ಕೂದಲಿನ ಸಮಸ್ಯೆ ಗಂಭೀರ ಸಮಸ್ಯೆಯಾಗಿದ್ದು, ಇದನ್ನು ನಿರ್ಲಕ್ಷಿಸಲಾಗುವುದಿಲ್ಲ. ಕೂದಲು ಉದುರುವಿಕೆ, ದುರ್ಬಲ ಮತ್ತು ನಿರ್ಜೀವ ಕೂದಲಿನ ಸಮಸ್ಯೆಯಿಂದ ನೀವು ಕೂಡ ತೊಂದರೆಗೊಳಗಾಗಿದ್ದರೆ, ನಾವು ನಿಮಗಾಗಿ ಒಂದು ವಿಶೇಷ  ಮನೆ ಮದ್ದು ತಂದಿದ್ದೇವೆ.  ಅಕ್ಕಿ ಮತ್ತು ಮೆಂತ್ಯವನ್ನು ಕೂದಲನ್ನು ಉದ್ದ ಮತ್ತು ಬಲವಾಗಿ ಇಡಲು ಬಳಸಬಹುದು. ಹೇಗೆ ಇಲ್ಲಿದೆ ನೋಡಿ..


COMMERCIAL BREAK
SCROLL TO CONTINUE READING

ಉದ್ದ ಮತ್ತು ಬಲವಾದ ಕೂದಲಿಗೆ ಅಕ್ಕಿ ಮತ್ತು ಮೆಂತ್ಯ ಬಳಸುವುದು ಹೇಗೆ?


ಕೂದಲನ್ನು ಬಲಪಡಿಸಲು, ನೀವು ಅಕ್ಕಿ(Rice)ಯನ್ನು ಮತ್ತು ಮೆಂತ್ಯ ನೀರಿನಿಂದ ಕೂದಲನ್ನು ತೊಳೆಯಬೇಕು. ಇದಕ್ಕಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.


- 3 ಚಮಚ ಮೆಂತ್ಯ ಬೀಜಗಳನ್ನು 250 ಮಿಲೀ ನೀರಿನಲ್ಲಿ ರಾತ್ರಿ ನೆನೆಸಿಡಿ.


- ಬೆಳಿಗ್ಗೆ, ಅರ್ಧ ಕಪ್ ಬಿಳಿ ಅಕ್ಕಿಯಲ್ಲಿ ಒಂದು ಕಪ್ ನೀರನ್ನು ಬೆರೆಸಿ 2 ರಿಂದ 3 ಗಂಟೆಗಳ ಕಾಲ ಇರಿಸಿ.


ಇದನ್ನೂ ಓದಿ : Walking: ಪ್ರತಿದಿನ ಹೀಗೆ ಮಾಡಿದರೆ ನಿಮ್ಮ Diabetes, ರಕ್ತದೊತ್ತಡವನ್ನು ನಿಯಂತ್ರಿಸಬಹುದು


- ಇದರ ನಂತರ, ಅಕ್ಕಿ ಮತ್ತು ನೀರು ಮತ್ತು ಮೆಂತ್ಯ ಮತ್ತು ನೀರನ್ನು ಎರಡು ಪ್ರತ್ಯೇಕ ಪಾತ್ರೆಗಳಲ್ಲಿ ಗ್ಯಾಸ್ ಮೇಲೆ ಹಾಕಿ.


- ಎರಡೂ ಪಡ್ರ್ಥಗಳನ್ನ ಕಡಿಮೆ ಉರಿಯಲ್ಲಿ 5 ರಿಂದ 7 ನಿಮಿಷ ಬೇಯಿಸಿ. ಇದರ ನಂತರ, ಅದೇ ಪಾತ್ರೆಯಲ್ಲಿ ಅಕ್ಕಿ ಮತ್ತು ಮೆಂತ್ಯ(Methi)ದ ನೀರನ್ನು ಫಿಲ್ಟರ್ ಮಾಡಿ ಮತ್ತು ಒಂದು ದಿನ ಈ ಹಾಗೆ ಇಡಿ.


- ಒಂದು ದಿನದ ನಂತರ ನಿಮ್ಮ ಕೂದಲನ್ನು ಉಗುರುಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ. ನಂತರ ಕೂದಲಿನ ತುದಿ ಮತ್ತು ಬೇರುಗಳಿಗೆ ಅಕ್ಕಿ ಮತ್ತು ಮೆಂತ್ಯ ನೀರನ್ನು ಹಚ್ಚಿ 5 ರಿಂದ 10 ನಿಮಿಷಗಳ ಕಾಲ ಮಸಾಜ್ ಮಾಡಿ.


- ಇದರ ನಂತರ, ಶವರ್ ಕ್ಯಾಪ್ ಧರಿಸಿ ಮತ್ತು 15 ರಿಂದ 20 ನಿಮಿಷಗಳ ನಂತರ ಉಗುರುಬೆಚ್ಚಗಿನ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ.


ಇದನ್ನೂ ಓದಿ : Benefits of Cashew Nuts : ವಿವಾಹಿತ ಪುರುಷರ ಆರೋಗ್ಯಕ್ಕೆ ಗೋಡಂಬಿ : ಇಲ್ಲಿದೆ ನೋಡಿ ಅದರ ಅದ್ಬುತ ಪ್ರಯೋಜನಗಳು


ಕೂದಲಿಗೆ ಅಕ್ಕಿ ಮತ್ತು ಮೆಂತ್ಯದ ಪ್ರಯೋಜನಗಳು


ಅಕ್ಕಿ ಮತ್ತು ಮೆಂತ್ಯ ಬೀಜಗಳು ಸಂಪೂರ್ಣವಾಗಿ ನೈಸರ್ಗಿಕವಾಗಿದ್ದು, ಇದು ಅಡುಗೆಮನೆಯಲ್ಲಿ ಸುಲಭವಾಗಿ ಸಿಗುತ್ತವೆ. ಬಲವಾದ ಕೂದಲಿಗಾ(Strong Hair)ಗಿ ಅಕ್ಕಿ ಮತ್ತು ಮೆಂತ್ಯದ ನೀರನ್ನು ಬಳಸುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. 


ಅಕ್ಕಿ ಕೂದಲಿಗೆ(Hair) ತುಂಬಾ ಪ್ರಯೋಜನಕಾರಿ. ಏಕೆಂದರೆ ಇದರಲ್ಲಿ ಕೂದಲಿಗೆ ಅಗತ್ಯವಾದ ಪ್ರೋಟೀನ್ ಇರುತ್ತದೆ. ಇದರೊಂದಿಗೆ, ಇದು ಕಾರ್ಬೋಹೈಡ್ರೇಟ್, ಫೆರುಲಿಕ್ ಆಮ್ಲ, ವಿಟಮಿನ್ ಎ, ಸಿ, ಡಿ ಮತ್ತು ವಿಟಮಿನ್ ಇ ಅನ್ನು ಸಹ ಒಳಗೊಂಡಿದೆ. ಇದು ಕೂದಲನ್ನು ಬಲಪಡಿಸುತ್ತದೆ ಮತ್ತು ಅದನ್ನು ಮೃದು ಮತ್ತು ರೇಷ್ಮೆಯಂತೆ ಮಾಡುತ್ತದೆ.


ಇದನ್ನೂ ಓದಿ : ನೇರಳೆ ಹಣ್ಣು ತಿಂದ ನಂತರ ತಪ್ಪಿಯೂ ಈ ವಸ್ತುಗಳನ್ನು ಸೇವಿಸಬೇಡಿ


ಮೆಂತ್ಯವು ಕೂದಲಿಗೆ ಕಡಿಮೆ ಪ್ರಯೋಜನಕಾರಿಯಲ್ಲ. ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ. ಏಕೆಂದರೆ, ಮೆಂತ್ಯ ಬೀಜಗಳಲ್ಲಿ ಫೋಲಿಕ್ ಆಮ್ಲ, ಪೊಟ್ಯಾಸಿಯಮ್, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಎ, ಕೆ, ಸಿ ಇರುತ್ತದೆ. ಇದು ಕೂದಲನ್ನು ಪೋಷಿಸುತ್ತದೆ ಮತ್ತು ಹಾನಿಯಿಂದ ರಕ್ಷಿಸುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ