Skin care : ಈ Scrub ಬಳಸಿದರೆ ಕಲೆ ರಹಿತ ತ್ವಚೆ ನಿಮ್ಮದಾಗಿಸಿಕೊಳ್ಳಬಹುದು
ಚರ್ಮವನ್ನು ಶುಚಿಗೊಳಿಸಲು ಸ್ಕ್ರಬ್ಬಿಂಗ್ ಬಹಳ ಮುಖ್ಯ. ಸ್ಕ್ರಬ್ ಮುಖದ ಕೊಳೆಯನ್ನು ಶುಚಿಗೊಳಿಸುತ್ತದೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಸ್ಕ್ರಬ್‌ಗಳು ಸಿಗುತ್ತವೆ. ಆದರೆ ಕೆಲವೊಂದು ಸ್ಕ್ರಬ್‌ಗಳನ್ನು ಹೆಚ್ಚು ಖರ್ಚು ಮಾಡದೆ ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.
ಬೆಂಗಳೂರು : Jeera Scrub For Skin: ಪ್ರತಿಯೊಬ್ಬ ಮಹಿಳೆಗೂ ತನ್ನ ತ್ವಚೆಯ ಮೇಲೆ ವಿಶೇಷ ಮೋಹ ಇರುತ್ತದೆ. ಮುಖದ ಮೇಲೆ ಕಲೆ ಇರಬಾರದು, ತ್ವಚೆ ಕಾಂತಿಯುಕ್ತವಾಗಿರಬೇಕು ಎಂದೇ ಎಲ್ಲರೂ ಬಯಸುತ್ತಾರೆ. ಕೆಲವರು ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಬ್ರಾಂಡ್ ಗಳನ್ನ ಅವಲಂಬಿಸಿದರೆ, ಇನ್ನು ಕೆಲವರು ಮನೆ ಮದ್ದನ್ನೇ ನೆಚ್ಚಿಕೊಳ್ಳುತ್ತಾರೆ. ಚರ್ಮವನ್ನು ಶುಚಿಗೊಳಿಸಲು ಸ್ಕ್ರಬ್ಬಿಂಗ್ (Scrubbing) ಬಹಳ ಮುಖ್ಯ. ಸ್ಕ್ರಬ್ ಮುಖದ ಕೊಳೆಯನ್ನು ಶುಚಿಗೊಳಿಸುತ್ತದೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಸ್ಕ್ರಬ್‌ಗಳು (face scrub) ಸಿಗುತ್ತವೆ. ಆದರೆ ಕೆಲವೊಂದು ಸ್ಕ್ರಬ್‌ಗಳನ್ನು ಹೆಚ್ಚು ಖರ್ಚು ಮಾಡದೆ ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಇಲ್ಲಿ ನಾವು ಹೇಳುತ್ತಿರುವುದು ಅಂಥದ್ದೇ ಸ್ಕ್ರಬ್ ಬಗ್ಗೆ. ಅದುವೇ ಜೀರಿಗೆ ಸ್ಕ್ರಬ್ ..
ಜೀರಿಗೆ ಸ್ಕ್ರಬ್ ತಯಾರಿಸಲು ಬೇಕಾಗುವ ಪದಾರ್ಥಗಳು:
ಜೀರಿಗೆ ಸ್ಕ್ರಬ್ (Jeera scrub) ತಯಾರಿಸಲು ಕೇವಲ ಮೂರು ಸಾಮಗ್ರಿಗಳಿದ್ದರೆ ಸಾಕು :
- ಜೀರಿಗೆ ಪುಡಿ:
- ಜೇನುತುಪ್ಪ (Honey) - ಒಂದು ಟೀ ಚಮಚ
- ಬಾದಾಮಿ ಎಣ್ಣೆ - 1 ಟೀ ಚಮಚ
ಈ ಮೂರೂ ಸಾಮಗ್ರಿಗಳನ್ನು ಒಟ್ಟಿಗೆ ಬೆರೆಸಿ ಮಿಶ್ರಣ ಮಾಡಿಕೊಂಡರೆ ಜೀರಿಗೆ ಸ್ಕ್ರಬ್ ರೆಡಿ..
ಇದನ್ನೂ ಓದಿ : Ayurveda Tips: Ayurveda ಪ್ರಕಾರ ಈ ಪದಾರ್ಥಗಳ ಒಟ್ಟಿಗೆ ಸೇವನೆ ತ್ವಚೆಯ ಸಮಸ್ಯೆಗೆ ಕಾರಣ
ಜೀರಿಗೆ ಸ್ಕ್ರಬ್ ಹಚ್ಚುವ ವಿಧಾನ:
ಮೇಲೆ ಹೇಳಿದ ಮೂರೂ ಸಾಮಗ್ರಿಗಳನ್ನು ಒಟ್ಟಿಗೆ ಮಿಶ್ರಣ ಮಾಡಿ. ಇದರ ನಂತರ, ನಿಮ್ಮ ಕೈಯಲ್ಲಿರುವ ಸ್ಕ್ರಬ್ (Scrub) ನ್ನು ತೆಗೆದುಕೊಂಡು ಅದನ್ನು ಇಡೀ ಮುಖಕ್ಕೆ ಹಚ್ಚಿ. ಇದರ ನಂತರ, ಮುಖದ ಮೇಲೆ ನಿಧಾನವಾಗಿ 3 ರಿಂದ 4 ನಿಮಿಷಗಳವರೆಗೆ ಮಸಾಜ್ (massage) ಮಾಡಿ. ಮಸಾಜ್ ನಂತರ ಮುಖವನ್ನು ನೀರಿನಿಂದ (Water) ತೊಳೆಯಿರಿ. ಇದರ ನಂತರ ರೋಸ್ ವಾಟರ್ (Rose water) ಅನ್ನು ಮುಖಕ್ಕೆ ಹಚ್ಚಿ.
ಜೀರಿಗೆ ಸ್ಕ್ರಬ್‌ನ ಪ್ರಯೋಜನಗಳು:
ಎಲ್ಲಾ ಪ್ರಕಾರದ ಚರ್ಮಕ್ಕೂ ಜೀರಿಗೆ ಸ್ಕ್ರಬ್ ಪ್ರಯೋಜನಕಾರಿ. ಈ ಸ್ಕ್ರಬ್‌ನಲ್ಲಿ ಬಳಸುವ ಎಲ್ಲಾ ವಸ್ತುಗಳು ನೈಸರ್ಗಿಕವಾಗಿದೆ.
ಇದನ್ನೂ ಓದಿ : ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಬಳಸಿ ಪೇರಳೆ ಎಲೆಯ ಫೇಸ್ ಪ್ಯಾಕ್
ಡೆಡ್ ಸ್ಕಿನ್ ತೆಗೆದುಹಾಕುತ್ತದೆ : ಜೀರಿಗೆ ಸ್ಕ್ರಬ್ ಹಚ್ಚುವುದರಿಂದ ಮುಖದ ಮೇಲಿನ ಡೆಡ್ ಸ್ಕಿನ್ (Dead skin) ನಾಶವಾಗುತ್ತದೆ. ಇದು ಚರ್ಮದ ರಂಧ್ರಗಳ ಆಳಕ್ಕೆ ಇಳಿದು ಶುಚಿಗೊಳಿಸುತ್ತದೆ. ಈ ಸ್ಕ್ರಬ್ ಅನ್ನು ಕೈ ಮತ್ತು ಕಾಲುಗಳ ಮೇಲೆ ಕೂಡಾ ಹಚ್ಚಿಕೊಳ್ಳಬಹುದು .
ಅಂಟಿ ಫಂಗಲ್ ಗುಣವನ್ನು ಹೊಂದಿದೆ : ಜೀರಿಗೆ ಅಂಟಿ ಫಂಗಲ್ ಗುಣವನ್ನು ಹೊಂದಿದೆ. ಈ ಕಾರಣಕ್ಕಾಗಿ, ಮೊಡವೆ, ಬ್ಲ್ಯಾಕ್ ಹೆಡ್ಸ್ (Blackheads) ನಂಥಹ ಸಮಸ್ಯೆಗಳನ್ನು ಬಗೆಹರಿಸುತ್ತದೆ.
ಇದನ್ನೂ ಓದಿ : Bathing Tips: ಸ್ನಾನ ಮಾಡುವಾಗ ದೇಹದ ಈ ಭಾಗಕ್ಕೆ ಮೊದಲು ನೀರು ಹಾಕಿದರೆ, ಒತ್ತಡ ದೂರವಾಗುತ್ತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.