ನವದೆಹಲಿ:  Mucormycosis Symptoms And Treatment - ದೇಶದ ಹಲವು ಭಾಗಗಳಲ್ಲಿ ಕರೋನಾ(Coronavirus) ಸೋಂಕಿನಿಂದ ಚೇತರಿಸಿಕೊಂಡ ನಂತರ ಜನರು ಮ್ಯೂಕೋಮೈಕೋಸಿಸ್ (Mucormycosis) ಅಥವಾ ಕಪ್ಪು ಶಿಲೀಂಧ್ರ (Black Fungus) ರೋಗಕ್ಕೆ ತುತ್ತಾಗುತ್ತಿದ್ದಾರೆ. ಮಹಾರಾಷ್ಟ್ರ, ದೆಹಲಿ, ಗುಜರಾತ್, ರಾಜಸ್ಥಾನದಂತಹ ರಾಜ್ಯಗಳಲ್ಲಿ ಈ ಅಪಾಯಕಾರಿ ಸೋಂಕಿನಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಜನರು ಕುರುಡುತನಕ್ಕೆ ಬಲಿಯಾಗಿದ್ದಾರೆ. ಏತನ್ಮಧ್ಯೆ, ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ (Dr. Harsh Vardhan) ಅವರು ಶುಕ್ರವಾರ ಕಪ್ಪು ಶಿಲೀಂಧ್ರದ ಬಗ್ಗೆ ಅನೇಕ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರು ಈ ಕಾಯಿಲೆಯ ಲಕ್ಷಣಗಳ ಜೊತೆಗೆ ಮ್ಯೂಕರ್ಮೈಕೊಸಿಸ್ ನಿಂದ ಪಾರಾಗಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಸಲಹೆಗಳನ್ನು ನೀಡಿದ್ದಾರೆ.


ಮೃತಪಟ್ಟರೆ ಎಷ್ಟು ಜನ ಸೇರುತ್ತಾರೆ ಎಂದು ಪರೀಕ್ಷಿಸಲು ಸತ್ತಂತೆ ನಟಿಸಿದ ಮಹಿಳೆ


COMMERCIAL BREAK
SCROLL TO CONTINUE READING

ಏನು ಮಾಡಬೇಕು? ಏನು ಮಾಡಬಾರದು?
ಈ ಕುರಿತು ಆರೋಗ್ಯ ಸಚಿವರು ಹಂಚಿಕೊಂಡಿರುವ ಮತ್ತೊಂದು ಸ್ಲೈಡ್ ನಲ್ಲಿ ಹೈಪರ್ ಗ್ಲೈಕೊಮಿಯಾ ನಿಯಂತ್ರಣದಲ್ಲಿಡಲು ಸೂಚಿಸಲಾಗಿದೆ. ಡಯಾಬಿಟಿಸ್ ನಿಂದ ಬಳಲುತ್ತಿರುವ ವ್ಯಕ್ತಿ ಒಂದು ವೇಳೆ ಕೊವಿಡ್ (Covid-19) ಗೆ ತುತ್ತಾದರೆ, ಅವರು ಡಿಸ್ಚಾರ್ಜ್ ಆದಬಲಿಕ ಅವರ ಬ್ಲಡ್ ಗ್ಲುಕೋಸ್ ಲೆವಲ್ ಮೇಲೆ ಕಣ್ಣಿಡಲು ಹೇಳಲಾಗಿದೆ. ಸ್ಟೇರಾಯಿಡ್ ಗಳ ಬಳಕೆ ಎಚ್ಚರಿಕೆಯಿಂದ ಮಾಡಬೇಕು. ಆಕ್ಸಿಜನ್ ಥೆರಪಿಯ ವೇಳೆ ಶುದ್ಧ ಹಾಗೂ ಸ್ಟೆರಾಯಿಲ್ ನೀರಿನ ಬಳಕೆ ಮಾಡಬೇಕು. ಆಂಟಿ ಬಯೋಟಿಕ್ ಹಾಗೂ ಆಂಟಿ ಫಂಗಲ್ ಔಷಧಿಗಳ ಬಳಕೆ ವಿವೇಚನೆಯಿಂದ ಮಾಡಬೇಕು ಎಂದು ಆರೋಗ್ಯ ಸಚಿವರು ಸಲಹೆ ನೀಡಿದ್ದಾರೆ. 


ಇದನ್ನೂ ಓದಿ- Alert! ನಕಲಿ CoWin Appಗಳ ಬಗ್ಗೆ ಎಚ್ಚರ ಎಂದ ಸರ್ಕಾರ, ಈ 5 ಫೈಲ್ಸ್ ಡೌನ್ ಲೋಡ್ ಮಾಡಬೇಡಿ


ಬಳಿಕ ಜನರಿಗೂ ಕೂಡ ಸಲಹೆಗಳನ್ನು ನೀಡಿರುವ ಆರೋಗ್ಯ ಸಚಿವರು, ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಮೂಗು ಬಿಗಿಯುವಿಕೆಯ ಎಲ್ಲಾ ಪ್ರಕರಣಗಳನ್ನು ಬ್ಯಾಕ್ಟಿರಿಯಾ ಸೈನಸ್ ಎಂದು ತಿಳಿಯಬೇಡಿ ಅದರಲ್ಲೂ ವಿಶೇಷವಾಗಿ ಕೊರೊನಾ ರೋಗಿಗಳು. ಪರೀಕ್ಷೆ ನಡೆಸಲು ಹಿಂದೇಟು ಹಾಕಬೇಡಿ ಮತ್ತು ಚಿಕಿತ್ಸೆ ಪಡೆಯಲು ತಡಮಾಡಬೇಡಿ ಎಂದಿದ್ದಾರೆ.


ಇದನ್ನೂ ಓದಿ- Covaxin, Covishield, Sputnik-V: ಭಾರತದ ಬಳಿ ಮೂರು ಅಸ್ತ್ರಗಳು, ಯಾವುದು ಎಷ್ಟು ಪರಿಣಾಮಕಾರಿ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.