ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರಿಗೆ ಜೇನು ಸೇರಿಸಿ ಕುಡಿಯುವುದರಿಂದ ಸಿಗುತ್ತೆ ಈ ಪ್ರಯೋಜನ!

ವಯಸ್ಸಾದಂತೆ ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳುವುದು ಸಾಮಾನ್ಯ.

Last Updated : Mar 18, 2019, 04:00 PM IST
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರಿಗೆ ಜೇನು ಸೇರಿಸಿ ಕುಡಿಯುವುದರಿಂದ ಸಿಗುತ್ತೆ ಈ ಪ್ರಯೋಜನ! title=

ಬೆಂಗಳೂರು: ಎಳನೀರಿನ ಪ್ರಯೋಜನಗಳ ಬಗ್ಗೆ ನಿಮ್ಮಲ್ಲಿ ಹಲವರಿಗೆ ತಿಳಿದಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕಲುಷಿತ ವಾತಾವರಣದಿಂದ ರಕ್ಷಿಸಲು ಎಳನೀರಿನಲ್ಲಿರುವ ಪೌಷ್ಟಿಕ ಅಂಶ ನಮಗೆ ಉಪಯುಕ್ತವಾಗಿದೆ. ಇನ್ಫೆಕ್ಟಿವ್ ಜೇಮ್ಸ್ ಶರೀರವನ್ನು ಹಾನಿಗೊಳಿಸಿದರಿ, ಎಳನೀರು ದೇಹವನ್ನು ರಕ್ಷಿಸಲು ಸಹಾಯಮಾಡುತ್ತದೆ. ಆದರೆ ಎಳನೀರನ್ನು ಜೇನಿನೊಂದಿಗೆ ಬೆರೆಸಿ ಸೇವಿಸುವುದರಿಂದ ಹೆಚ್ಚು ಪ್ರಯೋಜನಕಾರಿ ಎಂಬುದು ನಿಮಗೆ ತಿಳಿದಿದೆಯೇ?

ಎಳನೀರಿನಲ್ಲಿ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ, ಹೊಟ್ಟೆ ನೋವು ಕಡಿಮೆಯಾಗುತ್ತದೆ. ಅಲ್ಲದೆ ಆಮ್ಲೀಯತೆಯಂತಹ ಜೀರ್ಣಕ್ಕೆ ಸಂಬಂಧಿಸಿದ ಅನಾರೋಗ್ಯವನ್ನು ತೆಗೆದುಹಾಕುತ್ತದೆ. ಮತ್ತೊಂದೆಡೆ, ಎಳನೀರು ಮತ್ತು ನಿಯಮಿತವಾಗಿ ಜೇನುತುಪ್ಪದ ಮಿಶ್ರಣವನ್ನು ಬೆರೆಸಿ ಕುಡಿಯುವುದರಿಂದ, ರೋಗ ನಿರೋಧಕ ವ್ಯವಸ್ಥೆಯು ಸಹ ಪ್ರಬಲವಾಗಿದೆ ಮತ್ತು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಕಾರಣ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಜೀವಸತ್ವಗಳು ಇದರಲ್ಲಿವೆ.

ವಯಸ್ಸಾದಂತೆ ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ವಯಸ್ಸಾದ ನಂತರ ಕಾಣಿಸಿಕೊಳ್ಳುವ ಸುಕ್ಕು, ನೆರಿಗೆ, ಬಿಳಿಕೂದಲು ಇವುಗಳ ಬಗ್ಗೆ ನೀವು ಜಾಗರೂಕರಾಗಿರಬೇಕು. ಎಳನೀರಿನಲ್ಲಿ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಇದರಲ್ಲಿ ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದ್ದು, ವಯಸ್ಸಾದ ನಂತರ ಕಾಣಿಸಿಕೊಳ್ಳುವ ಸುಕ್ಕು, ನೆರಿಗೆ, ಬಿಳಿಕೂದಲು ಇಂತಹ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಎಳನೀರು ಮತ್ತು ಜೇನುತುಪ್ಪದ ಮಿಶ್ರಣವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿವೆ. ಇದರ ಹೊರತಾಗಿ ಈ ಮಿಶ್ರಣ ಮಲಬದ್ಧತೆ ನಿವಾರಣೆಗೆ ನೆರವಾಗುತ್ತದೆ. 

Trending News