ನವದೆಹಲಿ: ಪ್ರಸ್ತುತ ದಿನಮಾನಗಳಲ್ಲಿ ನಮ್ಮ ಅಡುಗೆ ಮನೆಯಮಸಾಲೆ ಡಬ್ಬಿಯಿಂದ ನಿಧಾನವಾಗಿ ಅನೇಕ ಮಸಾಲೆ  ಪದಾರ್ಥಗಳು ಕಣ್ಮರೆಯಾಗುತ್ತಿವೆ. ಅದರ ಜೊತೆಗೆ ಅವುಗಳಿಂದ ನಮ್ಮ ಆರೋಗ್ಯಕ್ಕೆ ಆಗಬೇಕಿದ್ದ ಅನೇಕ ಲಾಭಗಳು ಕೂಡ ಮರೆಯಾಗುತ್ತಿವೆ. ಮನೆಯಲ್ಲಿ ನೀವು ನೂರಾರು ಮಸಾಲೆ ಪದಾರ್ಥಗಳನ್ನಕಾಣಬಹುದು. ಅಂತಹ ಮಸಾಲೆಗಳಲ್ಲಿ 'ಹರಾದ್'(ಕರಕ ಕಾಯಿ) ಕೂಡ ಒಂದು. ಇದನ್ನು ಹರಾದ್, ಕಡುಕ್ಕೈ, ಕರಕಕಾಯ, ಕಡುಕ್ಕಾ ಪೋಡಿ, ಹರ್ರಾ ಅಥವಾ ಹ್ಯಾರೆ ಎಂದು ಕರೆಯಲಾಗುತ್ತದೆ. ಕನ್ನಡದಲ್ಲಿ ಇದಕ್ಕೆ 'ಕರಕ ಕಾಯಿ' ಎಂದು ಕರೆಯುತ್ತಾರೆ. ಇದರ ಸೇವನೆಯಿಂದ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ವಿವಿಧ ರೀತಿಯ ಪ್ರಯೋಜನಗಳನ್ನು ಸಹ ನೀಡುತ್ತದೆ. 


COMMERCIAL BREAK
SCROLL TO CONTINUE READING

1. ಲೈಂಗಿಕ ಸಮಸ್ಯೆಗಳಿಗೆ ಪರಿಣಾಮಕಾರಿ 'ಕರಕ ಕಾಯಿ': 'ಕರಕ ಕಾಯಿ' ಅನ್ನು ಲೈಂಗಿಕ ಸಮಸ್ಯೆಗಳನ್ನ ದೂರ ಮಾಡಲು ಬಳಸಲಾಗುತ್ತದೆ. ಮಾಹಿತಿಯ ಪ್ರಕಾರ, 'ಕರಕ ಕಾಯಿ'(Myrobalan)ಯನ್ನ ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ, ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಅನೇಕ ರೀತಿಯ ಅನಾನುಕೂಲತೆಗಳಿವೆ. ಪ್ರತಿದಿನ 1 ಗ್ರಾಂ ಗಿಂತ ಹೆಚ್ಚು  ಕರಕ ಕಾಯಿಯನ್ನ ಸೇವಿಸಬೇಡಿ.


ಇದನ್ನೂ ಓದಿ : ಮಕ್ಕಳನ್ನು Corona ಸೋಂಕಿನಿಂದ ರಕ್ಷಿಸುವ ಐದು Super Food


2. ಮೂಲವ್ಯಾಧಿಗೆ ರಾಮಬಾಣ ಕರಕ ಕಾಯಿ : ಕಾಯೊಲೆಗಲ್ಲಿ ಮೂಲವ್ಯಾಧಿ(piles problem) ಕೂಡ ಒಂದು ಕಾಯಿಲೆಯಾಗಿದ್ದು, ಇದಕ್ಕಾಗಿ ಜನರು ಹೆಚ್ಚಾಗಿ ಮನೆಮದ್ದುಗಳನ್ನು ಸೇವಿಸುತ್ತಾರೆ. ಈ ಸಂದರ್ಭದಲ್ಲಿ ಕರಕ ಕಾಯಿ ಬಳಕೆಯು ತುಂಬಾ ಪ್ರಯೋಜನಕಾರಿ ಎಂದು ಹೇಳಬಹುದು. ಮೂಲವ್ಯಾಧಿ ರೋಗಿಗಳು ಕರಕ ಕಾಯಿಯನ್ನ ಬಿಸಿನೀರಿನಲ್ಲಿ ಹಾಕಿ ಕುದಿಸಿ ನಂತರ ಅದನ್ನು ಸೋಸಿ ಕುಡಿಯುತ್ತಿದ್ದರೆ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.


ಇದನ್ನೂ ಓದಿ : ಬೇಸಿಗೆಯಲ್ಲಿ ಲೆಮನ್ ಟೀ ಯಾಕೆ ಕುಡಿಯಬೇಕು..? ಇಲ್ಲಿದೆ 4 ಕಾರಣ.!


3. ವಾಂತಿ ನಿವಾರಿಸಲು ಕರಕ ಕಾಯಿ: ನೀವು ವಾಕರಿಕೆ ಸಮಸ್ಯೆಗಳಿಂದ ಬಾಳುತ್ತಿದ್ದಾರೆ, ಕರಕ ಕಾಯಿ ಸೇವನೆಯು ಪ್ರಯೋಜನಕಾರಿಯಾಗಿದೆ.  ವಾಂತಿ(Wamit) ನಿವಾರಿಸಲು ಕರಕ ಕಾಯಿ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸಬಹುದು. ಇದನ್ನು ಮಾಡುವುದರಿಂದ ವಾಂತಿ ತಡೆಯಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : Lady Finger Benefits: ಬೇಸಿಗೆಯಲ್ಲಿ ಆರೋಗ್ಯಕ್ಕೆ ಒಳ್ಳೆಯದು ಬೆಂಡೆಕಾಯಿ..!


4. ಅಜೀರ್ಣ ಸಮಸ್ಯೆ ನಿವಾರಣಗೆ ಕರಕ ಕಾಯಿ: ಜೀರ್ಣಕ್ರಿಯೆಯನ್ನು ಸುಧಾರಿಸಲು ಕರಕ ಕಾಯಿ ಅನ್ನು ಬಳಸಬಹುದಾಗಿದೆ. ಪ್ರತಿದಿನ ಬೆಳಿಗ್ಗೆ ಅರ್ಧ ಕಪ್ ನೀರಿನಲ್ಲಿ ಕರಕ ಕಾಯಿ ಪುಡಿ ಹಾಕಿಕೊಂಡು  ಕುಡಿಯುವುದರಿಂದ ಅಜೀರ್ಣ ಸಮಸ್ಯೆಯಿಂದ ದೂರವಿರಬಹುದು.


ಇದನ್ನೂ ಓದಿ : Water-Ajwain Water Benefits: ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ಮತ್ತು ಅಜೀವಾನದ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ?


5. ಮಧುಮೇಹಕ್ಕೆ ಪರಿಣಾಮಕಾರಿ ಕರಕ ಕಾಯಿ : ಕರಕ ಕಾಯಿ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರೋಗಗಳ ವಿರುದ್ಧ ಹೋರಾಡಲು ಇದು ದೇಹಕ್ಕೆ ಸಹಾಯ ಮಾಡುತ್ತದೆ. ಇದಲ್ಲದೆ, ಕರಕ ಕಾಯಿ ಸೇವನೆಯಿಂದ ಮತ್ತೊಂದು ಪ್ರಯೋಜನವಿದೆ. ಇದು ಮಧುಮೇಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳು ಜೇನುತುಪ್ಪದೊಂದಿಗೆ ಬೆರೆಸಿದ ಒಂದು ಟೀ ಸ್ಪೂನ್ ಕರಕ ಕಾಯಿ ಪುಡಿಯನ್ನು ಸೇವಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.