Health Tips: ದೇಹದ ಕೊಬ್ಬು ಕರಗಿಸಲು ಈ ಎಲೆಯ ಚಟ್ನಿ ಸೇವಿಸಿ: ಒಂದೇ ದಿನದಲ್ಲಿ ರಿಸಲ್ಟ್ ಸಿಗೋದು ಪಕ್ಕಾ!
Home Remedies for Cholesterol Control: ನಾವು ಏನು ತಿನ್ನುತ್ತೇವೆಯೋ ಅದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಕೆಟ್ಟ ಕೊಲೆಸ್ಟ್ರಾಲ್‌ನ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ನಂತರ ಹೃದಯಾಘಾತ, ಪಾರ್ಶ್ವವಾಯು ಮತ್ತು ಅಪಧಮನಿಕಾಠಿಣ್ಯದಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಅಪಾಯವನ್ನುಂಟುಮಾಡುತ್ತದೆ. ಈ ಸಮಸ್ಯೆಗಳನ್ನು ತಪ್ಪಿಸಲು, ಆರೋಗ್ಯಕರ ಆಹಾರ ಪದ್ಧತಿಯ ಸಹಾಯ ಮಾಡುತ್ತದೆ.
Mint and Coriander Chutney: ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನಿಮ್ಮ ದೇಹಕ್ಕೆ ಸ್ವಲ್ಪ ಕೊಲೆಸ್ಟ್ರಾಲ್ ಅಗತ್ಯವಿರುತ್ತದೆ. ಆದರೆ ನಿಮ್ಮ ರಕ್ತದಲ್ಲಿ ಕೊಬ್ಬಿನಾಂಶ ಹೆಚ್ಚಾದರೆ ಅದು ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಷುತ್ತವೆ. ಟ್ರೈಗ್ಲಿಸರೈಡ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಆರೋಗ್ಯಕರ ಆಹಾರ ಪ್ಲಾನ್ ಮಾಡಿಕೊಳ್ಳಿ. ಇನ್ನು ದೇಹದಲ್ಲಿರುವ ಕೊಬ್ಬಿನಾಂಶಗಳನ್ನು ಕಡಿಮೆಗೊಳಿಸುವ ಹಸಿರೆಲೆಯ ಚಟ್ನಿಯ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
ನಾವು ಏನು ತಿನ್ನುತ್ತೇವೆಯೋ ಅದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಕೆಟ್ಟ ಕೊಲೆಸ್ಟ್ರಾಲ್‌ನ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ನಂತರ ಹೃದಯಾಘಾತ, ಪಾರ್ಶ್ವವಾಯು ಮತ್ತು ಅಪಧಮನಿಕಾಠಿಣ್ಯದಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಅಪಾಯವನ್ನುಂಟುಮಾಡುತ್ತದೆ. ಈ ಸಮಸ್ಯೆಗಳನ್ನು ತಪ್ಪಿಸಲು, ಆರೋಗ್ಯಕರ ಆಹಾರ ಪದ್ಧತಿಯ ಸಹಾಯ ಮಾಡುತ್ತದೆ.
ಇದನ್ನೂ ಓದಿ: Onion Benefits : ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಪ್ರತಿದಿನ ಸೇವಿಸಿ ಹಸಿ ಈರುಳ್ಳಿ..!
ಈ ಚಟ್ನಿ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು:
ಕೊತ್ತಂಬರಿ - 50 ಗ್ರಾಂ
ಪುದೀನಾ - 20 ಗ್ರಾಂ
ಹಸಿ ಮೆಣಸಿನಕಾಯಿ (ಅಗತ್ಯವಿದ್ದಷ್ಟು)
ಬೆಳ್ಳುಳ್ಳಿ - 20 ಗ್ರಾಂ
ಅಗಸೆಬೀಜದ ಎಣ್ಣೆ - 15 ಗ್ರಾಂ
ಇಸಾಬ್ಗೋಲ್ - 15 ಗ್ರಾಂ
ಉಪ್ಪು (ರುಚಿಗೆ ತಕ್ಕಂತೆ)
ನಿಂಬೆ ರಸ - 10 ಮಿಲಿ
ಅಗತ್ಯವಿರುವಷ್ಟು ನೀರು
ವಿಧಾನ:
• ಮೇಲಿನ ಎಲ್ಲಾ ಪದಾರ್ಥಗಳನ್ನು ಬ್ಲೆಂಡರ್ನಲ್ಲಿ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ
ಪೌಷ್ಟಿಕತಜ್ಞರ ಪ್ರಕಾರ ಈ ಚಟ್ನಿಯನ್ನು ಸೇವಿಸುವ ಪ್ರಯೋಜನಗಳು ಇಲ್ಲಿವೆ:
1. ಕೊತ್ತಂಬರಿ ಮತ್ತು ಪುದೀನಾ ಪ್ರಯೋಜನಗಳು: ಕ್ಲೋರೊಫಿಲ್‌ನಲ್ಲಿ ಸಮೃದ್ಧವಾಗಿರುವ ಈ ತಾಜಾ ಗಿಡಮೂಲಿಕೆಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅವುಗಳು ಹೆಚ್ಚಿನ ಫೈಬರ್ ಅಂಶದೊಂದಿಗೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
2. ಬೆಳ್ಳುಳ್ಳಿಯ ಪ್ರಯೋಜನಗಳು: ರಕ್ತವನ್ನು ತೆಳುವಾಗಿಸುವ ಮೂಲಕ ಮತ್ತು ರಕ್ತನಾಳಗಳ ಸಂಕೋಚನವನ್ನು ತಡೆಯುವ ಮೂಲಕ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
3. ಇಸಾಬ್ಗೋಲ್ನ ಪ್ರಯೋಜನಗಳು: ಮಲಬದ್ಧತೆಯನ್ನು ನಿವಾರಿಸಲು ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಪಿತ್ತರಸ ಆಮ್ಲಗಳೊಂದಿಗೆ ಬಂಧಿಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Piles Remedy: ಪೈಲ್ಸ್ ನೋವಿನಿಂದ ಭಾರಿ ಪರಿಹಾರ ಒದಗಿಸುತ್ತದೆ ಮನೆಮದ್ದು
4. ಅಗಸೆಬೀಜದ ಪ್ರಯೋಜನಗಳು: ಒಮೆಗಾ-3 ಕೊಬ್ಬಿನಾಮ್ಲಗಳ ಸಮೃದ್ಧ ಸಸ್ಯಾಹಾರಿ ಮೂಲವು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಟ್ರೈಗ್ಲಿಸರೈಡ್‌ಗಳು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ.
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.