ಬೆಂಗಳೂರು: ಬೇಸಿಗೆ ಬಂತೆಂದರೆ ಬಿಸಿಲಿನ ಬೇಗೆ ಒಂದೆಡೆಯಾದರೆ ರುಚಿಕರವಾದ ಮಾವಿನಹಣ್ಣನ್ನು ತಿನ್ನುವ ಮಜಾ ಇನ್ನೊಂದೆಡೆ. ಮಾವಿನ ಹಣ್ಣು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಾವಿನ ಹಣ್ಣಿನ ಹೆಸರು ಕೇಳಿದೊಡನೆಯೇ ಹಲವರ ಬಾಯಲ್ಲಿ ನೀರೂರುತ್ತದೆ. ಮಾವಿನ ಹಣ್ಣಿನ ಸೇವನೆ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಮಾವಿನ ಹಣ್ಣಿನಲ್ಲಿ (Mango) ಫೈಬರ್, ವಿಟಮಿನ್, ಖನಿಜಗಳು ಮತ್ತು ಪಾಲಿಫಿನೋಲಿಕ್ ಫ್ಲೇವನಾಯ್ಡ್ ಆಂಟಿಆಕ್ಸಿಡೆಂಟ್ ಸಂಯುಕ್ತಗಳಂತಹ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದು ಕೂದಲಿಗೆ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕೂದಲಿಗೆ ಮಾವಿನ ಹೇರ್ ಪ್ಯಾಕ್ ಹಾಕಿದರೆ ಅದು ಇನ್ನೂ ಪ್ರಯೋಜನಕಾರಿಯಾಗಿರುತ್ತದೆ. ಹಾಗಿದ್ದರೆ ಮಾವಿನ ಹೇರ್ ಪ್ಯಾಕ್ ತಯಾರಿಸುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ...


ಇದನ್ನೂ ಓದಿ - Mango Peel Benefits: ಬೇಸಿಗೆಯಲ್ಲಿ ಮಾವಿನ ಹಣ್ಣಿನ ಸಿಪ್ಪೆ ಬಳಸಿ ಈ ರೀತಿ ಪ್ರಯೋಜನ ಪಡೆಯಿರಿ


ಮಾವಿನ ಹೇರ್ ಪ್ಯಾಕ್ ತಯಾರಿಸಲು ಬೇಕಾದ ಪದಾರ್ಥಗಳು (Necessary ingredients to make mango hair pack) : 
>> ಚೆನ್ನಾಗಿ ಮಾಗಿದ ಮಾವಿನ ಹಣ್ಣು -1
>> ಮೊಟ್ಟೆಯ ಹಳದಿ ಲೋಳೆ -2
>> ಮೊಸರು - 2 ಚಮಚ 


ಇದನ್ನೂ ಓದಿ -  ಮಾವಿನಹಣ್ಣು ತಿಂದ ಮೇಲೆ ಈ 5 ವಸ್ತುಗಳನ್ನು ಸೇವಿಸಲೇಬಾರದು


ಮಾವಿನ ಹೇರ್ ಪ್ಯಾಕ್ ತಯಾರಿಸುವ ವಿಧಾನ (Know how to make mango hair pack): 


* ಮೊದಲಿಗೆ ಮಾವಿನ ಹಣ್ಣಿನ ಸಿಪ್ಪೆ (Mango for Hair) ಮಾಡಿ ತುಂಡುಗಳಾಗಿ ಕತ್ತರಿಸಿ ಅದರ ಪೇಸ್ಟ್ ತಯಾರಿಸಿ.


* ಈಗ ಒಂದು ಪಾತ್ರೆಯಲ್ಲಿ ಮಾವಿನ ಪೇಸ್ಟ್ ಅನ್ನು ವರ್ಗಾಯಿಸಿ ಮತ್ತು ಅದಕ್ಕೆ ಮೊಟ್ಟೆಯ ಹಳದಿ ಲೋಳೆ ಮತ್ತು ಮೊಸರು ಸೇರಿಸಿ.


* ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಬೆರೆಸಿ ಪೇಸ್ಟ್ ಮಾಡಿ.


* ಕೂದಲಿನ ಬುಡಕ್ಕೆ ಈ ಪೇಸ್ಟ್ ಅನ್ನು ಹಾಕಿ, ಅದನ್ನು ಚೆನ್ನಾಗಿ ಎಲ್ಲೆಡೆ ಅನ್ವಯಿಸಿ. 


* ಹೇರ್ ಪ್ಯಾಕ್ ಹಚ್ಚಿದ ಅರ್ಧ ಘಂಟೆಯ ನಂತರ ಕೂದಲನ್ನು ಶಾಂಪುವಿನಿಂದ ಚೆನ್ನಾಗಿ ತೊಳೆಯಿರಿ.


ಈ ರೀತಿ ಮಾವಿನ ಹೇರ್ ಪ್ಯಾಕ್ ಬಳಸುವುದರಿಂದ ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯುತ್ತದೆ ಎಂದು ಹೇಳಲಾಗುತ್ತದೆ.


(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ