ನವದೆಹಲಿ : ಇತ್ತೀಚೀನ ದಿನಗಳಲ್ಲಿ ಎಲ್ಲಾ ವಸ್ತುಗಳಲ್ಲೂ ಕಲಬೆರಕೆಯ ಮಾತು ಕೇಳಿ ಬರುತ್ತಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿಹಿತಿಂಡಿಗಳು, ತುಪ್ಪ ಅಥವಾ ಹಾಲು ಹೀಗೆ ಎಲ್ಲದರಲ್ಲೂ ಕಲಬೆರಕೆಯದ್ದೇ ಮಾತು. ಹೀಗಿರುವಾಗ ಪನ್ನೀರ್ ನಲ್ಲೂ (paneer) ಕಲಬೆರಕೆ ಇದೆಯೇ ಎಂದು ಕಂಡುಹಿಡಿಯಲು ಒಂದು ಉಪಾಯವಿದೆ.
ಪನೀರ್ (paneer) ಅನ್ನು ಪ್ರತಿಯೊಂದು ಮನೆಯಲ್ಲೂ ಬಳಸಲಾಗುತ್ತದೆ. ಸಾಮಾನ್ಯವಾಗಿ ಪನ್ನೀರ್ ಅನ್ನು ನೋಡಿ ಅದು ಅಸಲಿಯೋ ನಕಲಿಯೋ (fake paneer) ಎಂದು ಹೇಳುವುದು ಸುಲಭವಲ್ಲ. ಆದರೆ ಅದನ್ನು ಸೇವಿಸಿದ ನಂತರ, ಪನ್ನೀರ್ ಕಲಬೆರಕೆ ಎಂದು ಅದರ ರುಚಿಯಿಂದ ತಿಳಿದುಕೊಳ್ಳಬಹುದು. ಹಾಗಿದ್ದರೆ ಅಸಲಿ ಪನ್ನೀರ್ ಅನ್ನು ಕಂಡುಹಿಡಿಯುವ ಬಗೆ ಹೇಗೆ?
ಇದನ್ನೂ ಓದಿ : Banana Hair Conditioner: ರೇಷ್ಮೆಯಂತಹ ಕೂದಲು ನಿಮ್ಮದಾಗಬೇಕೆ? ಬಾಳೆಹಣ್ಣಿನ ಹೇರ್ ಕಂಡಿಷನರ್ ಬಳಸಿ
ನಿಮ್ಮ ಕೈಯಲ್ಲಿ ಪನೀರ್ ತುಂಡನ್ನು ತೆಗೆದುಕೊಂಡು ಅದನ್ನು ಕೈಯಲ್ಲಿ ಉಜ್ಜಿ ನೋಡಿ. ಪನೀರ್ ಬೇರ್ಪಡಲು ಪ್ರಾರಂಭಿಸಿದರೆ, ಪನೀರ್ ನಕಲಿ ಎಂದರ್ಥ. ಏಕೆಂದರೆ ಅದರಲ್ಲಿರುವ ಕೆನೆರಹಿತ ಹಾಲಿನ (milk) ಪುಡಿ ಹೆಚ್ಚು ಒತ್ತಡವನ್ನು ಸಹಿಸುವುದಿಲ್ಲ. ಹಾಗಾಗಿ ಅದು ಬೇರ್ಪಡುತ್ತದೆ.
ಇನ್ನೊಂದು ವಿಧಾನ ಎಂದರೆ ಪನೀರ್ ಅನ್ನು ನೀರಿನಲ್ಲಿ (water) ಕುದಿಸಿ ಅದನ್ನು ತಣ್ಣಗಾಗಲು ಬಿಡಿ. ಈಗ ಅದರ ಮೇಲೆ ಕೆಲವು ಹನಿ ಅಯೋಡಿನ್ ಟಿಂಚರ್ ಹಾಕಿ. ಹೀಗೆ ಮಾಡಿದ ನಂತರ ಪನ್ನಿರ್ ನೀಲಿ ಬಣ್ಣಕ್ಕೆ ತಿರುಗಿದರೆ, ಅದು ಕಲಬೆರಕೆ ಎಂದರ್ಥ.
ಮೂರನೇ ವಿಧಾನ ಎಂದರೆ ಪನ್ನೀರ್ ಗಟ್ಟಿಯಾಗಿರುವುದಿಲ್ಲ. ಆದರೆ, ಕಲಬೆರಕೆ ಮಾಡಿದ ಪನೀರ್ ಬಿಗಿಯಾಗಿರುತ್ತದೆ ಮತ್ತು ತಿನ್ನುವಾಗ ರಬ್ಬರ್‌ನಂತೆ ಆಗುತ್ತದೆ.
ಇದನ್ನೂ ಓದಿ : Rainy Season Health Tips : ಮಳೆಗಾಲದಲ್ಲಿ ಎಷ್ಟು ಲೋಟ ನೀರು ಕುಡಿಬೇಕು? ಅದರ ಪ್ರಯೋಜನಗಳೇನು? ಇಲ್ಲಿದೆ ವೈದ್ಯರ ಸಲಹೆ
ಪನೀರ್ ಖರೀದಿಸುವಾಗ ಮತ್ತು ತಿನ್ನುವಾಗ, ಅದರ ಗುಣಮಟ್ಟವನ್ನು ಖಂಡಿತವಾಗಿ ಪರಿಗಣಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.