ಮೃತಪಟ್ಟರೆ ಎಷ್ಟು ಜನ ಸೇರುತ್ತಾರೆ ಎಂದು ಪರೀಕ್ಷಿಸಲು ಸತ್ತಂತೆ ನಟಿಸಿದ ಮಹಿಳೆ
ಇಲ್ಲೊಬ್ಬ ಮಹಿಳೆಗೆ ತಾನು ಸತ್ತರೆ ಯಾರೆಲ್ಲಾ ನೋಡಲು ಬರಬಹುದು ಎಂಬ ಯೋಚನೆ ಬಂದಿದೆ. ಇದನ್ನು ಪರೀಕ್ಷಿಸಿಯೇ ಬಿಡೋಣ ಎಂದು ಕೊಂಡ ಮಹಿಳೆ ಕೂಡಲೇ ತಾನು ಸತ್ತಂತೆ ನಟಿಸಿದ್ದಾರೆ.
ಚಿಲಿ : ಕರೋನಾ ಕಾಲದಲ್ಲಿ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ ಎಲ್ಲದಕ್ಕೂ ನಿರ್ಬಂಧ ಹೇರಲಾಗಿದೆ. ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಅನಿವಾರ್ಯ ಎಂದಿರುವ ಕಾರ್ಯಗಳಿಗೂ ಇಷ್ಟೇ ಜನ ಸೇರಬೇಕು ಎಂಬ ನಿರ್ಬಂಧವಿದೆ. ಈ ಹೊತ್ತಿನಲ್ಲಿ ಇಲ್ಲೊಬ್ಬ ಮಹಿಳೆಗೆ ತಾನು ಸತ್ತರೆ ಯಾರೆಲ್ಲಾ ನೋಡಲು ಬರಬಹುದು ಎಂಬ ಯೋಚನೆ ಬಂದಿದೆ. ಇದನ್ನು ಪರೀಕ್ಷಿಸಿಯೇ ಬಿಡೋಣ ಎಂದು ಕೊಂಡ ಮಹಿಳೆ ಕೂಡಲೇ ತಾನು ಸತ್ತಂತೆ ನಟಿಸಿದ್ದಾರೆ. ಈ ನಾಟಕಕ್ಕೆ ಬರೋಬ್ಬರಿನೊಂದು ಲಕ್ಷಕ್ಕೂ ಅಧಿಕ ಖರ್ಚು ಮಾಡಿದ್ದಾರೆ. ಪ್ರೋಪೇಶನಲ್ ಫೋಟೋಗ್ರಾಫರ್ ನನ್ನು ಕೂಡಾ ಕರೆಸಲಾಯಿತು. ಸೇರಿರುವ ಎಲ್ಲಾ ನೆಂಟರಿಷ್ಟರ ಫೋಟೋ ಕೂಡಾ ತೆಗೆಸಲಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1
/5
ನಾವು ಜೀವನದಲ್ಲಿ ಎಷ್ಟು ಒಳ್ಳೆಯ ಕೆಲಸ ಮಾಡಿದ್ದೇವೆ ಎನ್ನುವುದು ನಾವು ಸತ್ತ ನಂತರ ತಿಳಿಯುತ್ತದೆ ಎನ್ನುತ್ತಾರೆ. ಅಂತಿಮ ಯಾತ್ರೆಯಲ್ಲಿ ಎಷ್ಟು ಜನ ಸೇರುತ್ತಾರೆ ಎನ್ನುವುದರ ಮೂಲಕ ಎಷ್ಟು ಜನರ ಪ್ರೀತಿ ಗಳಿಸಿದ್ದೇವೆ ಎನ್ನುವುದನ್ನು ಅಂದಾಜಿಸಬಹುದು ಎನ್ನಲಾಗುತ್ತದೆ. ಈ ಮಹಿಳೆಯ ತಲೆಗೆ ಬಂದಿದ್ದೂ ಅದೇ ಯೋಚನೆ. ಹಾಗಾಗಿ ಈ ವಿಚಿತ್ರ ಕೆಲಸಕ್ಕೆ ಮಹಿಳೆ ಕೈ ಹಾಕಿಬಿಟ್ಟಿದ್ದಾರೆ.
2
/5
ಈ ಘಟನೆ ನಡೆದದ್ದು ಚಿಲಿಯಲ್ಲಿ. ಮಯಾರಾ ಅಲೋಂಜಾ ಎಂಬ ಮಹಿಳೆ, ತನ್ನ ಸಾವಿನ ಸುದ್ದಿಯನ್ನು ತನ್ನ ಎಲ್ಲಾ ಬಂಧುಗಳಿಗೆ ತಲುಪಿಸುತ್ತಾರೆ. ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರೂ ಅಲೋಂಜಾ ನಿವಾಸಕ್ಕೆ ಆಗಮಿಸಿಯೇ ಬಿಟ್ಟಿದ್ದಾರೆ.
3
/5
ಮಹಿಳೆಯ ಈ ನಾಟಕ ಸುಮಾರು 4 ಗಂಟೆಗಳವರೆಗೆ ನಡೆದಿದೆ. ಮಹಿಳೆ ಎಲ್ಲರೂ ಮನೆಗೆ ಬರುತ್ತಿರುವಂತೆ ಶವ ಪೆಟ್ಟಿಗೆಯಲ್ಲಿ ಮಲಗಿಬಿಟ್ಟಿದ್ದಾರೆ. ತನ್ನ ಇಚ್ಛೆಯಂತೆ ಬಹಳಷ್ಟು ಜನ ಸೇರಿದ್ದಾರೆ ಎಂದು ಖಾತ್ರಿಯಾಗುತ್ತಿದ್ದಂತೆ, ಶವ ಪೆಟ್ಟಿಗೆಯಿಂದ ಎದ್ದಿದ್ದಾರೆ.
4
/5
ಈ ಕರೋನಾ ಕಾಲದಲ್ಲಿ ಮೃತದೇಹಕ್ಕೆ ಹೆಗಲು ಕೊಡಲು 4 ಜನ ಸಿಗುತ್ತಿಲ್ಲ. ಹಾಗಾಗಿ ತಾನು ಸತ್ತರೆ ಯಾರೆಲ್ಲಾ ಬರುತ್ತಾರೆ ಎನ್ನುವುದನ್ನಿ ನೋಡಬೇಕಿತ್ತು. ಈ ಕಾರಣಕ್ಕಾಗಿ ತಾನು ಸತ್ತಂತೆ ನಟಿಸಿರುವುದಾಗಿ ಮಹಿಳೆ ಹೇಳಿದ್ದಾರೆ.
5
/5
ಈ ನಾಟಕಕ್ಕೆ ಮಹಿಳೆ ಒಂದು ಲಕ್ಷಕ್ಕೂ ಅಧಿಕ ಹಣವನ್ನು ವ್ಯಯಿಸಿದ್ದಾರೆ. ಈ ವೇಳೆ ಪ್ರೋಪೇಶನಲ್ ಫೋಟೋಗ್ರಾಫರ್ ನನ್ನು ಕೂಡಾ ಕರೆಸಲಾಗಿತ್ತು. ಬಂದ ಎಲ್ಲಾ ನೆಂಟರಿಷ್ಟ ಜೊತೆ ಫೋಟೋ ಕ್ಲಿಕ್ಕಿಸಲಾಗಿತ್ತು. ನಾಟಕ ಮುಗಿದ ನಂತರ ಮಹಿಳೆ ಎಲ್ಲರ ಜೊತೆ ಪಾರ್ಟಿ ಮಾಡಿದ್ದಾರೆ.