ಮೊಟ್ಟೆಯ ಜೊತೆ ಎಂದಿಗೂ ಈ ವಸ್ತುಗಳನ್ನು ಸೇವಿಸಬಾರದು
ಮೊಟ್ಟೆಯ ಜೊತೆ ಕೆಲವೊಂದು ವಸ್ತುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವ ಮೊಟ್ಟೆ ಅಪಾಯ ತಂದೊಡ್ಡಬಹುದು .
ನವದೆಹಲಿ : ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎಂಬ ಮಾತನ್ನು ಕೇಳಿರಬಹುದು. ಮೊಟ್ಟೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ (Health benefits of egg) ಆಹಾರ. ದಿನಕ್ಕೊಂದು ಮೊಟ್ಟೆ ತಿಂದರೆ ದೈಹಿಕ ಆರೋಗ್ಯ ವೃದ್ದಿಯಾಗುತ್ತದೆ . ಉತ್ತಮ ಆರೋಗ್ಯಕ್ಕಾಗಿ ಮೊಟ್ಟೆ ತಿನ್ನುವ ಸಲಹೆಯನ್ನು ತಜ್ಞರು ನೀಡುತ್ತಾರೆ. ಆದರೆ ಮೊಟ್ಟೆಯ ಜೊತೆ ಕೆಲವೊಂದು ವಸ್ತುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವ ಮೊಟ್ಟೆ ಅಪಾಯ ತಂದೊಡ್ಡಬಹುದು .
ಸಕ್ಕರೆ :
ಸಕ್ಕರೆ (Sugar) ಮತ್ತು ಮೊಟ್ಟೆ ಎರಡರಲ್ಲೂ ಅಮೈನೊ ಆಸಿಡ್ ಇರುತ್ತದೆ. ಇದರ ಅಧಿಕ ಪ್ರಮಾಣದ ಸೇವನೆಯಿನ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಎದುರಾಗಬಹುದು. ಈ ಕಾರಣದಿಂದ ಸಕ್ಕರೆಯನ್ನು ಮೊಟ್ಟೆಯ (Egg) ಜೊತೆ ಇನ್ನಬಾರದು.
ಇದನ್ನೂ ಓದಿ : Benefits of soaked gram : ಈ ಐದು ಕಾರಣಕ್ಕಾಗಿ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಡಲೆ ಕಾಳು ತಿನ್ನಿ
ಮೊಟ್ಟೆ ಮತ್ತು ಚಹಾ :
ಬೆಳಗಿನ ಉಪಹಾರಕ್ಕೆ ಮೊಟ್ಟೆ ಸೇವನೆ ಉತ್ತಮ ಹೌದು. ಆದರೆ ಮೊಟ್ಟೆಯ ಜೊತೆ ಚಹಾ (Tea) ಸೇವನೆ ಸಲ್ಲದು. ಮೊಟ್ಟೆ ಮತ್ತು ಚಹಾವನ್ನು ಜೊತೆಯಲ್ಲಿ ಸೇವಿಸಿದರೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಅಂದರೆ ಜೀರ್ಣಕ್ರಿಯೆಗೆ ಸಮಸ್ಯೆಯಾಗಬಹುದು. ಇದರಿಂದ ಮಲಬದ್ದತೆಯ ಸಮಸ್ಯೆ ಎದುರಾಗಬಹುದು.
ಮೊಟ್ಟೆ ಮತ್ತು ಸೋಯಾ ಹಾಲು :
ಮೊಟ್ಟೆ ಮತ್ತು ಮೀನಿನ (egg and fish combination) ಕಾಂಬಿನೇಶನ್ ಯಾವತ್ತಿಗೂ ಒಳ್ಳೆಯದಲ್ಲ. ಇದು ಆರೋಗ್ಯಕ್ಕೆ ತೊಂದರೆಯನ್ನು ಉಂಟು ಮಾಡುತ್ತದೆ. ಇದರಿಂದ ಚರ್ಮದ ಎಲರ್ಜಿ ಕಾಣಿಸಿಕೊಳ್ಳಬಹುದು.
ಮೊಟ್ಟೆ ಮತ್ತು ಬಾಳೆಹಣ್ಣು :
ಮೊಟ್ಟೆ ತಿಂದ ಕೂಡಲೇ ಯಾವತ್ತೂ ಬಾಳೆಹಣ್ಣು (Banana) ತಿನ್ನಲೇ ಬಾರದು. ಇದರಿಂದ ಗ್ಯಾಸ್ , ಮಲಬದ್ದತೆ ಸಮಸ್ಯೆ ಎದುರಾಗಬಹುದು.
ಇದನ್ನೂ ಓದಿ : Mint Leaves Benefits : ಮುಖದ ಗುಳ್ಳೆ ಮತ್ತು ಕಪ್ಪು ಕಲೆಗಳಿಗೆ ಪುದೀನಾ ಎಲೆಗಳು : ಈ ರೀತಿ ಬಳಸಿ, ಮುಖವು ಹೊಳೆಯುತ್ತದೆ!
ಮೊಟ್ಟೆ ಮತ್ತು ಪನೀರ್ :
ಮೊಟ್ಟೆ ಮತ್ತು ಪನೀರ್ (Paneer) ಎರಡರಲ್ಲೂ ಪ್ರೋಟೀನ್ ಹೇರಳವಾಗಿ ಇರುತ್ತದೆ. ಆದರೆ ಇವೆರಡನ್ನೂ ಒಟ್ಟಿಗೆ ತಿಂದರೆ ಜೀರ್ಣಕ್ರಿಯೇಗೆ ತೊಡಕುಂಟಾಗಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ