ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಹಾಲು ಎಲ್ಲಾ ವಯಸ್ಸಿನವರಿಗೂ ಉಪಯುಕ್ತವಾಗಿದೆ. ಆದರೆ ಹೆಚ್ಚಿನ ಜನರು ಬೆಳಿಗ್ಗೆ ಹಾಲು ಕುಡಿಯಲು ಇಷ್ಟಪಡುವುದಿಲ್ಲ. ಇನ್ನು ಕೆಲವರು ರಾತ್ರಿಯಲ್ಲಿ ಹಾಲು ಕುಡಿಯಲು ಇಷ್ಟಪಡುವುದಿಲ್ಲ. ಹೀಗಾಗಿ ಯಾವ ಸಮಯದಲ್ಲಿ ಹಾಲು ಕುಡಿಯಬೇಕು ಎಂಬ ಗೊಂದಲದಲ್ಲಿಯೇ ಕೆಲವರು ಹಾಲು ಕುಡಿಯುವುದಿಲ್ಲ. 


COMMERCIAL BREAK
SCROLL TO CONTINUE READING

ಹಾಲಿನಿಂದ ಆಗುವ ಪ್ರಯೋಜನಗಳು ಏನು?


ಹಾಲಿನಲ್ಲಿ ಕ್ಯಾಲ್ಸಿಯಂ ಮಾತ್ರವಲ್ಲ, ಪ್ರೋಟೀನ್(Protein), ವಿಟಮಿನ್ ಎ, ಬಿ 1, ಬಿ 2, ಬಿ 12, ಡಿ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಮುಂತಾದ ಅನೇಕ ಪೋಷಕಾಂಶಗಳಿವೆ. ಈ ಪೌಷ್ಠಿಕಾಂಶದ ಗುಣಗಳಿಗಾಗಿ ಆಯುರ್ವೇದದಲ್ಲಿ ಹಾಲಿಗೆ ವಿಶೇಷ ಸ್ಥಾನವಿದೆ.


ಇದನ್ನೂ ಓದಿ : Weight Loss Tips : ನಿತ್ಯ ಶುಂಠಿಯನ್ನು ಈ ರೀತಿ ಬಳಸಿದರೆ ಬಹುಬೇಗ Weight Loss ಮಾಡಿಕೊಳ್ಳಬಹುದು


ಹಾಲು ಕುಡಿಯಲು ಸರಿಯಾದ ಸಮಯ :


ಆಯುರ್ವೇದದ ಪ್ರಕಾರ, ರಾತ್ರಿಯಲ್ಲಿ ಹಾಲು ಕುಡಿಯುವುದು ಉತ್ತಮ. ಹೀಗಾಗಿಯೇ ರಾತ್ರಿ ಮಲಗುವಾಗ ಅನೇಕರು ಹಾಲು ಕುಡಿಯುತ್ತಾರೆ(Drinking Milk). ಹಾಲಿನಿಂದ ಅಲರ್ಜಿ ಇರುವವರನ್ನು ಹೊರತುಪಡಿಸಿ ಬೇರೆ ಎಲ್ಲರೂ ಕುಡಿಯಬಹುದು ಎಂದು ಹೇಳಲಾಗುತ್ತದೆ. ರಾತ್ರಿ ಮಲಗುವ ಮೊದಲು ನೀವು ಹಾಲು ಕುಡಿದರೆ ನಿಮಗೆ ಉತ್ತಮ ನಿದ್ರೆ ಬರುತ್ತದೆ. ಜೀರ್ಣಕ್ರಿಯೆ ಮತ್ತು ಪೌಷ್ಠಿಕಾಂಶದ ಗುಣಲಕ್ಷಣಗಳಿಗಾಗಿ ಆಯುರ್ವೇದದಲ್ಲಿ ಹಾಲಿಗೆ ವಿಶೇಷ ಸ್ಥಾನವಿದೆ. ರಾತ್ರಿಯಲ್ಲಿ ಹಾಲು ಕುಡಿಯುವುದರಿಂದ ಹೆಚ್ಚಿನ ಕ್ಯಾಲ್ಸಿಯಂ ಪ್ರಯೋಜನಗಳನ್ನು ಪಡೆಯಬಹುದು. ಏಕೆಂದರೆ ರಾತ್ರಿಯಲ್ಲಿ ನಿಮ್ಮ ಚಟುವಟಿಕೆಯ ಮಟ್ಟ ತುಂಬಾ ಕಡಿಮೆಯಾಗಿರುದೆ.


ಇದನ್ನೂ ಓದಿ : Hair Care Tips: ನಯವಾದ, ರೇಷ್ಮೆಯಂತಹ ಕೂದಲು ನಿಮ್ಮದಾಗಬೇಕೆ! ಹಾಲಿನ ಕೆನೆಯನ್ನು ಈ ರೀತಿ ಬಳಸಿ


ಅದೇ ಸಮಯದಲ್ಲಿ ಬೆಳಿಗ್ಗೆ ಹಾಲು(Milk) ಕುಡಿಯುವುದು ಅನೇಕ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ ಏಕೆಂದರೆ ಆಮ್ಲ ಸಮಸ್ಯೆ ಇರುವ ಜನರು ರಾತ್ರಿಯಲ್ಲಿ ಹಾಲನ್ನು ಜೀರ್ಣಿಸಿಕೊಳ್ಳಲು ಕಷ್ಟಪಡುತ್ತಾರೆ. ಇದಲ್ಲದೆ, 5 ವರ್ಷದೊಳಗಿನ ಮಕ್ಕಳು ಮನೆಯಲ್ಲಿದ್ದರೆ, ಹಗಲಿನಲ್ಲಿ ಹಾಲು ಕುಡಿಯುವುದು ಅವರ ಆರೋಗ್ಯಕ್ಕೆ ಒಳ್ಳೆಯದು. ಆದರೆ ರಾತ್ರಿಯಲ್ಲಿ ಹಾಲು ಕುಡಿಯುವುದನ್ನು ಹೆಚ್ಚು ಸೂಕ್ತವೆಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ : Makeup Risk, : ರಾತ್ರಿ 'ಮೇಕಪ್‌' ತೆಗೆಯದೆ ಮಲಗಿದ್ರೆ ತಪ್ಪಿದಲ್ಲ ಅಪಾಯ..! 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.