ನಿತ್ಯ ಮುಂಜಾನೆ Ghee Coffee ಕುಡಿಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಅದ್ಭುತ ಪ್ರಯೋಜನ
Ghee Coffee: ಅತಿಯಾದ ಕಾಫಿ ಸೇವನೆ ಆರೋಗ್ಯಕ್ಕೆ ಅಷ್ಟು ಪ್ರಯೋಜನಕಾರಿ ಅಲ್ಲ. ಅದರಲ್ಲೂ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಆದಾಗ್ಯೂ, ಕೆಲವು ರೀತಿಯ ಕಾಫಿ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
Ghee Coffee Benefits: ನಮ್ಮಲ್ಲಿ ಕೆಲವರಿಗೆ ಮುಂಜಾನೆ ಎದ್ದ ಕೂಡಲೇ ಬೆಡ್ ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ಆದರೆ, ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗಬಹುದು. ಹಾಗಾಗಿ, ಮುಂಜಾನೆ ಕಾಫಿ ಕುಡಿಯುವುದನ್ನು ತಪ್ಪಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಬ್ಲಾಕ್ ಕಾಫಿ, ಕೋಲ್ಡ್ ಕಾಫಿ ಹೀಗೆ ನೀವು ಹಲವು ರೀತಿಯ ಕಾಫಿ ಕುಡಿದಿರಬಹುದು. ಆದರೆ, ಎಂದಾದರೂ ತುಪ್ಪದ ಕಾಫಿ ಕುಡಿದಿದ್ದೀರಾ?
ಭಾರತೀಯ ಅಡುಗೆ ಮನೆಯಲ್ಲಿ ತುಪ್ಪ ಪ್ರಮುಖ ಪಾತ್ರವಹಿಸುತ್ತದೆ. ತುಪ್ಪವು ಆಹಾರದ ರುಚಿಯನ್ನಷ್ಟೇ ಹೆಚ್ಚಿಸುವುದಿಲ್ಲ ಇದರಲ್ಲಿರುವ ಪೋಷಕಾಂಶಗಳು ದೇಹದ ದೌರ್ಬಲ್ಯ ದೂರವಾಗಿಸಿ ದಿನವಿಡೀ ಚೈತನ್ಯದಿಂದ ಇರುವಂತೆ ಮಾಡುತ್ತದೆ. ಹಾಗಿದ್ದರೆ, ತುಪ್ಪದ ಕಾಫಿ ತಯಾರಿಸುವುದು ಹೇಗೆ. ಪ್ರತಿದಿನ ಬೆಳಿಗ್ಗೆ ತುಪ್ಪಡ ಕಾಫಿ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳು ಲಭ್ಯ ಎಂದು ತಿಳಿಯೋಣ...
ಇದನ್ನೂ ಓದಿ- Jaggery health benefits: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲ ತಿನ್ನುವುದರ ಪ್ರಯೋಜನ ಗೊತ್ತಾ?
ತುಪ್ಪದ ಕಾಫಿ ತಯಾರಿಸುವುದು ಹೇಗೆ?
* ಮೊದಲಿಗೆ ಒಂದು ಗ್ಲಾಸ್ ನೀರನ್ನು ಬಿಸಿ ಮಾಡಿ.
* ನಂತರ ಈ ನೀರಿನಲ್ಲಿ 1 ಸ್ಪೂನ್ ತುಪ್ಪವನ್ನು ಬೆರೆಸಿ ಕುಡಿಯಲು ಬಿಡಿ.
* ಬಳಿಕ ಒಂದು ಸ್ಪೂನ್ ಕಾಫಿ ಪುಡಿಯನ್ನು ಬೆರೆಸಿ.
* ನಿಮಗೆ ಅಗತ್ಯವೆನಿಸಿದರೆ ಇದರಲ್ಲಿ ಹಾಲು, ಸಕ್ಕರೆ/ಬೆಲ್ಲ/ಜೇನುತುಪ್ಪವನ್ನು ಮಿಶ್ರಣ ಮಾಡಬಹುದು. ಈಗ ಕಾಫಿ ಕುಡಿಯಲು ಸಿದ್ಧವಾಗಿದೆ.
ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಮಾರ್ನಿಂಗ್ ತುಪ್ಪದ ಕಾಫಿ ಸೇವನೆಯು ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ ನೀಡುತ್ತದೆ ಎಂದು ತಿಳಿಯೋಣ...
ಇದನ್ನೂ ಓದಿ- ಈ ಸಮಯದಲ್ಲಿ ನೀರು ಕುಡಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು..! ತಿಳಿಯಿರಿ
ಬೆಳಿಗ್ಗೆ ವೇಳೆ ತುಪ್ಪದ ಕಾಫಿ ಕುಡಿಯುವುದು ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೆಂದರೆ:-
* ತುಪ್ಪದಲ್ಲಿರುವ ಒಳ್ಳೆಯ ಕೊಬ್ಬು ದೇಹವು ಕೆಫಿನ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ.
* ತುಪ್ಪದಲ್ಲಿ ಇರುವ ಕೊಬ್ಬಿನ ಅಂಶವೂ ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ. ಹಾಗಾಗಿ, ಇದು ತೂಕ ನಿಯಂತ್ರಣಕ್ಕೂ ಪ್ರಯೋಜನಕಾರಿ ಆಗಿದೆ.
* ತುಪ್ಪವು ಬ್ಯುಟರಿಕ್ ಆಮ್ಲವನ್ನು ಹೊಂದಿರುವುದರಿಂದ ಮುಂಜಾನೆ ತುಪ್ಪದ ಕಾಫಿಯು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.
* ತುಪ್ಪದ ಕಾಫಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಾಗಾಗಿ, ಹೊಟ್ಟೆ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು.
* ತುಪ್ಪದಲ್ಲಿ ವಿಟಮಿನ್ ಕೆ ಸಮೃದ್ಧವಾಗಿದ್ದು ನಿತ್ಯ ತುಪ್ಪದ ಕಾಫಿ ಸೇವನೆಯು ಮೂಳೆಗಳನ್ನು ಬಲಗೊಳಿಸುತ್ತದೆ.
* ತುಪ್ಪದಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗುಣದಿಂದಾಗಿ ತುಪ್ಪದ ಕಾಫಿ ಸೇವನೆಯು ಒತ್ತಡವನ್ನು ನಿವಾರಿಸಿ, ಮನಸ್ಸನ್ನು ಶಾಂತಗೊಳಿಸಲು ಪ್ರಯೋಜನಕಾರಿ ಆಗಿದೆ.
* ಇವೆಲ್ಲದರ ಜೊತೆಗೆ ತುಪ್ಪದ ಕಾಫಿಯು ಚರ್ಮದ ಆರೋಗ್ಯಕ್ಕೆ, ಕೂದಲಿನ ಆರೈಕೆಯಲ್ಲಿಯೂ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.