ನವದೆಹಲಿ: Monoclonal Antibody Therapy - ಕೊರೊನಾವೈರಸ್ (Coronavirus)ಅನ್ನು ಸೋಲಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಕರೋನಾ ವೈರಸ್ (Covid-19) ಚಿಕಿತ್ಸೆಗಾಗಿ ಪ್ರತಿದಿನ ಹೊಸ ಅಧ್ಯಯನಗಳು ಹೊರಬರುತ್ತಿವೆ. ಕರೋನಾ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ಹೇಳಲಾಗುವ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಯ (Monoclonal Antibody Therapy) ಬಳಕೆ ಈಗ ಭಾರತದಲ್ಲಿಯೂ ಪ್ರಾರಂಭವಾಗಿದೆ. ಇದರ ಆರಂಭಿಕ ಫಲಿತಾಂಶಗಳು ಭಾರಿ ಸಕಾರಾತ್ಮಕವಾಗಿವೆ.


COMMERCIAL BREAK
SCROLL TO CONTINUE READING

Monoclonal Antibody Cocktail ನ ಸಕಾರಾತ್ಮಕ ಫಲಿತಾಂಶಗಳು 
ದೆಹಲಿಯ ಗಂಗಾರಾಮ್ ಆಸ್ಪತ್ರೆಯ ವೈದ್ಯರು ಕರೋನಾ ರೋಗಿಗಳಿಗೆ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಯನ್ನು ನೀಡಿದ್ದಾರೆ. ವೈದ್ಯರ ಪ್ರಕಾರ, ಕೋವಿಡ್ 19 ಗಾಗಿ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಯು (Monoclonal Antibody Therapy For Covid-19) ಕೋವಿಡ್ -19 ರ ಇಬ್ಬರು ರೋಗಿಗಳ ಆರೋಗ್ಯವನ್ನು 12 ಗಂಟೆಗಳಲ್ಲಿ ಗಮನಾರ್ಹವಾಗಿ ಸುಧಾರಿಸಿದೆ ಎಂದಿದ್ದಾರೆ. ಸರ್ ಗಂಗಾ ರಾಮ್ ಆಸ್ಪತ್ರೆಯ (SGRH) ವೈದ್ಯಕೀಯ ವಿಭಾಗದ ಹಿರಿಯ ಸಲಹೆಗಾರ ಡಾ.ಪೂಜಾ ಖೋಸ್ಲಾ ಹೇಳುವ ಪ್ರಕಾರ,  36 ವರ್ಷದ ಆರೋಗ್ಯ ಕಾರ್ಯಕರ್ತ ತೀವ್ರ ಜ್ವರ, ಕೆಮ್ಮು, ಸ್ನಾಯು ನೋವು, ತೀವ್ರ ದೌರ್ಬಲ್ಯ ಮತ್ತು ಬಿಳಿ ರಕ್ತ ಕಣಗಳ (White Blood Cells) ಕೊರತೆಯಿಂದ ಬಳಲುತ್ತಿದ್ದರು. ಅನಾರೋಗ್ಯದ ಆರನೇ ದಿನವಾದ ಮಂಗಳವಾರ ಅವರಿಗೆ ಮೊನೊಕ್ಲೋನಲ್ ಆಂಟಿಬಾಡಿ ಕಾಕ್ಟೈಲ್ (Monoclonal Antibody Cocktail) ಚಿಕಿತ್ಸೆ ನೀಡಲಾಯಿತು ಎಂದಿದ್ದಾರೆ.


ಮೊದಲ ರೋಗಿಯ ಆರೋಗ್ಯ ಕೇವಲ 8 ಗಂಟೆಗಳಲ್ಲಿ ಸುಧಾರಿಸಿದೆ
ಇಂತಹ ರೋಗಲಕ್ಷಣಗಳನ್ನು (Covid-19) ಹೊಂದಿರುವ ರೋಗಿಗಳು ಮಧ್ಯಮಕ್ಕಿಂತ (Moderate) ವೇಗವಾಗಿ ಗಂಭೀರ ಸ್ಥಿತಿಗೆ ತಲುಪುತ್ತಾರೆ ಎಂದು ವೈದ್ಯ ಪೂಜಾ ಖೋಸ್ಲಾ ಹೇಳಿದ್ದಾರೆ. ಈ ಸಂದರ್ಭದಲ್ಲಿ, ರೋಗಿಗೆ 5 ದಿನಗಳವರೆಗೆ ತೀವ್ರ ಜ್ವರವಿತ್ತು ಮತ್ತು White Blood Cells ಮಟ್ಟವು 2,600 ಕ್ಕೆ ಇಳಿಕೆಯಾಗಿತ್ತು. ಇದರ ನಂತರ ಅವರಿಗೆ ಮೊನೊಕ್ಲೋನಲ್ ಆಂಟಿಬಾಡಿ ಥೆರಪಿ ನೀಡಲಾಯಿತು, ಚಿಕಿತ್ಸೆ ನೀಡಲಾದ 8 ಗಂಟೆಗಳ ನಂತರ ಅವರ ಆರೋಗ್ಯ ಸುಧಾರಿಸಿದೆ ಮತ್ತು ಸದ್ಯ ಅವರನ್ನು ಆಸ್ಪತ್ರೆಯಿಂದ  ಡಿಸ್ಚಾರ್ಜ್ ಮಾಡಲಾಗಿದೆ ಎಂದಿದ್ದಾರೆ.


ಇದನ್ನೂ ಓದಿ- Big Relief: ಕುಟುಂಬದಲ್ಲಿ ಯಾರಾದರೂ ಕೊರೊನಾ ಸೊಂಕಿತರಾದರ ಎಷ್ಟು ದಿನ Special Casual Leave ಸಿಗಲಿದೆ ಗೊತ್ತಾ?


ಎರಡನೇ ರೋಗಿ 12 ಗಂಟೆಯಲ್ಲಿ ಚೇತರಿಸಿಕೊಂಡಿದ್ದಾನೆ
ಮೊನೊಕ್ಲೋನಲ್ ಆಂಟಿಬಾಡಿ ಥೆರಪಿ, ಆಂಟಿಬಾಡಿಯ ಒಂದು 'ಕಾಪಿ'ಯಾಗಿದೆ. ಇದು ಒಂದು ವಿಶಿಷ್ಟ ಆಂಟಿಜನ್ ಅನ್ನು ಟಾರ್ಗೆಟ್ ಮಾಡುತ್ತದೆ. ಈ ಚಿಕಿತ್ಸಾ ಪದ್ಧತಿಯನ್ನು ಈ ಮೊದಲು ಎಬೋಲಾ ಹಾಗೂ HIV ರೋಗಿಗಳಲ್ಲಿ ಬಳಸಲಾಗಿದೆ. ಇದೇ ವೇಳೆ ಎರಡನೇ ಪ್ರಕರಣವು 80 ವರ್ಷದ ರೋಗಿ ಆರ್.ಕೆ.ರಜ್ದಾನ್ ಆಗಿದ್ದು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅವರು ತೀವ್ರ ಜ್ವರ ಮತ್ತು ಕೆಮ್ಮಿನಿಂದ ಹೈರಣಾಗಿದ್ದರು. ಅವರ ಕುರಿತು ಆಸ್ಪತ್ರೆ ನೀಡಿರುವ ಒಂದು ಹೇಳಿಕೆಯ ಪ್ರಕಾರ, 'ಸಿಟಿ ಸ್ಕ್ಯಾನ್ ಸೌಮ್ಯ ಅನಾರೋಗ್ಯವನ್ನು ದೃಢಪಡಿಸಿತ್ತು. ಐದನೇ ದಿನ ಅವರಿಗೆ REGN-COV2 ನೀಡಲಾಯಿತು. ರೋಗಿಯ ಆರೋಗ್ಯವು 12 ಗಂಟೆಗಳಲ್ಲಿ ಸುಧಾರಿಸಿದೆ ಎನ್ನಲಾಗಿದೆ.


ಇದನ್ನೂ ಓದಿ- Contractual Employees: ಈ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಭಾರಿ ಉಡುಗೊರೆ


ಈ ಚಿಕಿತ್ಸೆಯಲ್ಲಿ ಇತರ ಸೋಂಕಿನ ಸಾಧ್ಯತೆಯೂ ಕೂಡ ಕಮ್ಮಿಯಾಗಿರುತ್ತದೆ
ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಯನ್ನು ಸರಿಯಾದ ಸಮಯದಲ್ಲಿ ಬಳಸಿದರೆ, ಅದು ಚಿಕಿತ್ಸೆಯಲ್ಲಿ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ಡಾ ಖೋಸ್ಲಾ ಹೇಳಿದ್ದಾರೆ. ಇದು ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುವ ಜನರನ್ನು ಆಸ್ಪತ್ರೆಗೆ ದಾಖಲಿಸದಂತೆ ಅಥವಾ ಅವರ ಸ್ಥಿತಿ ಹದಗೆಡದಂತೆ ಕಾಪಾಡುತ್ತದೆ. ಇನ್ನೊಂದೆಡೆ, ಸ್ಟೀರಾಯ್ಡ್ಗಳು ಅಥವಾ ಇಮ್ಯುನೊಮಾಡ್ಯುಲೇಷನ್ ಬಳಕೆಯನ್ನು ಇದರಿಂದ ಕಡಿಮೆ ಮಾಡಬಹುದು ಮತ್ತು ತಪ್ಪಿಸಬಹುದು. ಇದಲ್ಲದೆ  ಇದರಲ್ಲಿ ಮ್ಯೂಕೋರ್ಮೈಕೋಸಿಸ್ ಅಥವಾ ಇತರ ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅದೇ ಸಮಯದಲ್ಲಿ, ಹೃದಯ ಕಾಯಿಲೆಗಳಿಂದ ಬಳಲುತ್ತಿರುವ ಇಬ್ಬರು ಕೋವಿಡ್ -19 ರೋಗಿಗಳ ಮೇಲೆ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಯನ್ನು ಬಳಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ, ನಂತರ ಅವರ ವರದಿಯು ಒಂದು ವಾರದ ನಂತರ 'ನಕಾರಾತ್ಮಕ' ಬಂದಿದೆ. 


ಇದನ್ನೂ ಓದಿ-Health Benefits Of Rudraksha - ಆಧ್ಯಾತ್ಮದಿಂದ ವಿಜ್ಞಾನದವರೆಗೆ ಎಲ್ಲರೂ ಒಪ್ಪಿಕೊಂಡ 'ರುದ್ರಾಕ್ಷದ' ಲಾಭಗಳಿವು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.