Can Beer Help Dissolve Kidney Stones? : ಕಿಡ್ನಿಗೆ ಕುರಿತು ಸಮಸ್ಯೆಗಳಲ್ಲಿ ನಾವು ಹೆಚ್ಚಾಗಿ ಕೇಳುವ ಮಾತು ಕಿಡ್ನಿ ಸ್ಟೋನ್. ವಿವಿಧ ರೀತಿಯ ಖನಿಜಗಳ ಶೇಖರಣೆಯಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳುತ್ತವೆ. ಇದನ್ನು ಮೂತ್ರಪಿಂಡದ ಕಲ್ಲುಗಳು ಎಂದು ಕರೆಯಲಾಗುತ್ತದೆ. ಕಿಡ್ನಿ ಕಲ್ಲುಗಳ ನಿವಾರಣಗೆ ಬಗ್ಗೆ ನಮ್ಮಲ್ಲಿ ಒಂದು ವಿಚಿತ್ರ ಮಾತಿದೆ.. ಬಿಯರ್‌ ಕುಡಿದ್ರೆ ಸಮಸ್ಯೆ ನಿವಾರಣೆ ಆಗುತ್ತೆ ಅಂತ.. ಇದು ನಿಜವೇ.. ಬನ್ನಿ ತಿಳಿಯೋಣ..


COMMERCIAL BREAK
SCROLL TO CONTINUE READING

ಮೂತ್ರಪಿಂಡಗಳು ಮಾನವ ದೇಹದ ಅತ್ಯಂತ ಶಕ್ತಿಶಾಲಿ ಅಂಗಗಳಲ್ಲಿ ಒಂದು. ಮೂತ್ರಪಿಂಡಗಳ ಮುಖ್ಯ ಕಾರ್ಯವೆಂದರೆ ರಕ್ತವನ್ನು ಶುದ್ಧೀಕರಿಸುವುದು. ಅದಕ್ಕಾಗಿಯೇ ಮೂತ್ರಪಿಂಡಗಳನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ. ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳದಂತೆ ಎಚ್ಚರವಹಿಸಿ. ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯು ತೀವ್ರವಾದ ನೋವನ್ನು ಉಂಟುಮಾಡುತ್ತದೆ. ಮೂತ್ರದಲ್ಲಿ ರಕ್ತ ಮತ್ತು ಸೋಂಕಿನಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಮತ್ತೊಂದೆಡೆ ಕಿಡ್ನಿ ಸ್ಟೋನ್ ವಿಚಾರದಲ್ಲಿ ಕೆಲ ಅಸತ್ಯಗಳನ್ನು ಹಬ್ಬಿಸಲಾಗುತ್ತಿದೆ. ಈ ಅಸತ್ಯಗಳಿಂದಾಗಿ ಕೆಲವೊಮ್ಮೆ ಪರಿಸ್ಥಿತಿ ಅಪಾಯಕಾರಿಯಾಗುತ್ತದೆ. ಅವು ಯಾವುವು ಬನ್ನಿ ನೋಡೋಣ.


ಇದನ್ನೂ ಓದಿ:ಈ ಕಾರಣಗಳಿಂದಲೇ ಹೆಣ್ಣು ಮಕ್ಕಳಿಗೆ Late Period ಕಾಣಿಸಿಕೊಳ್ಳುತ್ತದೆ ! ಸಮಸ್ಯೆಗೆ ಪರಿಹಾರವೂ ಬಹಳ ಸುಲಭ


ಮೂತ್ರಪಿಂಡದ ಕಲ್ಲುಗಳು ಪುರುಷರಲ್ಲಿ ಮಾತ್ರ ಸಂಭವಿಸುತ್ತವೆ ಎಂಬ ಜನಪ್ರಿಯ ಪುರಾಣವಿದೆ. ಸತ್ಯವೆಂದರೆ ಈ ಸಮಸ್ಯೆಯು ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಆದರೆ ಮಹಿಳೆಯರು ಕೂಡ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ಮಹಿಳೆಯರಲ್ಲಿಯೂ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚುತ್ತಿದೆ. 


ಇನ್ನು ಬಿಯರ್ ಕುಡಿದರೆ ಕಿಡ್ನಿಯಲ್ಲಿನ ಕಲ್ಲು ಹೊರಬರುತ್ತದೆ ಎಂಬ ಮಾತಿದೆ. ಇದು ಸಂಪೂರ್ಣ ಸುಳ್ಳು. ವಾಸ್ತವವಾಗಿ, ಬಿಯರ್ ಕುಡಿಯುವುದು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ಬಿಯರ್ ಮೂತ್ರದಲ್ಲಿ ಕ್ಯಾಲ್ಸಿಯಂ ಪ್ರಮಾಣವನ್ನು ದ್ವಿಗುಣಗೊಳಿಸುತ್ತದೆ. ಇದು ಕಲ್ಲಿನ ರಚನೆಯ ಅಪಾಯವನ್ನು ಹೆಚ್ಚಿಸುತ್ತದೆ. 


ಇದನ್ನೂ ಓದಿ: ನೀವು ಪ್ರತಿದಿನ ಮೊಸರು ತಿಂದರೆ ಏನಾಗುತ್ತದೆ..? ತಿಳಿಯಿರಿ


ಮೂತ್ರಪಿಂಡದ ಕಲ್ಲುಗಳನ್ನು ಶಸ್ತ್ರಚಿಕಿತ್ಸೆಯಿಂದ ಮಾತ್ರ ತೆಗೆದುಹಾಕಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ ವಾಸ್ತವ ಅದಲ್ಲ. ಹೆಚ್ಚಿನ ಮೂತ್ರಪಿಂಡದ ಕಲ್ಲುಗಳು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ ಮತ್ತು ನೈಸರ್ಗಿಕವಾಗಿ ಹಾದುಹೋಗುತ್ತವೆ. ಔಷಧಗಳು ಅವುಗಳನ್ನು ಕರಗಿಸಲು ಮತ್ತು ಹೊರತೆಗೆಯಲು ಸಹಾಯಮಾಡುತ್ತವೆ. ದೊಡ್ಡ ಕಲ್ಲುಗಳು ಅಥವಾ ಅಂಟಿಕೊಂಡಿರುವ ಕಲ್ಲುಗಳನ್ನು ಮಾತ್ರ ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗುತ್ತದೆ. 


ಮೂತ್ರಪಿಂಡದ ಕಲ್ಲುಗಳಿಗೆ ಚಿಕಿತ್ಸೆ ಇಲ್ಲ ಎಂದು ಕೆಲವರು ಭಾವಿಸುತ್ತಾರೆ. ಆದರೆ ಇದು ಕೂಡ ಸುಳ್ಳು ಸುದ್ದಿ. ಕಿಡ್ನಿ ಸ್ಟೋನ್‌ನಿಂದ ಗುಣಮುಖರಾಗಬಹುದು. ಇನ್ನು ಆಹಾರ ಮತ್ತು ಉತ್ತಮ ಜೀವನಶೈಲಿಯಿಂದ ಈ ಸಮಸ್ಯೆಯನ್ನು ತಡೆಯಬಹುದು. ಇದಕ್ಕಾಗಿ ಸಾಕಷ್ಟು ನೀರಿನ ಸೇವನೆ, ಉಪ್ಪು ಕಡಿತ, ಕ್ಯಾಲ್ಸಿಯಂ ಮತ್ತು ನಾರಿನಂಶವಿರುವ ಆಹಾರ ಮತ್ತು ಸಾಕಷ್ಟು ವ್ಯಾಯಾಮವನ್ನು ಮಾಡಬೇಕು..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.