ಬೆಂಗಳೂರು: ಸಾಮಾನ್ಯ ಮಟ್ಟದ ಕೊಲೆಸ್ಟ್ರಾಲ್  ಆರೋಗ್ಯವನ್ನು ಕಾಪಾಡುತ್ತದೆ, ಆದರೆ ಅದು ಹೆಚ್ಚಾದ ತಕ್ಷಣ ಅದು ಮಾರಕವಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಅಡೆತಡೆಯುಂಟು ಮಾಡುತ್ತದೆ.  ಇದು ಕೊಬ್ಬು ಮತ್ತು ಜಿಗುಟಾದ ವಸ್ತುವಿನ ರೂಪದಲ್ಲಿರುತ್ತದೆ, ಇದು ರಕ್ತನಾಳಗಳ ಒಳ ಪದರದಲ್ಲಿ ರಕ್ತ ಪರಿಚಲನೆಯ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ (Health News In Kannada). ಈ ಕಾರಣದಿಂದಾಗಿ, ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಧಿಕ ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಔಷಧಿಗಳಲ್ಲದೇ ಆಹಾರದಲ್ಲಿ ಕೆಲವು ವಿಷಯಗಳನ್ನು ಶಾಮೀಲುಗೊಳಿಸುವುದರಿಂದ ಅದನ್ನು ನಿಯಂತ್ರಿಸಬಹುದು. ಈ ಸಂಗತಿಗಳಲಿ ಕೆಂಪು ಬಣ್ಣದ ಸೇಬು ಹಣ್ಣು ಮೊದಲು ಬರುತ್ತದೆ. ಪ್ರತಿದಿನ ಸೇಬನ್ನು ತಿನ್ನುವುದರಿಂದ ರಕ್ತನಾಳಗಳಲ್ಲಿ ತುಂಬಿರುವ ಕೊಲೆಸ್ಟ್ರಾಲ್ ನಿಧಾನವಾಗಿ ಮೇಣದಂತೆ ಕರಗಿ ಹೊರಬರುತ್ತದೆ.


COMMERCIAL BREAK
SCROLL TO CONTINUE READING

ವಾಸ್ತವದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತನ್ನಷ್ಟಕ್ಕೆ ತಾನೇ ಹೆಚ್ಚಾಗುವುದಿಲ್ಲ. ಇದಕ್ಕೆ ಕಾರಣ ನಮ್ಮ ದಿನಚರಿ, ಕರಿದ ಆಹಾರವನ್ನು ತಿನ್ನುವುದು ಮತ್ತು ವರ್ಕೌಟ್ ಮಾಡದಿರುವುದು. ಇದರಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ವೃದ್ಧರ ಜೊತೆಗೆ ಯುವಕರನ್ನು ಕೂಡ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಯುವಕರು ಅತಿ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪುಟ್ಟಿದ್ದಾರೆ. ಇದಕ್ಕೆ ಕಾರಣ ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಉಂಟುಮಾಡುವ ಅಡಚಣೆ. ಹೀಗಾಗಿ ರಕ್ತ ಪೂರೈಕೆಯಲ್ಲಿ ಅಡಚಣೆಯಾಗುತ್ತದೆ. ಇದು ವ್ಯಕ್ತಿಯ ಜೀವ ತೆಗೆಯುವವರೆಗೂ ಹೋಗುತ್ತದೆ. ಬನ್ನಿ, ಈ ಕಾಯಿಲೆಯಿಂದ ರಕ್ಷಿಸುವಲ್ಲಿ ಸೇಬಿನ ಹಣ್ಣು ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳೋಣ.


ಆಪಲ್ ಕೊಲೆಸ್ಟ್ರಾಲ್‌ಗೆ ಔಷಧಕ್ಕಿಂತ ಕಡಿಮೆಯಿಲ್ಲ
ಮಾವು ಹಣ್ಣುಗಳ ರಾಜನಾಗಿರಬಹುದು, ಆದರೆ ಗುಣಗಳ ವಿಷಯಕ್ಕೆ ಬಂದಾಗ, ಸೇಬು ಯಾವುದೇ ಹಣ್ಣುಗಳಿಗಿಂತ ಕಡಿಮೆಯಿಲ್ಲ. ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಫೈಬರ್, ಬಯೋಆಕ್ಟಿವ್ ಪಾಲಿಫಿನಾಲ್ಗಳು ಮತ್ತು ರಂಜಕಗಳು ಸೇಬಿನಲ್ಲಿ ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ. ಆಪಲ್ ದೇಹಕ್ಕೆ ಹೋಗುವ ಮೂಲಕ ರಕ್ತನಾಳಗಳಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸೇಬು ಹೇಗೆ ಪರಿಣಾಮಕಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳೋಣ, ಇದರ ಜೊತೆಗೆ ಪ್ರತಿದಿನ ಎಷ್ಟು ಸೇಬುಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಅದನ್ನೂ ಕೂಡ ಅರಿಯೋಣ.


ಪ್ರತಿದಿನ ಒಂದರಿಂದ ಎರಡು ಸೇಬುಗಳನ್ನು ತಿನ್ನಬೇಕು
ವರದಿಗಳ ಪ್ರಕಾರ, ನೀವು ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಅನ್ನು ತಪ್ಪಿಸಲು ಮತ್ತು ನಿಮ್ಮ ಹೃದಯವನ್ನು ಸುರಕ್ಷಿತವಾಗಿರಿಸಲು ಬಯಸಿದರೆ, ನೀವು ಪ್ರತಿದಿನ ಒಂದರಿಂದ ಎರಡು ಸೇಬುಗಳನ್ನು ಸೇವಿಸಬೇಕು. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಉಪಾಹಾರದಲ್ಲಿ ಸೇಬನ್ನು ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಬಯೋಆಕ್ಟಿವ್ ಪಾಲಿಫಿನಾಲ್‌ಗಳು ಮತ್ತು ಫೈಬರ್‌ನಂತಹ ಪೋಷಕಾಂಶಗಳು ನರಗಳನ್ನು ಸ್ವಚ್ಛಗೊಳಿಸುತ್ತವೆ. ಇದು ಮುಖಕ್ಕೆ ಹೊಳಪನ್ನೂ ನೀಡುತ್ತದೆ. ಚಯಾಪಚಯ ಮತ್ತು ಹೃದಯರಕ್ತನಾಳದ ವ್ಯವಸ್ಥೆಯನ್ನು ಸಹ ಹೆಚ್ಚಿಸುತ್ತದೆ. ಇದು ಹೊಟ್ಟೆ ಮತ್ತು ಹೃದಯ ಎರಡನ್ನೂ ಆರೋಗ್ಯವಾಗಿರಿಸುತ್ತದೆ. ಅಪಧಮನಿಯ ಕಾಯಿಲೆಯ ಅಪಾಯವನ್ನು ಸಹ ಹೆಚ್ಚಿನ ಪ್ರಮಾಣದಲ್ಲಿ ತಪ್ಪಿಸುತ್ತದೆ.


ಇದನ್ನೂ ಓದಿ-ಆ್ಯಂಟಿ-ಡೈಬಿಟಿಕ್ ಗುಣಗಳ ಉಗ್ರಾಣ ಈ ಗಿಡದ ಎಲೆಗಳು, ಕೇವಲ ಜಗಿದು ತಿನ್ನಿ ಸಾಕು, ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ!


ಸೇಬು ತಿಂದ ನಂತರ ಔಷಧದ ಅವಶ್ಯಕತೆ ಇರುವುದಿಲ್ಲ
11 ವರ್ಷಗಳ ಹಿಂದೆ, ಅಂದರೆ 2012 ರಲ್ಲಿ, ಅಮೆರಿಕಾದಲ್ಲಿ ಕೊಲೆಸ್ಟ್ರಾಲ್ ಬಗ್ಗೆ ನಡೆಸಿದ ಸಂಶೋಧನೆಯೊಂದರ ಪ್ರಕಾರ, ಪ್ರತಿದಿನ ಸೇಬು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಬಹಳ ವೇಗವಾಗಿ ಕಡಿಮೆ ಮಾಡಬಹುದು ಎಂದು ಹೇಳಲಾಗಿದೆ. ದಿನವಿಡೀ ನಿಯಮಿತವಾಗಿ ಎರಡು ಸೇಬುಗಳನ್ನು ತಿನ್ನುವುದರಿಂದ ರಕ್ತನಾಳಗಳು ಸ್ವಚ್ಛವಾಗಿರುತ್ತವೆ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಶೇ. 40 ರಷ್ಟು ಕಡಿಮೆ ಇರುತ್ತದೆ. ಕೊಲೆಸ್ಟ್ರಾಲ್ ಔಷಧಿಗಿಂತ ಸೇಬು ಹೆಚ್ಚು ಪ್ರಯೋಜನಕಾರಿ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ, ಆದರೆ ನಿಯಮಿತವಾಗಿ ಸೇವಿಸಿದರೆ ಮಾತ್ರ ಹೆಚ್ಚು ಪ್ರಯೋಜನಕಾರಿಯಾಗಿದೆ. ಕೊಲೆಸ್ಟ್ರಾಲ್ ಮಾತ್ರವಲ್ಲ, ಸೇಬಿನಲ್ಲಿರುವ ಪೋಷಕಾಂಶಗಳು ದೇಹದಲ್ಲಿನ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ-ಕೊಲೆಸ್ಟ್ರಾಲ್-ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿಗೆ ವರದಾನಕ್ಕೆ ಸಮಾನ ಈ ತರಕಾರಿ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.