Benefits of soaked gram : ಈ ಐದು ಕಾರಣಕ್ಕಾಗಿ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಡಲೆ ಕಾಳು ತಿನ್ನಿ

Benefits of soaked gram :ನೆನೆಸಿದ ಕಡಲೆಕಾಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ನೆನೆಸಿದ ಕಡಲೆಕಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿಆಂಟಿ-ಆಕ್ಸಿಡೆಂಟ್‌ಗಳು ಮತ್ತು ಫೈಟೊ-ನ್ಯುಟ್ರೀಯೆಂಟ್ಸ್  ಇರುತ್ತದೆ. ಇದನ್ನು ಹೃದಯದ ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲಾಗುತ್ತದೆ. 

Written by - Ranjitha R K | Last Updated : Jul 8, 2021, 01:38 PM IST
  • ನೆನೆಸಿದ ಕಡಲೆಕಾಳು ಜೀರ್ಣಕ್ರಿಯೆಗೆ ಸಹಕಾರಿ
  • ಕಡಲೆಕಾಳು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ.
  • ನೆನೆಸಿದ ಕಡಲೆಕಾಳಿನಲ್ಲಿ ಕಬ್ಬಿಣದ ಅಂಶವು ಉತ್ತಮ ಪ್ರಮಾಣದಲ್ಲಿರುತ್ತದೆ.
Benefits of soaked gram : ಈ ಐದು ಕಾರಣಕ್ಕಾಗಿ ಖಾಲಿ ಹೊಟ್ಟೆಯಲ್ಲಿ ನೆನೆಸಿದ  ಕಡಲೆ ಕಾಳು ತಿನ್ನಿ  title=
ನೆನೆಸಿದ ಕಡಲೆಕಾಳು ಜೀರ್ಣಕ್ರಿಯೆಗೆ ಸಹಕಾರಿ (file photo)

ನವದೆಹಲಿ : Benefits of soaked gram : ನೆನೆಸಿದ ಕಡಲೆಕಾಳು ಆರೋಗ್ಯಕ್ಕೆ ಬಹಳ (Health benefits of Gram) ಪ್ರಯೋಜನಕಾರಿಯಾಗಿರುತ್ತದೆ. ಕಡಲೆ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ನೆನೆಸಿದ ಕಡಲೆಕಾಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಪ್ರತಿಯೊಂದು ಅಡುಗೆ ಮನೆಯಲ್ಲಿಯೂ ಕಡಲೆಕಾಳು ಸುಲಭವಾಗಿ ಲಭ್ಯವಿರುತ್ತದೆ. ನೆನೆಸಿದ ಕಡಲೆಕಾಳಿನಲ್ಲಿ (Soaked chickpeas) ಕಾರ್ಬೋಹೈಡ್ರೇಟಗಳು, ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಡಿ, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಅಪಾರ ಪ್ರಮಾಣದಲ್ಲಿರುತ್ತವೆ. ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ನೆನೆಸಿದ ಕಡಲೆಕಾಳು ಜೀರ್ಣಕ್ರಿಯೆಯನ್ನು (soaked gram for degestion) ಉತ್ತಮಗೊಳಿಸುತ್ತದೆ. ನೆನೆಸಿದ ಕಡಲೆಕಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿಆಂಟಿ-ಆಕ್ಸಿಡೆಂಟ್‌ಗಳು ಮತ್ತು ಫೈಟೊ-ನ್ಯುಟ್ರೀಯೆಂಟ್ಸ್  ಇರುತ್ತದೆ. ಇದನ್ನು ಹೃದಯದ ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲಾಗುತ್ತದೆ. 

ನೆನೆಸಿದ ಕಡಲೆಕಾಳು ತಿನ್ನುವುದರ ಪ್ರಯೋಜನಗಳು:

1. ತೂಕ ಇಳಿಸಲು : ಬೊಜ್ಜಿನ (fat) ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ಅಥವಾ ತೂಕ ಇಳಿಸಿಕೊಳ್ಳಲು ಬಯಸಿದರೆ,  ನೆನೆಸಿದ ಕಡಲೆಕಾಳು ನಿಮಗೆ ಅತ್ಯುತ್ತಮ ಆಯ್ಕೆ.  ಗ್ಲೈಸೆಮಿಕ್ ಇಂಡೆಕ್ಸ್ ಎಂಬ ಅಂಶವು ನೆನೆಸಿದ ಕಾಳಿನಲ್ಲಿ (Soaked gram) ಕಂಡುಬರುತ್ತದೆ. ಇದು ಹಸಿವನ್ನು ಕಡಿಮೆ ಮಾಡಲು ಮತ್ತು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Raisin Water With Lemon: ಒಣದ್ರಾಕ್ಷಿ ನೀರನ್ನು ನಿಂಬೆರಸ ಬೆರೆಸಿ ಸೇವಿಸಿದರೆ ಸಿಗುತ್ತೆ ಅದ್ಭುತ ಪ್ರಯೋಜನ

 2. ರಕ್ತಹೀನತೆಗೆ: 
ಕಬ್ಬಿಣದ ಕೊರತೆಯಿರುವ ಜನರಿಗೆ ನೆನೆಸಿದ ಕಡಲೆಕಾಳು ಸೇವನೆ ಬಹಳ ಪ್ರಯೋಜನ ನೀಡುತ್ತದೆ. ನೆನೆಸಿದ ಕಡಲೆಕಾಳಿನಲ್ಲಿ ಕಬ್ಬಿಣವು ಉತ್ತಮ ಪ್ರಮಾಣದಲ್ಲಿರುತ್ತದೆ.  ಇದು ರಕ್ತಹೀನತೆಯನ್ನು (anemia) ತಡೆಯುತ್ತದೆ. 

3.  ಕಣ್ಣಿನ ಆರೋಗ್ಯಕ್ಕಾಗಿ: 
ನೆನೆಸಿದ ಕಡಲೆಕಾಳು ಕಣ್ಣುಗಳನ್ನು ಆರೋಗ್ಯವಾಗಿಡಲು (good for eye health) ಸಹಾಯ ಮಾಡುತ್ತದೆ. ವಾಸ್ತವವಾಗಿ, ಬಿ-ಕ್ಯಾರೋಟಿನ್ ಅಂಶವು ನೆನೆಸಿದ ಕಡಲೆಕಾಳಿನಲ್ಲಿ ಕಂಡುಬರುತ್ತದೆ.  ಇದು ಕಣ್ಣುಗಳ ಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. 

4. ಹೃದಯದ ಆರೋಗ್ಯಕ್ಕಾಗಿ: 
ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಬೆಳಿಗ್ಗೆ ನೆನೆಸಿದ ಕಡಲೆಕಾಳು  ಸೇವಿಸುವುದರಿಂದ ಹೃದಯವು (soaked gram for healthy heart) ಆರೋಗ್ಯವಾಗಿರುತ್ತದೆ. ನೆನೆಸಿದ ಕಡಲೆ ಬಹಳಷ್ಟು ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳನ್ನು ಒಳಗೊಂಡಿರುತ್ತದೆ, ಅದು ನಿಮ್ಮ ರಕ್ತನಾಳಗಳನ್ನು ಆರೋಗ್ಯವಾಗಿಡಲು,  ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : Curd Raisin Recipe : ಪುರುಷರ ಈ ಸಮಸ್ಯೆಗೆ ಸೇವಿಸಿ ಮೊಸರು-ಒಣದ್ರಾಕ್ಷಿ : ಇದರಿಂದ ನಿಮಗಿದೆ ಅದ್ಭುತ ಲಾಭ!

5.ಜೀರ್ಣಾಂಗ ವ್ಯವಸ್ಥೆಗೆ: 
ಜೀರ್ಣಕ್ರಿಯೆಯ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ನೆನೆಸಿದ ಕಡಲೆಕಾಳು ತಿನ್ನಬೇಕು. ನೆನೆಸಿದ ಕಡಲೆಯಲ್ಲಿ ಫೈಬರ್  (fiber) ಅಂಶ  ಸಮೃದ್ಧವಾಗಿರುತ್ತದೆ.  ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಮತ್ತು ಹೊಟ್ಟೆಯನ್ನು ಸ್ವಚ್ಛವಾಗಿಡಲು  ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News