್ ವಿನೆಗರ್ ಅನ್ನು ಬಿಸಿನೀರಿನಲ್ಲಿ ಹಾಕಿ ನಂತರ ಅದರೊಂದಿಗೆ ಗಾರ್ಗ್ ಮಾಡಿ. ಇದು ಗಂಟಲಿನ ಸೋಂಕನ್ನು ಗುಣಪಡಿಸುವಲ್ಲಿ ಪ್ರಯೋಜನಕಾರಿಯಾಗಿದೆ.

ಕಷಾಯ ಕುಡಿಯಿರಿ
ಗಂಟಲು ಸೋಂಕನ್ನು ಹೋಗಲಾಡಿಸಲು ಕಷಾಯ ಬಹಳ ಸಹಾಯಕವಾಗಿದೆ. ಇದು ಆರೋಗ್ಯಕ್ಕೂ ಪ್ರಯೋಜನಕಾರಿ. ಇದಲ್ಲದೆ ದೇಹದಲ್ಲಿ ಪ್ರತಿರಕ್ಷೆಯೂ (Immunity) ಹೆಚ್ಚಾಗುತ್ತದೆ. ಇದು ಗಂಟಲಿನ ಸೋಂಕನ್ನು ಬೇಗ ನಿವಾರಿಸುತ್ತದೆ.

ಚಳಿಗಾಲದಲ್ಲಿ ಈ ಆಹಾರವನ್ನು ಸೇವಿಸಿ ದೇಹವನ್ನು ಬೆಚ್ಚಗಿಡಿ!

ಶುಂಠಿ (Ginger)
ಎಲ್ಲಾ ಋತುವಿನಲ್ಲೂ ಶುಂಠಿ (Ginger) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಚಳಿಗಾಲದಲ್ಲಿ ಇದು ಬಹಳ ಉತ್ತಮವಾಗಿದೆ. ಗಂಟಲಿನ ಸೋಂಕನ್ನು ತೆಗೆದುಹಾಕಲು ಶುಂಠಿಯನ್ನು ಸೇವಿಸಬೇಕು. ನೀವು ಬಯಸಿದರೆ ನೀವು ಅದನ್ನು ಚಹಾದೊಂದಿಗೆ ಅಥವಾ ಆಹಾರದೊಂದಿಗೆ ಸೇವಿಸಬಹುದು.

Trending News