ನವದೆಹಲಿ : Turmeric honey benefits : ಏನೇ ಸಮಸ್ಯೆಗಳು ಬರಲಿ ನಮ್ಮ ದೇಶದಲ್ಲಿ ಇಂದಿಗೂ ಮೊದಲು ತಮ್ಮದಾಗಿಸಿಕೊಳ್ಳುವುದು ಅಜ್ಜ ಅಜ್ಜಿಯರ ಕಾಲದಿಂದಲೂ ನಡೆದುಕೊಂಡು ಬಂದ ಮನೆ ಮದ್ದನ್ನೇ. ಈ ಮನೆ ಮದ್ದನ್ನೇ (Home remedies) ಅನುಸರಿಸಿಕೊಂಡು ಸಮಸ್ಯೆಯನ್ನು ಪರಿಹರಿಸಲಾಗುತ್ತದೆ. ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ಮನೆಮದ್ದು, ಅನೇಕ ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಅಂಥಹ ಮನೆಮದ್ದುಗಳಲ್ಲಿ ಒಂದು ಅರಶಿನ  ಮತ್ತು ಜೇನುತುಪ್ಪ (Turmeric and honey). 


COMMERCIAL BREAK
SCROLL TO CONTINUE READING

ಅರಶಿನ ಮತ್ತು ಜೇನುತುಪ್ಪದ  ಪ್ರಯೋಜನಗಳನ್ನು ತಿಳಿಯಿರಿ : 
ಪುರುಷರ ಈ ಸಮಸ್ಯೆಗಳಿಗೆ ಪರಿಹಾರ : ಅರಿಶಿನ (turmeric) ಮತ್ತು ಜೇನುತುಪ್ಪವು ವೀರ್ಯ ತೆಳುವಾಗುವುದು ಮತ್ತು ಶೀಘ್ರ ಸ್ಖಲನಕ್ಕೆ ರಾಮಬಾಣ. ಈ ಸಮಸ್ಯೆಯಿಂದ ಬಳಲುವವರು ಒಂದು ಚಮಚ ಜೇನುತುಪ್ಪವನ್ನು ಒಂದು ಚಮಚ ಅರಿಶಿನ ಪುಡಿಯೊಂದಿಗೆ ಬೆರೆಸಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹೀಗೆ ಮಾಡುತ್ತಾ ಬಂದರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. 


ಇದನ್ನೂ ಓದಿ : Benefits of Black Pepper: ಕೇವಲ ಅಡುಗೆಯಲ್ಲಷ್ಟೇ ಅಲ್ಲ, ಈ ಕೆಲಸಕ್ಕೂ ನೀವು ಕರಿ ಮೆಣಸು ಬಳಸಬಹುದು


ಶೀತ: ಶೀತದ ಸಮಸ್ಯೆ ಇದ್ದರೆ, ಅರ್ಧ ಚಮಚ ಜೇನುತುಪ್ಪ (Honey) ಮತ್ತು ಅರಿಶಿನ ಮಿಶ್ರಣವನ್ನು ಸೇವಿಸಬೇಕು. ಆದರೆ ನೆನಪಿರಲಿ, ಇದನ್ನು ಸೇವಿಸಿದ ನಂತರ ಸ್ವಲ್ಪ ಹೊತ್ತು ನೀರು ಕುಡಿಯಬಾರದು.  ಬೇಕಾದರೆ, ಈ ಮಿಶ್ರಣಕ್ಕೆ ತುಳಸಿಯನ್ನು ಕೂಡಾ ಸೇರಿಸಬಹುದು. ಊಟದ ನಂತರ ಅರಿಶಿನವನ್ನು ಸೇವಿಸುವುದರಿಂದ ಮೂತ್ರಪಿಂಡಗಳು (Kidney) ಮತ್ತು ಶ್ವಾಸಕೋಶಗಳಿಗೆ ಪ್ರಯೋಜನಕಾರಿ.


ಹೃದಯಕ್ಕೆ ಪ್ರಯೋಜನಕಾರಿ : ಹೃದಯ ಕಾಯಿಲೆಯ (heart disease) ತಡೆಗಟ್ಟಲು, ಅರಿಶಿನ ಮತ್ತು ಜೇನುತುಪ್ಪವನ್ನು ಸೇವಿಸಬೇಕು. ಇದು ಹೃದ್ರೋಗವನ್ನು ತಡೆಯಲು ಸಹಾಯಮಾಡುತ್ತದೆ. ಅರಿಶಿನವು ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಚರ್ಮಕ್ಕೆ ಪ್ರಯೋಜನಕಾರಿ : ನಸುಕಂದು ಮಚ್ಚೆಗಳು, ಸುಕ್ಕುಗಳು, ಕಲೆಗಳು ಮುಂತಾದ ಸಮಸ್ಯೆಗಳ ನಿವಾರಣೆಗೆ  ಅರಿಶಿನ, ಜೇನು ಮತ್ತು ರೋಸ್ ವಾಟರ್ (rose water) ಮಿಶ್ರಣ ಉತ್ತಮ ಪರಿಹಾರ. ಈ  ಪೇಸ್ಟ್  ಅನ್ನು ಮುಖಕ್ಕೆ ಹಚ್ಚಿ ಒಣಗುವವರೆಗೆ ಬಿಡಬೇಕು. ನಂತರ ಉಗುರುಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಬೇಕು. ಹೀಗೆ ಮಾಡುವುದರಿಂದ ಚರ್ಮದ ಸಮಸ್ಯೆಗಳನ್ನು ನಿವಾರಿಸಬಹುದು. 


ಇದನ್ನೂ ಓದಿ : ಹಾಲಿನಲ್ಲಿ ಒಂದು ತುಂಡು ಬೆಲ್ಲ ಬೆರೆಸಿ ಕುಡಿದರೆ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ