ನೇರಳೆ ಹಣ್ಣು ತಿಂದ ನಂತರ ತಪ್ಪಿಯೂ ಈ ವಸ್ತುಗಳನ್ನು ಸೇವಿಸಬೇಡಿ

ಈ ಎಲ್ಲಾ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ನೇರಳೆ ಹಣ್ಣನ್ನು ತಿಂದ ತಕ್ಷಣ ಕೆಲವು ವಸ್ತುಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೂ ಹಾನಿಯಾಗುತ್ತದೆ. 

Written by - Ranjitha R K | Last Updated : Aug 16, 2021, 08:48 PM IST
  • ಜಾಮೂನ್ ತಿಂದ ತಕ್ಷಣ ಹಾಲು ಕುಡಿಯಬಾರದು
  • ಉಪ್ಪಿನಕಾಯಿಯನ್ನು ಜಾಮೂನ್ ನೊಂದಿಗೆ ಸೇವಿಸಬಾರದು.
  • ಜಾಮೂನ್ ತಿಂದ ತಕ್ಷಣ ಅರಿಶಿನ ಅಥವಾ ಅರಿಶಿನ ಇರುವ ವಸ್ತುಗಳನ್ನು ತಿನ್ನಬಾರದು.
ನೇರಳೆ ಹಣ್ಣು ತಿಂದ ನಂತರ ತಪ್ಪಿಯೂ ಈ ವಸ್ತುಗಳನ್ನು ಸೇವಿಸಬೇಡಿ  title=
ಜಾಮೂನ್ ತಿಂದ ತಕ್ಷಣ ಅರಿಶಿನ ಅಥವಾ ಅರಿಶಿನ ಇರುವ ವಸ್ತುಗಳನ್ನು ತಿನ್ನಬಾರದು. (file photo)

ನವದೆಹಲಿ : ಮಳೆಗಾಲದಲ್ಲಿ ಹೇರಳವಾಗಿ ಲಭ್ಯವಿರುವ  ಹಣ್ಣುಗಳಲ್ಲಿ ಜಾಮೂನ್ ಅಥವಾ ನೇರಳೆ ಹಣ್ಣು (Jamun)  ಕೂಡಾ ಒಂದು. ಇದು ಕೇವಲ ರುಚಿಗಾಗಿ ಮಾತ್ರ ತಿನ್ನುವ ಹಣ್ಣಲ್ಲ. ಆಯುರ್ವೇದದಲ್ಲಿ (Ayurveda) ಈ ಹಣ್ಣಿಗೆ ಬಹಳ ಮಹತ್ವವಿದೆ.  ಈ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಗಳು,  ಫ್ಲೇವನಾಯ್ಡ್‌ಗಳು, ವಿಟಮಿನ್ ಸಿ, ಸತು, ಕ್ಯಾಲ್ಸಿಯಂ, ಫೈಬರ್, ಮೆಗ್ನೀಸಿಯಮ್ ಮತ್ತು ಕಬ್ಬಿಣದ ಅಂಶಗಳು  ಹೇರಳವಾಗಿ ಇರುತ್ತವೆ. ಇದು ದೇಹವನ್ನು ಅನೇಕ ರೋಗಗಳಿಂದ ದೂರವಿಡಲು ಸಹಾಯ ಮಾಡುತ್ತದೆ. ಈ ಹಣ್ಣು  ಮಧುಮೇಹಕ್ಕೆ ರಾಮಬಾಣವೆಂದು ಪರಿಗಣಿಸಲಾಗಿದೆ. ಮಧುಮೇಹದ ಅಪಾಯದಿಂದ ರಕ್ಷಿಸಲು ನೇರಳೆ ಹಣ್ಣು ಸಹಾಯ ಮಾಡುತ್ತದೆ. ಈ ಎಲ್ಲಾ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಈ ಹಣ್ಣನ್ನು ತಿಂದ ತಕ್ಷಣ ಕೆಲವು ವಸ್ತುಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೂ ಹಾನಿಯಾಗುತ್ತದೆ (Food to avoid with jamun). 

ಹಾಲು: 
ನೇರಳೆ ಹಣ್ಣನ್ನು ತಿಂದ ತಕ್ಷಣ ಹಾಲು (Milk) ಕುಡಿಯಬಾರದು. ಇದನ್ನು ತಿಂದ ನಂತರ ಹಾಲನ್ನು ಸೇವಿಸುವುದರಿಂದ ಹೊಟ್ಟೆ ನೋವು, ಅಜೀರ್ಣ, ಗ್ಯಾಸ್, ಅಸಿಡಿಟಿ (Acidety) ಮುಂತಾದ ಸಮಸ್ಯೆಗಳು ಉಂಟಾಗಬಹುದು. ಹಾಲು ಕುಡಿಯಬೇಕಾದರೆ, ಜಾಮೂನ್ ತಿಂದ ನಂತರ ಕನಿಷ್ಠ ಒಂದರಿಂದ ಎರಡು ಗಂಟೆಗಳ ಅಂತರ ಇಡಬೇಕು.  

ಇದನ್ನೂ ಓದಿ : Skin Care: ಫೇಸ್ ವಾಶ್ ವೇಳೆ ಎಂದಿಗೂ ಇಂತಹ ತಪ್ಪುಗಳನ್ನು ಮಾಡಬೇಡಿ

ಉಪ್ಪಿನಕಾಯಿ: 
ಉಪ್ಪಿನಕಾಯಿಯನ್ನು (pickle) ಕೂಡಾ ನೇರಳೆ ಹಣ್ಣುಗಳೊಂದಿಗೆ ಅಥವಾ ನೇರಳೆ ಹಣ್ಣು ತಿಂದ ತಕ್ಷಣ ಸೇವಿಸಬಾರದು. ಇದು ಗಂಟಲು ನೋವು (throat pain) ಅಥವಾ ಹೊಟ್ಟೆಗೆ ಸಂಬಂಧಿಸಿದ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.  ಉಪ್ಪಿನಕಾಯಿ ತಿನ್ನುವುದಾದರೆ   ಜಾಮೂನ್ ತಿಂದ ನಂತರ ಒಂದು ಗಂಟೆಯಾದರೂ ಬಿಡಬೇಕು. ಇಲ್ಲವಾದರೆ ಹೊಟ್ಟೆಯಲ್ಲಿ ನೋವು ಅಥವಾ ಉರಿ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. 

ಅರಿಶಿನ : 
ಜಾಮೂನ್ ತಿಂದ ತಕ್ಷಣ ಅರಿಶಿನ (turmeric) ಅಥವಾ ಅರಿಶಿನ ಇರುವ ಯಾವ ವಸ್ತುಗಳನ್ನು ತಿನ್ನಬಾರದು. ಇದು ಹೊಟ್ಟೆ ನೋವು ಅಥವಾ ಊರಿಗೆ ಕಾರಣವಾಗಬಹುದು. ಜಾಮೂನ್ ತಿಂದ ಅರ್ಧ ಅಥವಾ ಒಂದು ಗಂಟೆಯ ನಂತರ, ಅರಿಶಿನ ಅಥವಾ ಅರಿಶಿನ ಇರುವ ವಸ್ತುಗಳನ್ನು ತಿನ್ನಬಹುದು.

ಇದನ್ನೂ ಓದಿ : Herbs For Hair: ನಿಮ್ಮ ಕೂದಲಿಗೆ ಹೊಸ ಲೈಫ್ ನೀಡುತ್ತೆ ಈ 5 ಗಿಡಮೂಲಿಕೆಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News